ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಚಾಮುಂಡಿ ಬೆಟ್ಟದ ಹುಂಡಿಗೆ ಭಕ್ತರಿಂದ ಈ ಬಾರಿ ಭರ್ಜರಿ ಕಾಣಿಕೆ ಬಿದ್ದಿದೆ.
Advertisement
ಭಾನುವಾರ ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 23 ವಿದೇಶಿ ನೋಟುಗಳು ಪತ್ತೆಯಾಗಿದ್ದು, ಬರೋಬ್ಬರಿ 2 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ಇದನ್ನೂ ಓದಿ: ಇನ್ನೂ ಪತ್ತೆಯಾಗದ `ದಿ ಪಾರ್ಕ್’ ಡ್ರಗ್ ಮೂಲ – 40 ಫಾರಿನ್ ಮಾಡೆಲ್‍ಗಳಿಗೆ ಪೊಲೀಸ್ ನೋಟಿಸ್
Advertisement
Advertisement
ಎಣಿಕೆಯಲ್ಲಿ ನಾಣ್ಯರೂಪದಲ್ಲಿ 4,13,684 ರೂಪಾಯಿ ದೊರೆತಿದೆ. 320 ಗ್ರಾಂ ಚಿನ್ನ ಮತ್ತು 960 ಗ್ರಾಂ ಬೆಳ್ಳಿ ಪದಾರ್ಥ ಕೂಡ ಪತ್ತೆಯಾಗಿದ್ದು, ಒಟ್ಟು 2,07,64,133 ರೂ. ಸಂಗ್ರಹವಾಗಿದೆ. ಅದರಲ್ಲಿಯೂ ಹುಂಡಿಯಲ್ಲಿ 500 ರೂ. ಮುಖ ಬೆಲೆಯ ಹೆಚ್ಚಿನ ನೋಟುಗಳು ಸಿಕ್ಕಿದೆ ಎಂದು ಚಾಮುಂಡಿ ಬೆಟ್ಟ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಇಂದು ಬೆಂಗಳೂರಿಗೆ ಮೋದಿ – ಎಲ್ಲಿ ಸಂಚಾರ ನಿಷೇಧ? ಪರ್ಯಾಯ ಮಾರ್ಗ ಯಾವುದು?