ಚಿಕ್ಕಮಗಳೂರು: ರಣಬಿಸಿಲ ಮಧ್ಯೆಯೂ ದೇಶಾದ್ಯಂತ ಚುನಾವಣ ಕಾವು ಜೋರಾಗಿಯೇ ಇದೆ. ಆದ್ರೆ, ಚುನಾವಣೆ ಅನ್ನೋದು ಗೊತ್ತಿಲ್ಲದೆ ರಜೆ ಸಿಕ್ಕಿದೆ ಎಂದು ಪ್ರವಾಸಕ್ಕೆ ಬಂದವರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವ್ಯಂಗ್ಯ ಸನ್ಮಾನ ಮಾಡಿ ಮತದಾನದ ಅರಿವು ಮೂಡಿಸಿದ್ದಾರೆ.
Advertisement
ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಚಿಕ್ಕಮಗಳೂರಿಗೆ ಬರುತ್ತಿರೋ ಪ್ರವಾಸಿಗರ ವಾಹನಗಳನ್ನ ಮಾಗಡಿ ಹ್ಯಾಂಡ್‍ಪೋಸ್ಟ್ ಬಳಿ ಅಡ್ಡಗಟ್ಟಿ ಸುಮಾರು 800-1000 ಜನರನ್ನ ಮತದಾನ ಮಾಡಿರೋ ಬಗ್ಗೆ ಕೈ ಬೆರಳು ನೋಡಿದಾಗ ಬಹುತೇಕರು ಮತದಾನವನ್ನೇ ಮಾಡಿಲ್ಲ. ಎಷ್ಟೋ ಜನಕ್ಕೆ ಇಂದು ಮತದಾನ ಅನ್ನೋದೇ ಗೊತ್ತಿಲ್ಲ. ಹೀಗೆ ಪ್ರವಾಸಕ್ಕೆ ಬಂದವರಲ್ಲಿ ವಿದ್ಯಾವಂತರು ಹಾಗೂ ಐಟಿ-ಬಿಟಿಯ ಇಂಜಿನಿಯರ್ ಗಳೇ ಹೆಚ್ಚಿದ್ದರು. ಹೀಗಾಗಿ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವ್ಯಂಗ್ಯ ಸನ್ಮಾನ ಮಾಡಿ ಮತದಾನ ಜಾಗೃತಿ ಮೂಡಿಸಿದ್ದಾರೆ.
Advertisement
Advertisement
ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್ ಎಂದು ಸರ್ಕಾರದ ಎಲ್ಲಾ ಸೌಲಭ್ಯ ಪಡೆದುಕೊಳ್ಳೋ ಯುವಜನತೆ ಮತದಾನಕ್ಕೆ ಮಾತ್ರ ಹಿಂದೇಟು ಹಾಕಿ ಮೋಜು-ಮಸ್ತಿಗಾಗಿ ಊರೂರು ಸುತ್ತುತ್ತಿದ್ದಾರೆ. ಸೌಲಭ್ಯ ಮಾತ್ರ ಬೇಕು ಅನ್ನೋ ಪ್ರವಾಸಿಗರಿಗೆ ನಡುರಸ್ತೆಯಲ್ಲಿ ಎಲ್ಲಾ ರೀತಿಯ ಕಾರ್ಡ್ ಗಳ ಜೆರಾಕ್ಸ್ ಪ್ರತಿಗಳ ಹಾರ ಹಾಕಿ, ಶಾಲು ಹೊದಿಸಿ ವ್ಯಂಗ್ಯ ಸನ್ಮಾನ ಮಾಡುವ ಮೂಲಕ ಮತದಾನದ ಬಗ್ಗೆ ಅರಿವು ಹಾಗೂ ಅದರ ಮಹತ್ವವನ್ನು ತಿಳಿಸಲಾಗಿದೆ.