ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಒಂದು ತಿಂಗಳಿನಿಂದ ಎಡೆಬಿಡದೆ ಮಳೆ ಸುರೊಯುತ್ತಿದೆ. ವರುಣ ದೇವನ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಕರ್ನಾಟಕದ ಕಾಶ್ಮೀರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಮಲೆನಾಡಿನ ವಾತಾವರಣವನ್ನು ಅನುಭವಿಸಬೇಕು ಎಂದು ಪ್ಲಾನ್ ಮಾಡುವರು ಮಡಿಕೇರಿ ಸುತ್ತಮುತ್ತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಇನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಇಬ್ಬನಿಯ ಸಿಂಚನದಲ್ಲಿ ಮನಸೋಲುತ್ತಿದ್ದಾರೆ. ಟ್ರಾಫಿಕ್, ಧೂಳಿನ ನಡುವೆ ಇದ್ದವರು ಮನತಣಿಸುವ ತಂಪಾದ ಪರಿಸರಕ್ಕೆ ಮೂಕವಿಸ್ಮಿತರಾಗುತ್ತಿದ್ದಾರೆ.
Advertisement
Advertisement
ವೀಕೆಂಡ್‍ಗಳಲ್ಲಂತೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಂಜಿನ ವೈಭವದಿಂದ ಭೂಲೋಕದಲ್ಲಿ ಸ್ವರ್ಗ ಸೃಷ್ಠಿಯಾದಂತೆ ಭಾಸವಾಗುತ್ತಿದೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ.
Advertisement
ಮಂಜಿನ ಕಣ್ಣಾಮುಚ್ಚಾಲೆ, ಮಳೆಯ ಅರ್ಭಟ, ಮೈಕೊರೆಯುವ ಚಳಿ, ಜೊತೆಗೆ ಅಬ್ಬರಿಸುವ ಗಾಳಿಗೆ ಕೂರ್ಗ್ ಸ್ಪೆಷಲ್ ಟೇಸ್ಟಿ ಕಾಫಿ ಹಿತ ಅನುಭವ ನೀಡುತ್ತಿದ್ದು ಟೂರಿಸ್ಟ್ ಗಳು ಇವೆಲ್ಲದಕ್ಕೆ ಮನಸೋಲ್ತಿದ್ದಾರೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ. ಗಿರಿಕಂದಕಗಳ ನಡುವೆ ಮಂಜಿನ ಥಕಧಿಮಿತ ನೋಡಲು 2 ಕಣ್ಣುಗಳು ಕೂಡ ಸಾಲುತ್ತಿಲ್ಲ. ಮಂಜಿನ ಸ್ಪರ್ಶ ಸವಿಯುತ್ತ ಎಂಜಾಯ್ ಮಾಡುವ ಪ್ರವಾಸಿಗರಿಗೆ ಕೊಡಗಿನಿಂದ ಹೋಗಲು ಮನಸೇ ಬರ್ತಿಲ್ಲ ಅಂತಾ ಹೇಳುತ್ತಿದ್ದಾರೆ.
Advertisement
ಒಟ್ಟಾರೆಯಾಗಿ ಮಂಜಿನ ನಗರಿ ಪ್ರವಾಸಿಗರನ್ನು ಒಂದೆಡೆ ಸೆಳೆಯುತ್ತಿದ್ರೆ. ಅಬ್ಬರಿಸಿ ಬೊಬ್ಬರೆಯುತ್ತಿರುವ ಮಳೆಯಿಂದ ಕೊಡಗಿನ ಜನ ಮಾತ್ರ ತತ್ತರಗೊಂಡಿದ್ದಾರೆ. ಮನತಣಿಸುವ ಮಂಜಿಗೆ ಪ್ರವಾಸಿಗರು ಈಗಾಗ್ಲೇ ಮನಸೋತಿದ್ದಾರೆ. ಕೊಡಗನ್ನು ಮತ್ತೇ ಮತ್ತೇ ನೋಡಬೇಕಾನುವ ಮಟ್ಟಿಗೆ ಮಂಜಿನ ಲೋಕ ಹುಚ್ಚು ಹಿಡಿಸಿದೆ. ಮಳೆಗಾಲದಲ್ಲಿ ಕಂಗೊಳಿಸುವ ಶ್ವೇತಸುಂದರಿ ಇಡೀ ಕೊಡಗನ್ನು ಆವರಿಸಿ ಹಿತವಾದ ಅನುಭವ ನೀಡ್ತಿದ್ದು ಪ್ರವಾಸಿಗರು ಟೆನ್ಷನ್ ಮರೆತು ರಿಫ್ರೆಶ್ ಆಗುತ್ತಿದ್ದಾರೆ. ನೀವು ಕೂಡ ಕೊಡಗಿಗೊಮ್ಮೆ ಆಗಮಿಸಿ ಸೂಪರ್ ವೆದರ್ ನ ಫೀಲ್ ಮಾಡಿ.