ಚಿಕ್ಕಮಗಳೂರು: ಹೊಸ ವರ್ಷದ (New Year 2026) ಆಚರಣೆಗೆ ಕಾಫಿನಾಡು (Chikkamagaluru) ಪ್ರವಾಸಿಗರಿಂದ (Tourists) ತುಂಬಿ ತುಳುಕುತ್ತಿದೆ. ವರ್ಷದ ಕೊನೆ ವೀಕ್ ಎಂಡ್‌ನಲ್ಲಿ ಕಾಫಿನಾಡ ದಶದಿಕ್ಕುಗಳ ಸೌಂದರ್ಯ ಸವಿಯುತ್ತಿರೋ ಪ್ರವಾಸಿಗರು ಕಾಫಿನಾಡಲ್ಲೇ ಹೊಸ ವರ್ಷಕ್ಕೆ ವೆಲ್ ಕಂ ಹೇಳೋದಕ್ಕೆ ಕಾತುರದಿಂದ ಕಾಯ್ತಿದ್ದಾರೆ. ಇನ್ನು ಹೊಸ ವರ್ಷಕ್ಕೆ ಮೂರ್ನಾಲ್ಕು ದಿನ ಇರುವಾಗಲೇ ಕಾಫಿನಾಡು ಸೇರಿರೋ ಪ್ರವಾಸಿಗರು ಹೊಸ ವರ್ಷದ ಆಚರಣೆಗೆ ಪ್ಲ್ಯಾನ್ ಕೂಡ ಮಾಡ್ತಿದ್ದಾರೆ. ಈಗಾಗಲೇ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ಹೋಟೆಲ್‍ನ ಬುಕ್ ಮಾಡಿದ್ರೆ ಓಕೆ. ಹೋಗಿ ನೋಡೋಣ, ಮಾಡೋಣ, ಹುಡುಕೋಣ ಅನ್ನೋರಿದ್ರೆ ಬರೋಕೆ ಹೋಗ್ಬೇಡಿ..!
ಶನಿವಾರ, ಭಾನುವಾರ ವೀಕೆಂಡ್. ಬುಧವಾರ ಹೊಸ ವರ್ಷ. ಸೋಮವಾರ-ಮಂಗಳವಾರ ಅದಕ್ಕಾಗಿ ಸಿದ್ಧತೆ. ಪ್ರಕೃತಿಯ ಸೂರಿನಡಿ ಕಾಫಿನಾಡ ಸೌಂದರ್ಯ ಸವಿಯುತ್ತ ಹೊಸ ವರ್ಷಕ್ಕೆ ವೆಲ್‍ಕಂ ಹೇಳೋದಕ್ಕೆ ಲಕ್ಷಾಂತರ ಪ್ರವಾಸಿಗ್ರು ಕಾತರದಿಂದಿದ್ದಾರೆ. ಈ ವರ್ಷದ ಮಹಾಮಳೆಯ ಮಧ್ಯೆಯೂ ಕಾಫಿನಾಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಸೀತಾಳಯ್ಯನಗಿರಿ, ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿದಂತೆ ಪ್ರಮುಖ ಗಿರಿಶಿಖರಗಳಲ್ಲಿ ಪ್ರವಾಸಿಗರು ಬುಧವಾರದ ರಾತ್ರಿಗಾಗಿ ಹಾತೊರೆಯುತ್ತಿದ್ದಾರೆ. ಅಪರೂಪದ ಪ್ರಕೃತಿ ಸೌಂದರ್ಯ ಕಂಡು ಮಲೆನಾಡ ಮಡಿಲಲ್ಲಿ ಮೈಮರೆಯುತ್ತಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಹಾದು ಹೋಗುವ ಮೋಡಗಳ ಕಣ್ಣಾಮುಚ್ಚಾಲೆ ಕಂಡು ಪುಳಕಿತರಾಗ್ತಿದ್ದು, ಶನಿವಾರ-ಭಾನುವಾರ ಶಾರದಾಂಭೆ ಹಾಗೂ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು, ಸೋಮವಾರ-ಮಂಗಳವಾರ ಹೊಸ ವರ್ಷದ ಆಚರಣೆಗೆ ಸಿದ್ಧತೆ ಮಾಡ್ಕೊಂಡು ಬುಧವಾರ ರಾತ್ರಿಯಾಗೋದನ್ನೇ ಎದುರು ನೋಡ್ತಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ದಿನಗಣನೆ ಬೆನ್ನಲ್ಲೇ ಡ್ರಂಕ್ & ಡ್ರೈವ್ ತಪಾಸಣೆ ಜೋರು – 1500ಕ್ಕೂ ಹೆಚ್ಚು ಕೇಸ್ ದಾಖಲು
ಕಾಂಕ್ರೀಟ್ ಕಾಡಿನ ಮಧ್ಯೆ ವಾಯು ಹಾಗೂ ಶಬ್ಧ ಮಾಲಿನ್ಯದಿಂದ ಕಳೆದು ಹೋಗಿದ್ದ ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಕಾಫಿನಾಡು ವಿಶಿಷ್ಟ ಅನುಭವ ನೀಡ್ತಿದೆ. ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗೋ ಪ್ರಕೃತಿಯ ವಿಸ್ಮಯ ಕಂಡು ಪ್ರವಾಸಿಗ್ರು ಮೈಮರೆಯುತ್ತಿದ್ದಾರೆ. ಆದ್ರೆ, ಪ್ರವಾಸಿಗರ ದಂಡನ್ನ ಕಂಡ ಕೆಲ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಪ್ರವಾಸಿಗರಿಂದ ದುಬಾರಿ ಹಣ ಕೇಳ್ತಿರೋದು ಉಂಟು. ಆಯ್ತು ಕೊಡ್ತೀವಿ. ಮೊದ್ಲು ರೂಂ ಕೊಡಿ ಎಂದು ಸಹ ಪ್ರವಾಸಿಗರು ಒಪ್ಪಿಕೊಳ್ಳುತ್ತಿದ್ದಾರೆ. ಈ ಮಟ್ಟದ ಪ್ರವಾಸಿಗರಿರೋದ್ರಿಂದ ವಾಹನಗಳನ್ನ ಕಂಟ್ರೋಲ್ ಮಾಡೋದಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನು ಹೋಂಸ್ಟೇ, ರೆಸಾರ್ಟ್ ಮಾಲೀಕರು ಕೂಡ ಬಗೆಬಗೆಯ ಭೋಜನ, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬೇಡಿಕೆಯನ್ನ ಈಡೇರಿಸೋದಕ್ಕೆ ಸನ್ನದ್ಧರಾಗಿದ್ರೆ, ಪರಿಸರವಾದಿಗಳು ಬರೋ ಪ್ರವಾಸಿಗ್ರು ಈ ಸೌಂದರ್ಯವನ್ನ ಹಾಗೇ ಉಳಿಸಲಿ. ಅದಕ್ಕೆ ಜಿಲ್ಲಾಡಳಿತ ಸೂಕ್ತ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಹೊಸ ವರ್ಷ ವಾರದ ಮಧ್ಯದಲ್ಲಿ ಬಂದಿರೋದು ಪ್ರವಾಸಿಗರು ಹಾಗೂ ಯುವಜನತೆಗೆ ಒಂಚೂರು ಬೇಜಾರು ತರಿಸಿದೆ. ಆದ್ರೆ, ಕೆಲ ಪ್ರವಾಸಿಗರು ಇಡೀ ವಾರ ಕಾಪಿನಾಡಲ್ಲೇ ಉಳಿಯೋದಕ್ಕೂ ಕೂಡ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ನರೇಗಾ ರದ್ದತಿ ವಿರುದ್ಧ ದೇಶದ್ಯಾಂತ ಹೋರಾಟಕ್ಕೆ ಕಾಂಗ್ರೆಸ್ ತೀರ್ಮಾನ


