ಹಾಡು ಹಿಟ್ ಆದರೆ ಸಿನಿಮಾ ರಿಲೀಸ್‍ಗೂ ಮುನ್ನವೇ ಅರ್ಧ ಗೆದ್ದಂತೆ. ಅಂಥದ್ದೊಂದು ಖುಷಿಯಲ್ಲಿ ತೇಲುತ್ತಿರುವುದು ತೋತಾಪುರಿ ಸಿನಿಮಾ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಬಾಗ್ಲು ತೆಗಿ ಮೇರಿ ಜಾನ್ ಎಂಬ ಹಾಡೀಗ ಎಲ್ಲೆಡೆ ಹಬ್ಬಿಕೊಂಡಿದೆ.
ರೀಲ್ಸ್ ಸೇರಿದಂತೆ ನಾನಾ ರೂಪಾಂತರಗಳ ಮೂಲಕ ಜನರ ಮನಸು ಗೆದ್ದಿದೆ. ಸಿನಿಮಾವೊಂದು ಅನೌನ್ಸ್ ಆದಾಗಿನಿಂದಲೂ ತೋತಾಪುರಿ ಬಗ್ಗೆ ಇರುವ ನಿರೀಕ್ಷೆ ಬಹಳ ದೊಡ್ಡ ಮಟ್ಟದ್ದು. ಹಾಗಂತ ವರ್ಷಾನುಗಟ್ಟಲೇ ಮಂದಿ ಕಾಯುವುದಕ್ಕೂ ಸ್ವಲ್ಪ ಕಷ್ಟವೇ. ಆದರೆ ತೋತಾಪುರಿಯ ವಿಚಾರದಲ್ಲಿ ಕಾಯುವಿಕೆಯನ್ನು ಕೂಡಾ ರೋಮಾಂಚಕವಾಗಿಸಿರೋದರಲ್ಲಿ ಬಾಗ್ಲು ತೆಗಿ ಮೇರಿ ಜಾನ್ ಹಾಡಿನ ಪಾತ್ರ ದೊಡ್ಡದಿದೆ. ಇಂಥಾ ಅಗಾಧ ಪ್ರಚಾರದ ಪ್ರಭೆಯಲ್ಲಿ ತೋತಾಪುರಿ ಚಿತ್ರ ಸೆ. 30ರಂದು ಬಿಡುಗಡೆಗೊಳ್ಳಲಿದೆ.
Advertisement
Advertisement
ಜಗ್ಗೇಶ್ ಇದ್ದ ಕಡೆ ನಗುವಿಗೇನು ಬರವಿಲ್ಲ. ಹಾಗೇ ವಿಜಯ್ ಪ್ರಸಾದ್ ಇದ್ದ ಕಡೆ ಚೇಷ್ಟೆಗೇನು ಬರವಿಲ್ಲ. ಹಾಸ್ಯ ಮತ್ತು ಚೇಷ್ಟೆ ಒಂದಾದಾಗ ಬರಪೂರ ಮನರಂಜನೆ ಪಕ್ಕಾ ಅನ್ನೋದು ಫಿಕ್ಸ್ ಮಾಡಿಕೊಳ್ಳಬೇಕು. ಈಗಾಗಲೇ ನೀರ್‌ದೋಸೆ ಎಂಬ ಹಿಟ್ ಸಿನಿಮಾ ಕೊಟ್ಟಿರುವ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಜೋಡಿ ಮತ್ತೆ ಒಂದಾಗಿರುವುದು ಒಂದಷ್ಟು ನಿರೀಕ್ಷೆಗಳನ್ನು ಹೆಚ್ಚಿಸಲು ಕಾರಣವಾಗಿದೆ. ಜೊತೆಗೆ ಸಿನಿಮಾ ಬಗೆಗಿನ ಆಸಕ್ತಿ ಎಲ್ಲಿಯೂ ಕುಂದದಂತೆ ನೋಡಿಕೊಳ್ಳುತ್ತಿದೆ ಟೀಂ. ಆಗಾಗ ಸಿನಿಮಾದ ಸಣ್ಣ ಝಲಕ್‍ಗಳನ್ನು ತೋರಿಸುತ್ತಾ, ಸಿನಿಮಾ ರಿಲೀಸ್‍ಗಾಗಿ ಕಾಯುವಂತೆ ಮಾಡುತ್ತಿದೆ. ಅದಕ್ಕೊಂದು ಉದಾಹರಣೆ ವಿಜಯ್ ಪ್ರಸಾದ್ ಈಗಾಗಲೇ ಸಾಂಗ್ಸ್‌ಗಳ ರುಚಿ ತೋರಿಸಿರುವುದು.
Advertisement
Advertisement
ತೋತಾಪುರಿ ಸಿನಿಮಾದ ಸ್ಪೆಷಲ್ ನ್ಯೂಸ್ ಹಾಗೂ ಸಿಕ್ಕಾಪಟ್ಟೆ ಖುಷಿಯಾಗುವಂತ ನ್ಯೂಸ್ ಎಂದರೆ ಇದೇ ಸಾಂಗ್ ವಿಚಾರ. ಬಾಗ್ಲು ತೆಗಿ ಮೇರಿ ಜಾನ್ ಹಾಡು ನಿರೀಕ್ಷೆಯನ್ನು ಮೀರಿ ಎಲ್ಲರ ಮನಸ್ಸನ್ನು ಗೆದ್ದಿದೆ. ಮಿಲಿಯಾಂತರ ಮನಸ್ಸುಗಳಿಗೆ ಈ ಸಾಂಗ್ ಹತ್ತಿರವಾಗಿದೆ. ಅಷ್ಟೇ ಯಾಕೆ ಈ ಹಾಡನ್ನು ತಮ್ಮ ಹ್ಯಾಪಿ ಮೂಮೆಂಟ್‍ನಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಡ್ಯಾನ್ಸ್ ಮಾಡುವಾಗ, ರೀಲ್ಸ್ ಮಾಡುವಾಗಲೂ ಸಾಂಗ್‍ಗಳ ಸರ್ಚಿಂಗ್‍ನಲ್ಲಿ ಮುಂದೆ ಇದೆ. ವಿದೇಶದಲ್ಲೂ ಇದರ ಹಾವಳಿ ಹೆಚ್ಚಾಗಿಯೇ ಇದೆ ಎಂದರೆ ಖುಷಿ ಪಡುವುದಕ್ಕೆ ಬೇರೆ ಕಾರಣ ಬೇಕೆ..? ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ತೋತಾಪುರಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸ್ ಆಗುತ್ತಿದೆ. ಕಾಮಿಡಿ ಜಾನರ್‌ನಲ್ಲಿ ಆರಂಭವಾದ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸ್ ಆಗುತ್ತಿರುವುದು. ಆ ಖುಷಿ ಒಂದು ಕಡೆಯಾದರೆ, ಈಗ ದೇಶಾದ್ಯಂತ ಹಾಡುಗಳಿಗೆ ಬರುತ್ತಿರುವ ರೆಸ್ಪಾನ್ಸ್ ಮತ್ತಷ್ಟು ಖುಷಿ ನೀಡಿದೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?
ಈ ಖುಷಿಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಹಾಡಿಗೆ ಬಂದ ರೆಸ್ಪಾನ್ಸ್ ಕಂಡು ಥ್ರಿಲ್ ಆಗಿದೆ. ಇನ್ನು ಬಾಗ್ಲು ತೆಗಿ ಮೆರಿ ಜಾನ್ ಹಾಡಿಗೆ ವಿಜಯ್ ಪ್ರಸಾದ್ ಅವರೇ ಸಾಹಿತ್ಯ ಬರೆದಿದ್ದಾರೆ. ಡೈರೆಕ್ಷನ್‍ನಲ್ಲಿಯೂ ಸಿಕ್ಕಾಪಟ್ಟೆ ಮನಸ್ಸುಗಳನ್ನು ಕದಿಯುವ ಚಾಣಾಕ್ಷ್ಯತನ ಹೊಂದಿದ್ದ ವಿಜಯ್ ಪ್ರಸಾದ್ ಇದೀಗ ಸಾಹಿತ್ಯದಲ್ಲೂ ಮನಸ್ಸು ಗೆದ್ದಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ವ್ಯಾಸರಾಜ ಸೋಸಲೆ ಹಾಗೂ ಅನನ್ಯಾ ಭಟ್ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಉಳಿದಂತೆ ಸಿನಿಮಾದಲ್ಲಿ ಡಾಲಿ ಧನಂಜಯ್, ಅದಿತಿ ಪ್ರಭುದೇವ, ವೀಣಾ ಸುಂದರ್, ಸುಮನ್ ರಂಗನಾಥ್, ದತ್ತಣ್ಣ ಸೇರಿದಂತೆ ನಗಿಸುವ ಬಳಗ ದೊಡ್ಡದೇ ಇದೆ. ಇದನ್ನೂ ಓದಿ: ಅನಿರುದ್ಧ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ: ಗರಂ ಆದ ಮಹಿಳಾ ಅಭಿಮಾನಿಗಳು