ಮಡಿಕೇರಿ: ರಜೆ ಎಂದರೆ ಕೊಡಗಿನ ಪ್ರವಾಸಿ ತಾಣಗಳು ರಂಗೇರುತ್ತವೆ. ಹಚ್ಚಹಸಿರ ಸಿರಿಯ ಬೆಟ್ಟಗುಡ್ಡಗಳ ತಪ್ಪಲಿನ ಕಾಫಿನಾಡಲ್ಲಿ ವಿಹರಿಸೋಕೆ ದೇಶದ ನಾನಾ ಭಾಗಗಳಿಂದ ಪ್ರಕೃತಿಯ ಮಡಿಲಿಗೆ ಲಗ್ಗೆಯಿಡುವ ಪ್ರವಾಸಿಗರು ದಕ್ಷಿಣದ ಕಾಶ್ಮೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಇಂದು ಮಕರ ಸಂಕ್ರಾಂತಿ ಹಬ್ಬದ ರಜೆ ಇರುವುದರಿಂದ ಮಂಗಳವಾರದಿಂದ ಕೊಡಗಿನತ್ತ ಬರುವ ಪ್ರವಾಸಿಗರ ಸಂಖ್ಯೆ ಜೋರಾಗಿದ್ದು, ಇಡೀ ಮಂಜಿನ ನಗರಿ ಪ್ರವಾಸಿಗರಿಂದ ತುಂಬಿ ಹೋಗಿದೆ. ರಾಜಾಸೀಟ್ ಅಬ್ಬೆ ಫಾಲ್ಸ್ ಗೆ ಲಗ್ಗೆಯಿಟ್ಟಿದ್ದ ಪ್ರವಾಸಿಗರು ತಂಪಾದ ಗಾಳಿಯಲ್ಲಿ ವಿಹರಿಸುತ್ತಾ ರಜೆಯ ಮಜಾ ಅನುಭವಿಸುತ್ತಿದ್ದಾರೆ.
Advertisement
Advertisement
ಸಾಮಾನ್ಯವಾಗಿ ವೀಕೆಂಡ್‍ಗಳಲ್ಲಿ ಅತಿ ಹೆಚ್ಚು ಪ್ರವಾಸಿಗರಿಂದ ಗಿಜಿಗುಡುವ ರಾಜಾಸೀಟ್ ಅಬ್ಬೆ ಫಾಲ್ಸ್, ದುಬಾರೆ ಪ್ರವಾಸಿತಾಣಗಳಲ್ಲಿ ಪ್ರವಾಸಿಗರು ಬಂಧು-ಮಿತ್ರರು ಮನೆಗೆ ಹಬ್ಬದ ವಿಶೇಷವಾಗಿ ಬಂದಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಜನ ಜಾತ್ರೆ ಕಂಡುಬರುತ್ತಿದೆ.
Advertisement
ರಜೆ ಎಂದರೆ ಕಾಫಿನಾಡಿನತ್ತ ಲಗ್ಗೆಯಿಡುವ ಪ್ರವಾಸಿಗರು ದಕ್ಷಿಣ ಕಾಶ್ಮೀರದ ಸೊಬಗನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಾರೆ. ಅದ್ರಲ್ಲೂ ಸ್ನೇಹಿತರು, ಫ್ಯಾಮಿಲಿಗಳೊಂದಿಗೆ ತಂಡೋಪತಂಡವಾಗಿ ಕೊಡಗಿಗೆ ಬರುವ ಟೂರಿಸ್ಟ್‍ಗಳು ಪ್ರಕೃತಿಯ ಮಡಿಲಲ್ಲಿ ವಿಹರಿಸುತ್ತಾ ಹಸಿರ ಸಿರಿಯನ್ನು ಸವಿಯುತ್ತಾ ಸುಂದರ ನೆನಪುಗಳೊಂದಿಗೆ ವಾಪಸ್ಸಾಗುತ್ತಾರೆ.