ಮಂಡ್ಯ: ಯಾತ್ರಿ ನಿವಾಸ್ ಗೇಟ್ ಬಾಗಿಲು ತೆಗೆಯುವಂತೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅರ್ಧ ಗಂಟೆ ಗೇಟ್ ಮುಂದೆಯೇ ಕಾಯುತ್ತ ನಿಂತ ಘಟನೆ ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದಿದೆ.
ಶುಕ್ರವಾರ ನಾಗಮಂಗಲ ತಾಲೂಕಿನ ಪ್ರವಾಸ ಕೈಗೊಂಡಿದ್ದ ಸಚಿವರು, ತಾಲೂಕು ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ, ಸೌಮ್ಯ ಯಾತ್ರಿ ಕೇಶವ ನಿವಾಸ ಪರಿಶೀಲನೆಗೆ ಮುಂದಾಗಿದ್ದಾಗ ಘಟನೆ ನಡೆದಿದೆ.
Advertisement
Advertisement
ಸಚಿವರು ನಾಗಮಂಗಲ ಪ್ರವಾಸಿ ಮಂದಿರದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ನಂತರ ಪ್ರವಾಸಿ ಮಂದಿರ ಸಮೀಪದ ಸೌಮ್ಯ ಕೇಶವ ಯಾತ್ರಿ ನಿವಾಸ ಪರಿಶೀಲಿಸಲು ಮುಂದಾಗಿದ್ದರು. ಆದರೆ ಸೌಮ್ಯ ಯಾತ್ರಿ ಕೇಶವ ನಿವಾಸದ ಗೇಟ್ ಬೀಗ ಯಾರ ಹತ್ತಿರವಿದೆ ಎನ್ನುವುದೇ ತಿಳಿಯದೇ ಅಧಿಕಾರಿಗಳು ಪರದಾಡಿದರು. ಸುಮಾರು 30 ನಿಮಿಷ ಗೇಟ್ ಮುಂದೆ ಕಾದು ನಿಂತರೂ ಯಾರೊಬ್ಬರು ಬಂದು ಗೇಟ್ ಬೀಗ ತೆಗೆಯಲಿಲ್ಲ.
Advertisement
ಅಧಿಕಾರಿಗಳ ನಿಷ್ಕಾಳಜಿ, ಬೇಜವಾಬ್ದಾರಿಯಿಂದ ಸ್ವಲ್ಪ ಅಸಮಾಧಾನಗೊಂಡ ಸಚಿವರು ಮತ್ತೇ ಅರ್ಧ ಗಂಟೆ ನಂತರ ಮರಳಿ ಬರುತ್ತೇನೆ. ಅಷ್ಟರಲ್ಲಿಯೇ ಬೀಗ ತೆಗೆಸಿರಿ ಎಂದು ಉಪವಿಭಾಗಾಧಿಕಾರಿ ಯಶೋಧ ಅವರಿಗೆ ಸೂಚನೆ ನೀಡಿ ಪ್ರವಾಸ ಮುಂದುವರಿಸಿದರು.