ಬೀಜಿಂಗ್: ಚೀನಾದ ಹುವಾಕ್ಸಿ ವಲ್ರ್ಡ್ ಅಡ್ವೆಂಚರ್ ಪಾರ್ಕ್ ನಲ್ಲಿ ಜಗತ್ತಿನ ಅತಿ ಉದ್ದದ ಗಾಜಿನ ಸೇತುವೆ ಉದ್ಘಾಟನೆಗೊಂಡಿದೆ. ಆದರೆ ಈ ಸೇತುವೆ ಮೇಲೆ ನಡೆಯಲು ನಿಜಕ್ಕೂ ಗಟ್ಟಿ ಗುಂಡಿಗೆ ಇರಲೇಬೇಕು.
ಹೌದು. ಹುವಾಕ್ಸಿ ವಲ್ರ್ಡ್ ಅಡ್ವೆಂಚರ್ ಪಾರ್ಕ್ ನಲ್ಲಿ ಗಾಜಿನ ಸೇತುವೆ ಮೇಲೆ ನಡೆಯುವವರಿಗೆ ಕಾಲಿನ ಅಡಿಯಲ್ಲೇ ಪ್ರಪಾತ ಕಾಣಿಸುತ್ತದೆ. ಈ ಸೇತುವೆ ಗಾಜಿನಿಂದ ನಿರ್ಮಿತವಾಗಿದ್ದು, ಇದರ ಮೇಲೆ ನಡೆಯಲು ನಿಜಕ್ಕೂ ಗಟ್ಟಿ ಗುಂಡಿಗೆ ಇರಬೇಕು. ಯಾಕೆಂದರೆ ಇದರ ಮೇಲೆ ಹೋಗುವಾಗ ಯಾವಾಗ ಗಾಜು ಒಡೆಯುತ್ತದೋ ಎಂದು ಹೆದರಿ ಸಾಗುವ ಮಂದಿಯೇ ಹೆಚ್ಚು. ಈ ಸೇತುವೆ ಮೇಲೆ ಹೋಗುವುದೆಂದರೇ ಒಂದು ರೀತಿ ಸಾಹಸ ಎಂದರೆ ತಪ್ಪಾಗಲ್ಲ.
Advertisement
Advertisement
ಭೂಮಿಯಿಂದ ಸುಮಾರು 100 ಮೀಟರ್ ಎತ್ತರದಲ್ಲಿ ಬರೋಬ್ಬರಿ 518 ಮೀಟರ್ ಉದ್ದದ ಈ ಗ್ಲಾಸ್ ಬ್ರಿಡ್ಜ್ ನಿರ್ಮಿಸಲಾಗಿದೆ. ಇದಕ್ಕೆ 3.5 ಸೆಂ.ಮೀ. ದಪ್ಪದ ಗಾಜು ಬಳಸಲಾಗಿದ್ದು, 4.7 ಟನ್‍ಗಳಷ್ಟು ತೂಕವನ್ನು ತಡೆಯಬಲ್ಲ ಸಾಮಥ್ರ್ಯವನ್ನು ಸೇತುವೆ ಹೊಂದಿದೆ. ಅಲ್ಲದೆ ಸೇತುವೆ ಮೇಲೆ ಒಮ್ಮೆಗೆ 2,600 ಮಂದಿ ನಿಲ್ಲಬಹುದು.
Advertisement
Advertisement
ಈ ಸೇತುವೆಯ ಇನ್ನೊಂದು ವಿಶೇಷತೆ ಏನೆಂದರೆ, ಇದಕ್ಕೆ ಅಳವಡಿಸಿರುವ ವಿಶೇಷ ಸೌಂಡ್ ಹಾಗೂ ವಿಶ್ಯುವಲ್ ಎಫೆಕ್ಟ್. ಹೌದು. ಈ ಸೇತುವೆ ಮೇಲೆ ನಡೆಯುತ್ತಿದ್ದಾಗ ಗಾಜು ಒಡೆಯುತ್ತಿರುವ ಹಾಗೆ, ಬಿರುಕು ಬಿಡುವ ಹಾಗೆ ವಿಶ್ಯುವಲ್ ಎಫೆಕ್ಟ್ ಕಾಣಸಿಗುತ್ತದೆ. ಅದಕ್ಕೆ ತಕ್ಕಂತೆ ಗಾಜು ಒಡೆಯುತ್ತಿರುವ ಸದ್ದನ್ನು ಕೂಡ ಹಾಕಲಾಗಿದೆ. ಹೀಗಾಗಿ ಮೊದಲೇ ಗಾಜಿನ ಮೇಲೆ ನಡೆಯಲು ಹೆದರುವ ಮಂದಿಗೆ ಈ ಎಫೆಕ್ಟ್‍ಗಳು ಒಂದು ಕ್ಷಣ ಮೈ ಝಲ್ ಎನಿಸುವಂತೆ ಮಾಡುತ್ತದೆ.
ಇತ್ತೀಚಿಗಷ್ಟೇ ಈ ಅದ್ಬುತ ಗಾಜಿನ ಸೇತುವೆಯ ಏರಿಯಲ್ ವಿಡಿಯೋ ಒಂದನ್ನು ಮಾಡಲಾಗಿದೆ. ಈ ವಿಡಿಯೋದಲ್ಲಿ ಕೆಲವರು ವಿಶೇಷ ಸೇತುವೆಯ ಸುಂದರ ಪಯಣವನ್ನು ಆನಂದಿಸುತ್ತ ಸಾಗುತ್ತಿದ್ದರೆ, ಇನ್ನೂ ಕೆಲವರು ಎಲ್ಲಿ ಗಾಜು ಒಡೆದು ಅನಾಹುತವಾಗುತ್ತೋ ಎಂದು ಭಯದಿಂದ ಸಾಗುತ್ತಿರುವ ದೃಶ್ಯಗಳು ಸೆರೆಯಾಗಿದೆ. ಮನಮೋಹಕ ನಿಸರ್ಗ ಸೌಂದರ್ಯದ ನಡುವೆ ಈ ಗಾಜಿನ ಸೇತುವೆ ಮೇಲೆ ನಡೆಯುವ ಖುಷಿಯೇ ಬೇರೆ ಎಂದು ಇಲ್ಲಿಗೆ ಬರುವ ಪ್ರವಾಸಿಗರು ಹೇಳುತ್ತಾರೆ.