ಮಡಿಕೇರಿ: ಸುಂದರ ಪ್ರಕೃತಿಯ ಮಡಿಲಲ್ಲಿನ ಪ್ರವಾಸಿ ತಾಣಗಳಲ್ಲಿ ನ್ಯೂ ಇಯರ್ ಆಚರಿಸೋಕೆ ಒಂಥರಾ ಮಜಾ, ಹಾಗಾಗಿ ಕೊಡಗಿನತ್ತ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು ಹೊಸ ವರ್ಷಕ್ಕೆ ಒಂದು ದಿನ ಬಾಕಿ ಇರುವಂತೆಯೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಕಲರವ ಆರಂಭವಾಗಿದೆ.
ವರ್ಷದ ಕೊನೆಗೆ ಬೈ ಬೈ ಹೇಳಿ ನ್ಯೂ ಇಯರ್ ವೆಲ್ ಕಮ್ ಮಾಡ್ಕೊಳ್ಳೋ ಟೈಮ್ ಅತ್ಯಂತ ಅಮೂಲ್ಯವಾದದ್ದು. ಅಂತಹ ಕ್ಷಣಗಳನ್ನು ಕಳೆಯೋಕೆ ಪ್ರೇಕ್ಷಣಿಯ ಸ್ಥಳಗಳನ್ನು ಆಯ್ಕೆ ಮಾಡೋರ ಮನಸ್ಸು ಕೊಡಗಿನತ್ತ ಸೆಳೆಯುತ್ತಿದೆ. ನಗರದ ತುಂಬೆಲ್ಲಾ ಕಂಡು ಬರುತಿರೋ ವಾಹನ ದಟ್ಟಣೆ, ಪ್ರವಾಸಿ ತಾಣಗಳಲ್ಲಿ ತುಂಬಿರುವ ಪ್ರವಾಸಿಗರು, ತಂಪಾದ ಗಾಳಿ, ಸುತ್ತಲು ಹಚ್ಚ ಹಸಿರ ಪ್ರಕೃತಿಯ ನಡುವೆ ಪ್ರವಾಸಿಗರ ಕಲರವೇ ಕಾಣಸಿಗುತ್ತದೆ. ಪ್ರವಾಸಿಗರ ಸ್ವರ್ಗ ಅಂತಾನೆ ಕರೆಸಿಕೊಳ್ಳೊವ ಕೊಡಗು ಜಿಲ್ಲೆಯಲ್ಲಿ ಎಲ್ಲಿ ನೋಡಿದರಲ್ಲಿ ಪ್ರವಾಸಿಗರ ದಂಡು. 2018ಕ್ಕೆ ವಿದಾಯ ಹೇಳಿ 2019ನ್ನು ಸ್ವಾಗತ ಮಾಡ್ಕೊಳ್ಳೋದರ ಎಫೆಕ್ಟ್ ಇದು. ಹೊಸ ವರ್ಷವನ್ನು ಕೊಡಗಿನ ಸುಂದರ ಪ್ರಕೃತಿಯ ಮಡಿಲಲ್ಲಿ ಆಚರಣೆ ಮಾಡ್ಬೇಕು ಅಂತ ಕೂರ್ಗದ ಕಡೆಗೆ ಪ್ರವಾಸಿಗರು ಮುಖ ಮಾಡಿದ್ದಾರೆ. ಕೊಡಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಯರ್ ಎಂಡ್ ಕ್ಷಣಗಳನ್ನು ಕಳೆಯುತ್ತಾ ಹೊಸ ವರ್ಷಕ್ಕೆ ಎದುರು ನೋಡ್ತಿದ್ದಾರೆ.
Advertisement
Advertisement
ಕೊಡಗಿನಲ್ಲಿ ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ವಿಕೋಪದ ನೋವಿನ ನಡುವೆ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದೆ. ಬಿಕೋ ಎನ್ನುತ್ತಿದ್ದ ಕೊಡಗೀಗ ಜನರಿಂದ ತುಂಬಿದೆ. ಜಿಲ್ಲೆಯ ಹೋಂ ಸ್ಟೇ, ಹೋಟೆಲ್, ಲಾಡ್ಜ್ ಗಳು ಕಂಪ್ಲೀಟ್ ಆಗಿ ಬುಕ್ ಆಗಿವೆ. ಇಯರ್ ಎಂಡ್ ಹಾಗೂ ನ್ಯೂ ಇಯರ್ ಆಚರಣೆಗೆ ಅಂತಾನೆ ವಿಶೇಷ ಕಾರ್ಯಕ್ರಮಗಳು ನಡಿಯುತ್ತಿರೋ ಕಾರಣಕ್ಕೆ ಕೊಡಗು ಸದ್ಯ ಪ್ರವಾಸಿಗರಿಂದ ಆವೃತವಾಗಿದೆ.
Advertisement
Advertisement
ಅದರಲ್ಲೂ ಮಂಜಿನ ನಗರಿಯ ಮಕುಟಮಣಿ ಅಂತಾನೆ ಕರೆಯೋ ರಾಜಾಸೀಟ್ ಉದ್ಯಾನವನದಲ್ಲಂತೂ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾರೆ. ಇನ್ನೂ ಪ್ರಮುಖ ಪ್ರವಾಸಿ ತಾಣಗಳಾದ ಅಬ್ಬಿಫಾಲ್ಸ್, ಮಾಂದಲ್ ಪಟ್ಟಿ, ದುಬಾರೆ, ನಿಸರ್ಗಧಾಮ ಎಲ್ಲಾ ಕಡೆಗಳಲ್ಲೂ ಪ್ರವಾಸಿಗರ ಕಲರವ ಜೋರಾಗಿದೆ. ಕಹಿ ಘಟನೆಗಳನ್ನು ಮರೆತು, ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಹೊಸ ವರ್ಷದ ಸುಂದರ ಕ್ಷಣಗಳನ್ನು ಎದುರು ನೋಡ್ತಿದ್ದಾರೆ ಪ್ರವಾಸಿಗರು.
2018ಕ್ಕೆ ವಿದಾಯ ಹೇಳೋ ಗಳಿಗೆಯಲ್ಲಿ ಕೊಡಗು ಪ್ರವಾಸಿಗರಿಂದ ತುಂಬಿದೆ. ತೆರೆಮರೆಯಲ್ಲಿ ಸೂರ್ಯಾಸ್ತದ ಮೂಲಕ ಸರಿಯುತ್ತಿರೋ 2018ಕ್ಕೆ ವಿದಾಯ ಹೇಳಿ 2019ನ್ನು ಸ್ವಾಗತ ಮಾಡ್ಕೊಳ್ಳೋ ತವಕದಲ್ಲಿರೋ ಪ್ರವಾಸಿಗರು ಕೊಡಗನ್ನು ಆಯ್ಕೆ ಮಾಡಿಕೊಂಡು ಕಾಫಿಯ ನಾಡಿಗೆ ಲಗ್ಗೆ ಇಟ್ಟಿದ್ದಾರೆ. ಅದೇನೆ ಆಗ್ಲಿ ಹೊಸ ವರ್ಷಾಚರಣೆಯ ಸಂತಸದಲ್ಲಿರೋ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳತ್ತ ಒಂದೊಂದು ರೌಂಡ್ಸ್ ಹಾಕುತ್ತಾ ಸಖತ್ ಎಂಜಾಯ್ ಮಾಡ್ತಿರೋದಂತೂ ಸತ್ಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv