-ಇಯರ್ ಎಂಡ್‍ಗೆ ಕೊಡಗಿನಲ್ಲಿ ಪ್ರವಾಸಿಗರ ದಂಡು
ಮಡಿಕೇರಿ: ವರ್ಷಾಂತ್ಯ, ಹೊಸ ವರ್ಷ, ರಜೆಗಳ ಮೇಲೆ ರಜೆ ಇರುವುದರಿಂದ ಪ್ರವಾಸಿಗರ ಸ್ವರ್ಗ ಕೊಡಗಿನತ್ತ ಟೂರಿಸ್ಟ್ ದಂಡೇ ಹರಿದು ಬರುತ್ತಿದೆ. ಮೂರು ನಾಲ್ಕು ತಿಂಗಳ ಕಾಲ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಪ್ರವಾಸಿಗರು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಇದೀಗ ಹಿಂದಿನ ದಿನಗಳು ಮತ್ತೆ ಬರುವ ಹಾಗೆ ಜನರು ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಕೊಡಗು ಜಿಲ್ಲೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಅದರಲ್ಲೂ ಜಿಲ್ಲೆಯ ಹಚ್ಚ ಹರಿಸಿನ ನಡುವೆ ಹಾಲ್ನೊರೆ ಸೂಸುತ್ತಾ ಜುಳು ಜುಳು ಹರಿಯುವ ಜಲಧಾರೆಯ ಸೌಂದರ್ಯಕ್ಕೆ ಸರಿಸಾಟಿಯಿಲ್ಲ. ಅಂತಹ ಜಲಧಾರೆಯ ಕೆಳಗೆ ನಿಂತು ಎಂಜಾಯ್ ಮಾಡುವುದು ಎಲ್ಲರ ಆಸೆ ಆಗಿರುತ್ತಾರೆ. ವರ್ಷಾಂತ್ಯ ಅಂತ ಸ್ಪೆಷಲ್ ಲೊಕೇಶನ್‍ನಲ್ಲಿ ಇಲ್ಲಿಗೆ ಭೇಟಿ ಕೊಟ್ಟರೆ ಅದರ ಮಜಾವೇ ಬೇರೆ ಇರುತ್ತದೆ. ಸದ್ಯ ಇಯರ್ ಎಂಡ್ ಸೀಜನ್, ಕೊಡಗಿನ ಸೌಂದರ್ಯ ಲೋಕಕ್ಕೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುದ್ದಾರೆ. ಅದರಲ್ಲೂ ಇರ್ಪು ಫಾಲ್ಸ್ ನಲ್ಲಂತೂ ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
Advertisement
Advertisement
ಮಡಿಕೇರಿಯಿಂದ 60 ಕಿ.ಮೀ ದೂರದಲ್ಲಿರೋ ಬ್ರಹ್ಮಗಿರಿತಪ್ಪಲಿನ ನಡುವಿನಿಂದ ಧುಮ್ಮಿಕ್ಕುವ ಇರ್ಪು ಫಾಲ್ಸ್ ಸೌಂದರ್ಯವನ್ನು ಎಷ್ಟು ಹೇಳಿದರೂ ಮುಗಿಯಲ್ಲ. ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ಫಾಲ್ಸ್ ನೋಡಲು ಎಷ್ಟು ಚೆಂದವು ಈ ರುದ್ರ ರಮಣೀಯ ತಾಣ ಇರ್ಪು ಫಾಲ್ಸ್ ಅಷ್ಟೇ ಅಪಾಯವಾಗಿದೆ. ಆದರೆ ಈಗ ಮಳೆಯ ಆರ್ಭಟ ಇಲ್ಲ. ಫಾಲ್ಸ್ ನೀರು ಕೊಂಚ ಕಡಿಮೆ ಆಗಿದೆ. ಪರಿಣಾಮ ಫಾಲ್ಸ್ ನ ತಳಭಾಗಕ್ಕೆ ಹೋಗಿ ಫಾಲ್ಸ್ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡಬಹುದು. ಅದಕ್ಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.
Advertisement
Advertisement
ಇರ್ಪು ಫಾಲ್ಸ್ ಸದ್ಯ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ದಿನ ನಿತ್ಯ ಸಹಸ್ರ ಸಂಖ್ಯೆಯ ಪ್ರವಾಸಿಗರು ಬಂದು ಹಚ್ಚ ಹಸಿರ ನಿಸರ್ಗದ ಮಡಿಲಲ್ಲಿ ಇರ್ಪುವಿನ ಸಿಂಚನಕ್ಕೆ ಮೈಯೊಡ್ಡಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸಿಗರು ಕೊಡಗಿನ ಫಾಲ್ಸ್ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
https://www.youtube.com/watch?v=XtVggfQfhZw&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv