ಜೊಹಾನ್ಸ್ ಬರ್ಗ್: ಸಫಾರಿ ವೇಳೆ ಮಾರ್ಗ ಮಧ್ಯೆ ಅಡ್ಡ ಬಂದ ಸಿಂಹವನ್ನು ಪ್ರವಾಸಿಗರು ಮುಟ್ಟುತ್ತಿರುವ ಘಟನೆ ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಸಫಾರಿ ವೇಳೆ ಸಿಂಹವನ್ನು ಮುಟ್ಟುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
Advertisement
ಪ್ರವಾಸಿಗರ ಸಫಾರಿ ವೇಳೆ ಸಿಂಹಗಳ ಗುಂಪೊಂದು ಮಾರ್ಗಮಧ್ಯೆ ಬಂದಿದೆ. ಈ ವೇಳೆ ಸಿಂಹಗಳು ವಾಹನಗಳ ಸುತ್ತ ಸುತ್ತುವರಿಯುತ್ತಿರುವಾಗ ಪ್ರವಾಸಿಗರು ಸಿಂಹಗಳನ್ನು ಮುಟ್ಟಿದ್ದಾರೆ. ಸಿಂಹವು ಪ್ರವಾಸಿಗರ ಕಡೆ ತಿರುಗಿ ಘರ್ಜಿಸಿದಾಗ ಹೆದರಿ ಸಫಾರಿ ವಾಹನದ ಕಿಟಕಿಗಳನ್ನು ಮುಚ್ಚಿಕೊಂಡಿದ್ದಾರೆ. ಅಲ್ಲದೇ ಸಿಂಹಗಳು ವಾಹನದ ನೆರಳಲ್ಲೇ ಮಲಗಿರುವ ವಿಡಿಯೋ ತೆಗೆದು ಸೋಶಿಯಲ್ ಮಿಡಿಯಾಗಳಲ್ಲಿ ಹಾಕಿದ್ದಾರೆ. ಸಿಂಹವನ್ನು ಮುಟ್ಟುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
Advertisement
ಸಿಂಹಗಳು ಮೊದಲು ತಮ್ಮ ಪಾಡಿಗೆ ತಾವು ವಾಹನದ ಸುತ್ತ ಸುತ್ತುವರಿದಿದ್ದವು, ಪ್ರವಾಸಿಗರೂ ಮುಟ್ಟಿದ ಮೇಲೆಯೇ ಅವರ ಮೇಲೆ ಘರ್ಜಿಸಿವೆ.
Advertisement
ವನ್ಯಜೀವಿ ಪ್ರದೇಶಗಳಾದ ಮರಾ ಹಾಗೂ ಸೆರೆಂಗೆಟಾ ಪ್ರದೇಶಗಳಲ್ಲಿ ಮರಗಳ ನಾಶದಿಂದ ಬಿಸಿಲಿನ ಬೇಗೆಗೆ ಪ್ರಾಣಿಗಳು ತತ್ತರಿಸಿವೆ. ಸಫಾರಿ ವೇಳೆ ವಾಹನಗಳ ಬಳಿ ಬಂದು ಅವುಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಸರ್ವೇಸಾಮಾನ್ಯ ವಿಷಯವಾಗಿದೆ ಎಂದು ವರದಿಯಾಗಿದೆ.
Advertisement
https://www.youtube.com/watch?v=fpOh7OQpZ4g&feature=youtu.be