ಬೆಂಗಳೂರು: ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ತಿದೆ. ಇಂದಿನಿಂದಲೇ ನಾಲ್ಕು ದಿನಗಳಿಗೆ ಅನ್ವಯ ಆಗುವಂತೆ 50:50 ರೂಲ್ಸ್ ಜಾರಿಯಾಗಿದೆ.
ಹೋಟೆಲ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಶೇಕಡಾ ಅರ್ಧದಷ್ಟು ಗ್ರಾಹಕರಿಗೆ ಮಾತ್ರ ಎಂದು ಅವಕಾಶ ನೀಡಲಾಗ್ತಿದೆ. ವರ್ಷಾಂತ್ಯವಾದ ನಾಳೆಯೂ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್‍ಗಳು ನೈಟ್ ಕರ್ಫ್ಯೂಗೆ ಮುನ್ನವೇ ಬಂದ್ ಮಾಡಬೇಕು ಎಂದು ಪೊಲೀಸರು ಖಡಕ್ಕಾಗಿ ತಿಳಿಸಿದ್ದಾರೆ.
ಆದರೆ ಇದರಿಂದ ಭಾರೀ ನಷ್ಟ ಆಗುತ್ತೆ. ಇದು ಬೇಡ ತೆಗೆಯಿರಿ ಎಂದು ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಈ ಮನವಿಗೆ ಸರ್ಕಾರ ಸ್ಪಂದಿಸುವ ಯಾವುದೇ ಸಾಧ್ಯತೆಗಳು ಇಲ್ಲ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಮಾರ್ಷಲ್ಸ್, ಬಿಬಿಎಂಪಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ರಾತ್ರಿ 10ರ ಬಳಿಕ ಅನಾವಶ್ಯಕವಾಗಿ ಓಡಾಡಿದ್ರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಇಲಾಖೆ ಮತ್ತೊಮ್ಮೆ ಎಚ್ಚರಿಸಿದೆ.
ಅತ್ತ ಕೋವಿಡ್ ಕಾರಣ ಮುಂಬೈನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಜನವರಿ 7ರವರೆಗೆ ಹೋಟೆಲ್, ರೆಸ್ಟೋರೆಂಟ್, ಬಾರ್, ರೆಸಾರ್ಟ್ ಮತ್ತು ಕ್ಲಬ್‍ಗಳಲ್ಲಿ ಹೊಸ ವರ್ಷಾಚರಣೆ ನಿಷೇಧಿಸಲಾಗಿದೆ. ಎಲ್ಲೂ ಪಾರ್ಟಿ ಮಾಡದಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಇದನ್ನೂ ಓದಿ: ನರ್ಸ್ ಎಡವಟ್ಟು – ತಪ್ಪಾದ ಚುಚ್ಚು ಮದ್ದು ನೀಡಿದ್ದರಿಂದ ರೋಗಿ ಸಾವು
ದೆಹಲಿಯಲ್ಲಿ ಟಫ್ ರೂಲ್ಸ್ ಗೆ ಜನತೆ ಹೈರಾಣಾಗಿದ್ದಾರೆ. ಮೆಟ್ರೋ ಹತ್ತಲು ನೂಕು ನುಗ್ಗಲು ಉಂಟಾಗಿ ಪ್ರಯಾಣಿಕರೇ ಹೊಡೆದಾಡಿಕೊಂಡಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಇದನ್ನೂ ಓದಿ: Well done, #TeamCongress! – ಕರ್ನಾಟಕ ಕಾಂಗ್ರೆಸ್ ಬೆನ್ನು ತಟ್ಟಿದ ರಾಹುಲ್ ಗಾಂಧಿ, ಸುರ್ಜೇವಾಲಾ