ಮದ್ವೆಗೆ ಕುದುರೆ ಬದಲು ಸಮುದ್ರ ವಿಮಾನದಲ್ಲಿ ರಣ್‍ವೀರ್ ಎಂಟ್ರಿ- ರೆಸಾರ್ಟ್ ಒಂದು ದಿನದ ಬಾಡಿಗೆ ಎಷ್ಟು?

Public TV
2 Min Read
ranveer and deepika

ಇಟಲಿ: ಬಾಲಿವುಡ್‍ನ ಬಾಜಿರಾವ್ ಹಾಗೂ ಮಸ್ತಾನಿಯಾದ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ಇಟಲಿಯಲ್ಲಿರುವ ಲೇಕ್ ಕೊಮೊ ಸರೋವರದ ತೀರದಲ್ಲಿ ಮದುವೆಯಾಗಲಿದ್ದಾರೆ.

ವಿಲ್ಲಾ ಡೆಲ್ ಬಾಲ್‍ಬಿಯಾನೆಲ್ಲೋದಲ್ಲಿ ನಡೆಯಲಿರುವ ಈ ಮದುವೆಯ ಸ್ಥಳಕ್ಕೆ 700 ವರ್ಷದ ಇತಿಹಾಸ ಇದೆ. ಸರೋವರದ ತೀರದಲ್ಲಿ ದೀಪ್‍ವೀರ್ ಮದುವೆ ಮಂಟಪವಿದ್ದು, ರಣ್‍ವೀರ್ ಸಿಂಗ್ ಕುದುರೆ ಏರಿ ಬರುವ ಬದಲು ಸಮುದ್ರ ವಿಮಾನದಲ್ಲಿ ಎಂಟ್ರಿ ನೀಡಲಿದ್ದಾರೆ.

deepika ranveer

ರಣ್‍ವೀರ್ ಸಿಂಗ್ ಹಾಗೂ ಅವರ ಕುಟುಂಬದವರು ಮಾತ್ರ ಸಮುದ್ರದ ವಿಮಾನದಲ್ಲಿ ಮದುವೆ ಮಂಟಪಕ್ಕೆ ಎಂಟ್ರಿ ನೀಡಲಿದ್ದಾರೆ. ಆದರೆ ಸಂಬಂಧಿಕರಿಗಾಗಿ ರಣ್‍ವೀರ್ ದುಬಾರಿ ಬೆಲೆಯ ಯಾಚ್‍ಗಳನ್ನು ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ.

ರಣ್‍ದೀಪ್ ಹಾಗೂ ಅವರ ಸಂಬಂಧಿಕರು ತಂಗಿರುವ ರೆಸಾರ್ಟ್‍ನಲ್ಲಿ ಒಟ್ಟು 75 ರೂಮ್, 4 ರೆಸ್ಟೋರೆಂಟ್ ಹಾಗೂ ಬಾರ್, 4 ಕಾನ್ಫರೇನ್ಸ್ ರೂಂ, ಸ್ಪಾ, ಇನ್‍ಡೋರ್ ಸ್ವಿಮ್ಮಿಂಗ್ ಪೂಲ್ ಇದೆ. ಈ ಜಾಗ ಒಟ್ಟು 26,000 ಚದರ ಅಡಿ ಇದ್ದು, ಮದುವೆ ಮಂಟಪಕ್ಕೆ 40-45 ನಿಮಿಷ ಬೋಟ್‍ನಲ್ಲಿ ಪ್ರಯಾಣಿಸಬೇಕು.

deepika

ಈ ರೆಸಾರ್ಟ್ ನಲ್ಲಿರುವ ರೂಮಿನ ಒಂದು ದಿನದ ಬಾಡಿಗೆ 400 ಯೂರೋ ಎಂದರೆ 33 ಸಾವಿರ ರೂ. ಸದ್ಯ ರಣ್‍ವೀರ್ ಹಾಗೂ ದೀಪಿಕಾ 75 ರೂಮ್‍ಗಳನ್ನು ಬುಕ್ ಮಾಡಿದ್ದಾರೆ. ಹಾಗಾಗಿ ಅವರು ಒಂದು ದಿನಕ್ಕೆ 24,75,000 ರೂ. ನೀಡುತ್ತಿದ್ದು, ಒಂದು ವಾರಕ್ಕೆ 1,73,25,000 ರೂ. ನೀಡಿದ್ದಾರೆ ಎಂದು ವರಿದಯಾಗಿದೆ. ಸದ್ಯ ರಣ್‍ದೀಪ್ ನ. 17ರವರೆಗೂ ರೆಸಾರ್ಟ್ ಬುಕ್ ಮಾಡಿದ್ದಾರೆ.

ಡೇವಿಡ್ ಬೋವೆ, ಜಾರ್ಜ್ ಕ್ಲೂನಿ ಮತ್ತು ಕಿಮ್ ಕರ್ದಾಶಿಯನ್ ಮುಂತಾದವರು ಕೂಡಾ ಲೇಕ್ ಕೊಮೊ ತಾಣದಲ್ಲಿ ಮದುವೆಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *