Chamarajanagar
ತಿಂಗ್ಳ ಮುಂಚೆಯೇ ಪ್ರವಾಸಿ ತಾಣಗಳ ಕೊಠಡಿಗಳು ಬುಕ್-ಮಲೆ ಮಹದೇಶ್ವರ, ಬಿಳಿಗಿರಿ ರಂಗನ ಬೆಟ್ಟಕ್ಕೆ ಭಕ್ತರ ದಂಡು

ಚಾಮರಾಜನಗರ: ಹೊಸ ವರ್ಷಾಚರಣೆ ಮಾಡಲು ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು ಸದ್ಯ ಬಹುಬೇಡಿಕೆ ಸ್ಪಾಟ್ ಗಳಾಗಿದೆ.
ತಿಂಗಳ ಮುಂಚೆಯೇ ಜಿಲ್ಲೆಯ ಪ್ರವಾಸಿ ತಾಣಗಳ ಕೊಠಡಿಗಳನ್ನು ಪ್ರವಾಸಿಗರು ಬುಕ್ ಮಾಡಿಕೊಂಡಿದ್ದಾರೆ. ಹೊಸ ವರ್ಷವನ್ನು ಬರಮಾಡಿಕೊಂಡು ಎಂಜಾಯ್ ಮಾಡಲು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ.
ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಮಲೇ ಮಹದೇಶ್ವರ ಬೆಟ್ಟಕ್ಕೆ ಹಾಗೂ ಬಿಳಿಗಿರಿ ರಂಗನ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಸುಮಾರು ಸಾವಿರಾರು ಮಂದಿ ಭೇಟಿ ನೀಡುವ ನಿರೀಕ್ಷೆಯಿದ್ದು, ಬಹುತೇಕ ಎಲ್ಲಾ ವಸತಿ ಗೃಹಗಳು ಬುಕ್ ಆಗಿದೆ.
ಇನ್ನು ಬಿಳಿಗಿರಿರಂಗನ ಬೆಟ್ಟ ಹಾಗೂ ಬಂಡೀಪುರದಲ್ಲಿ ಅರಣ್ಯದಲ್ಲಿರುವ ಖಾಸಗಿ ರೆಸಾರ್ಟ್ ಗಳಿಗೆ ಬಹುಬೇಡಿಕೆ ಹೆಚ್ಚಾಗಿದ್ದು, ದುಬಾರಿಯಾದ್ರೂ ತಿಂಗಳ ಮುಂಚೆಯೆ ಎಲ್ಲಾ ರೆಸಾರ್ಟ್ ಗಳನ್ನ ಪ್ರವಾಸಿಗರು ಕಾಯ್ದಿರಿಸಿಕೊಂಡಿದ್ದಾರೆ. ಇನ್ನು ಅರಣ್ಯ ಇಲಾಖೆಯ ಕಾಟೇಜ್ ಗಳು ಕೂಡ ಬುಕ್ ಆಗಿದ್ದು ಕೆಲವರು ಇಲ್ಲಿಗೆ ಭೇಟಿ ನೀಡಿ ಕೊಠಡಿಗಳಿಲ್ಲದೆ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.
