ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ

Public TV
2 Min Read
Parvesh Sahib Singh Verma

ನವದೆಹಲಿ: ಬಿಜೆಪಿ (MP) ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ (Parvesh Sahib Singh Verma) ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿದ್ದು, ಸಮುದಾಯದ ಹೆಸರು ಉಲ್ಲೇಖಿಸದೇ `ಪೂರ್ಣ ಬಹಿಷ್ಕಾರ’ಕ್ಕೆ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

OWISI

ಸಾರ್ವಜನಿಕ ಕಾರ್ಯಮವೊಂದರಲ್ಲಿ ಮಾತನಾಡಿದ ವರ್ಮಾ, ಅವರು ಕೈಗಾಡಿಗಳನ್ನು ತೆರೆಯುತ್ತಾರೆ, ಅಂತಹವರಿಂದ ನೀವು ತರಕಾರಿ ಖರೀದಿಸುವ ಅಗತ್ಯವಿಲ್ಲ. ಮೀನು (Fish), ಮಾಂಸದ (Meat Shops) ಅಂಗಡಿಗಳನ್ನು ತೆರೆಯುತ್ತಾರೆ. ಪರವಾನಗಿ ಹೊಂದಿಲ್ಲದಿದ್ದರೆ ಪುರಸಭೆ ಅವುಗಳನ್ನ ಬಂದ್ ಮಾಡಿಸಬೇಕು. ನೀವು ಅಂತಹವರನ್ನು ಸರಿಪಡಿಸಬೇಕು ಅಂದುಕೊಂಡಿದ್ದರೆ ಅದು ಪೂರ್ಣ ಬಹಿಷ್ಕಾರದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ನಾವು ಅವರನ್ನು ಬಹಿಷ್ಕರಿಸುತ್ತೇವೆ, ಅವರ ಬಳಿ ನಾವು ಏನನ್ನೂ ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಮುಸ್ಲಿಂ ಸಮುದಾಯದ (Muslim Community) ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದ್ದಾರೆ.

ಈ ನಡುವೆ ಕೆಲ ಬಿಜೆಪಿ ಶಾಸಕರು ನಮ್ಮ ಸುಂದರ ದೆಹಲಿ ಹಂದಿಗಳ ನಗರವಾಗಿ ಮಾರ್ಪಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ವರ್ಮಾ, ಯಾವುದೇ ಧರ್ಮದ ಸಮುದಾಯವನ್ನು ಉಲ್ಲೇಖಿಸಿಲ್ಲ ಎಂಬುದಾಗಿ ಹೇಳಿದ್ದಾರೆ. ‌ಇದನ್ನೂ ಓದಿ: ಫಿಲ್ಮ್ ಫೇರ್: ಆ್ಯಕ್ಟ್ 1978 ಚಿತ್ರಕ್ಕೆ ನಾಲ್ಕು ಪ್ರಶಸ್ತಿ, ಅತ್ಯುತ್ತಮ ನಟ ಧನಂಜಯ್, ನಟಿ ಯಜ್ಞಾ

ಈ ವೀಡಿಯೋವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi), ಬಿಜೆಪಿ ಮುಸ್ಲಿಮರ ವಿರುದ್ಧ ಯುದ್ಧ ಸಾರಿದೆ. ಆಡಳಿತ ಪಕ್ಷದ ಸಂಸದರೊಬ್ಬರು ರಾಜಧಾನಿಯಲ್ಲಿ ರಾಜಾರೋಷವಾಗಿ ಹೀಗೆ ಮಾತನಾಡಿದ್ದಾರೆ. ಆದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ (AmitShah) ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮೌನ ವಹಿಸಿದ್ದಾರೆ. ಹೀಗಾದರೆ ಸಂವಿಧಾನದ ಮೌಲ್ಯ ಏನಿದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

ಈ ಬೆನ್ನಲ್ಲೇ ವರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ವಕ್ತಾರ ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಇನ್ನೂ ಯಾವುದೇ ದೂರುಗಳು ಬಂದಿಲ್ಲ. ಆದಾಗ್ಯೂ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಪರಿಶೀಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *