ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಆಷಾಢ ಮಾಸದಲ್ಲಿ 2,33,51,270(ಎರಡು ಕೋಟಿ ಮೂವತ್ತೂರು ಲಕ್ಷದ ಐವತ್ತೊಂದು ಸಾವಿರದ ಎರಡು ನೂರ ಎಪ್ಪತ್ತು) ರೂ. ಕಾಣಿಕೆ ಸಂಗ್ರಹವಾಗಿದೆ.
Advertisement
ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷದ ಬಳಿಕ ಆಷಾಢ ಮಾಸದ ವಿಶೇಷ ಪೂಜೆ ಮತ್ತು ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಕಳೆದ ವರ್ಷಕ್ಕಿಂತ ಎರಡುಪಟ್ಟು ಹೆಚ್ಚಾಗಿದ್ದು, ಅಪಾರ ಭಕ್ತ ಸಮೂಹ ಹೊಂದಿರುವ ಸುಪ್ರಸಿದ್ಧ ಯಾತ್ರಾಸ್ಥಳ ಎಂಬುದಕ್ಕೆ ಶ್ರೀ ಚಾಮುಂಡೇಶ್ವರಿ ಸನ್ನಿಧಿ ಸಾಕ್ಷಿಯಾಗಿದೆ. ಇದನ್ನೂ ಓದಿ: ಮಂಗಳೂರು ಪಬ್ ಮೇಲೆ ದಾಳಿ ನಡೆದಿಲ್ಲ, ಯಾರೂ ದೂರು ನೀಡಿಲ್ಲ: ಎನ್.ಶಶಿಕುಮಾರ್
Advertisement
Advertisement
ಇಲ್ಲಿಯವರೆಗೆ 1.59 ಕೋಟಿ ರೂ. ಅತೀ ಹೆಚ್ಚಿನ ಸಂಗ್ರಹಣೆಯಾಗಿತ್ತು. ಆದರೆ ಈ ವರ್ಷದ ಆಷಾಢ ಮಾಸದಲ್ಲಿ 2 ಕೋಟಿ ರೂ. ದಾಟುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. 2,33,51,270 ರೂ.ಗಳಲ್ಲಿ 2,29,93,739 ರೂ. ನೋಟುಗಳು ಹಾಗೂ 3,57,531 ರೂ. ನಾಣ್ಯಗಳು ಸಂಗ್ರಹವಾಗಿದೆ. ಅಲ್ಲದೇ ಟಿಕೆಟ್ ಕೌಂಟರ್ (300 ಮತ್ತು 50 ರೂ. ಟಿಕೆಟ್)ನಿಂದ 1,03,69,270 ರೂ. ಆದಾಯ ಸಂಗ್ರಹವಾಗಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ, ಕ್ರಿಶ್ಚಿಯನ್ನರು ಇಲ್ಲದಿದ್ರೆ ರಾಜ್ಯ ಬಿಹಾರ ಆಗ್ತಿತ್ತು: ತಮಿಳುನಾಡು ಸ್ಪೀಕರ್