ಬೆಂಗಳೂರು: ಪಿಜಿಗಳಲ್ಲಿ (PG) ಇದ್ದುಕೊಂಡು ಅನೈತಿಕ ಚಟುವಟಿಕೆಗಳನ್ನು (Unethical Activity) ನಡೆಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಗರದಲ್ಲಿ ಸುಮಾರು ಐದು ಸಾವಿರ ಪಿಜಿಗಳದ್ದು, ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಅವರ ಹಿನ್ನೆಲೆ ಏನು ಎಂಬುದು ಗೊತ್ತಾಗುತ್ತಿಲ್ಲ. ಹಾಗಾಗಿ ಪೊಲೀಸರು ಹೊಸದೊಂದು ಪ್ಲಾನ್ ಮಾಡಿದ್ದಾರೆ.
ಬೆಂಗಳೂರು (Bengaluru) ಎಂಬ ಈ ಮಾಯನಗರಿಗೆ ದಿನ ಲಕ್ಷಾಂತರ ಜನ ಬಂದು ಹೋಗಿ ಮಾಡುತ್ತಾರೆ. ಯಾರು ಎಲ್ಲಿಂದ ಬರುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಅವರು ಬೆಂಗಳೂರಿಗೆ ಬಂದಿರುವುದು ಯಾಕೆ ಎಂಬುದನ್ನು ಕಂಡುಹಿಡಿಯುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಇತ್ತೀಚಿಗೆ ದೇಶವಿರೋಧಿ ಚಟುವಟಿಗಳು ನಡೆಸುವವರು, ರೌಡಿಶೀಟರ್‌ಗಳು ಪಿಜಿಗಳ ಕಡೆ ಮುಖ ಮಾಡಿದ್ದಾರೆ. ಹೋಟೆಲ್, ಲಾಡ್ಜ್‌ಗಳಲ್ಲಿ ಉಳಿದುಕೊಂಡರೇ ಪೊಲೀಸರ ಕಣ್ಣುತಪ್ಪಿಸುವುದು ಕಷ್ಟ ಎಂಬುದನ್ನು ತಿಳಿದಿರುವ ಆರೋಪಿಗಳು, ನಕಲಿ ಐಡಿ ಅಡ್ರೆಸ್‌ಗಳನ್ನು ನೀಡಿ ಪಿಜಿಗಳಲ್ಲಿ ವಾಸ ಮಾಡಲು ಶುರುಮಾಡಿದ್ದಾರೆ ಎಂಬುದು ಬಯಲಾಗಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ
ಬೆಂಗಳೂರಿನಲ್ಲಿ ಸುಮಾರು ಐದು ಸಾವಿರ ಪಿಜಿಗಳಿದ್ದು, ಅದರಲ್ಲಿ ಬರೋಬ್ಬರಿ ನಾಲ್ಕೂವರೆ ಲಕ್ಷ ಜನ ವಾಸವಾಗಿದ್ದಾರೆ. ಇದರಿಂದ ಎಚ್ಚೆತ್ತ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ಪಿಜಿಗಳಿಗೆ ಪ್ರತ್ಯೇಕ ವೆಬ್ ಪೋರ್ಟಲ್ (Web Portal) ಮಾಡಲು ಮುಂದಾಗಿದ್ಧಾರೆ. ಪಿಜಿಯ ಹೆಸರು, ಮಾಲೀಕರ ಅಡ್ರೆಸ್, ಅಲ್ಲಿಗೆ ಬರುವವರ ಗುರುತು, ಅಧಾರ್ ಕಾರ್ಡ್, ಫೋಟೋ, ಸಿಸಿಟಿವಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಈ ವೆಬ್ ಪೋರ್ಟಲ್‌ನಲ್ಲಿ ನಮೂದಿಸಬೇಕು. ಹೀಗೆ ಮಾಡುವುದರಿಂದ ಅಪರಿಚಿತ ವ್ಯಕ್ತಿಗಳ ಗುರುತು ಪತ್ತೆ ಮಾಡಲು ಅಥವಾ ಅಪರಾಧ ಚಟುವಟಿಕೆಗಳು ನಡೆದರೆ ಆರೋಪಿಗಳನ್ನು ಸೆರೆಹಿಡಿಯಲು ಸುಲಭವಾಗುತ್ತದೆ ಎಂಬ ನಿಟ್ಟಿನಲ್ಲಿ ಈ ಪ್ಲಾನ್ ಮಾಡಲಾಗಿದೆ. ಈಗಾಗಲೇ ನಗರದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 147 ಪಿಜಿಗಳನ್ನು ಪೋರ್ಟಲ್‌ಗೆ ನಮೂದಿಸುತ್ತಿದ್ದು, ಹಂತ ಹಂತವಾಗಿ ಇಡೀ ಬೆಂಗಳೂರಿನ ಪಿಜಿಗಳನ್ನು ಇದರ ವ್ಯಾಪ್ತಿಗೆ ತರಲು ಮುಂದಾಗಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕಸರತ್ತು – ಅಧ್ಯಕ್ಷರ ಮೊದಲ ಪಟ್ಟಿ ಫೈನಲ್: ಸಭೆಯಲ್ಲಿ ಏನಾಯ್ತು?
ಬೇರೆ ಬೇರೆ ಉದ್ದೇಶಗಳಿಗೆ ನಗರಕ್ಕೆ ಬಂದು ಕೃತ್ಯವೆಸಗಿ ಎಸ್ಕೇಪ್ ಆಗುವವರನ್ನು ಪತ್ತೆ ಮಾಡಲು ಇದು ಸಹಕಾರಿಯಾಗಲಿದೆ ಎಂಬುದು ಪೊಲೀಸರ ವಾದ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ನೀಡಲಿದೆ? ಇದರ ಸಾಧಕಬಾದಕಗಳೇನು ಎಂದು ಎಲ್ಲಾ ಪಿಜಿಗಳನ್ನು ಪೋರ್ಟಲ್ ವ್ಯಾಪ್ತಿಗೆ ತಂದ ಮೇಲಷ್ಟೇ ಗೊತ್ತಾಗಬೇಕಿದೆ. ಇದನ್ನೂ ಓದಿ: ಧೂಳು ಹಿಡಿದ ಲಾರಿಯಲ್ಲಿ ಬೆಲೆ ಬಾಳುವ ಔಷಧಿಗಳ ಸಂಗ್ರಹ