Connect with us

Bengaluru City

2018ರಲ್ಲಿ 258 ಅಪಘಾತ, 50 ಮಂದಿ ಸಾವು- ಕಿಲ್ಲರ್ ಬಿಎಂಟಿಸಿಗೆ ಇನ್ನೆಷ್ಟು ಬಲಿಬೇಕು?

Published

on

ಬೆಂಗಳೂರು: ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ಎಚ್ಚರವಾಗಿರಿ. ರಾಜಧಾನಿಯಲ್ಲಿ ಸಾಲು ಸಾಲು ಬಿಎಂಟಿಸಿ ಬಸ್‍ಗಳು ಅಪಘಾತವಾಗಲು ಕಾರಣವೇನು ಎಂಬುದು ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಚರಣೆಯಲ್ಲಿ ಕರಾಳ ಸತ್ಯ ಅನಾವರಣವಾಗಿದೆ.

ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸುವ ಮಂದಿ ಕೊಂಚ ಜಾಗೃತೆಯಿಂದ ಇರಬೇಕು. ಯಾಕಂದ್ರೆ ಸ್ವಲ್ಪ ಯಾಮಾರಿದ್ರೂ ಬಿಎಂಟಿಸಿ ನಿಮ್ಮ ಪಾಲಿಗೆ ಕಿಲ್ಲರ್ ಬಿಎಂಟಿಸಿ ಆಗೋದಂತು ಸತ್ಯ. ಹೌದು ರಾಜಾಧಾನಿಯಲ್ಲಿ ಸಾಲು ಸಾಲು ಬಿಎಂಟಿಸಿ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಈ ವರ್ಷ ಬಿಎಂಟಿಸಿ ಬಸ್ ಅಪಘಾತಗಳ ವಿವರ ಕೇಳದರೆ ಒಮ್ಮೆ ಬೆಚ್ಚಿಬೀಳೋದಂತು ನಿಜ.

ಬಿಎಂಟಿಸಿಯ ಚಾಲಕರೇ ಬಸ್‍ನ ಬ್ರೇಕ್ ಸರಿಯಿಲ್ಲ, ಸ್ಟೇರಿಂಗ್ ಸರಿಯಿಲ್ಲ. ಮಳೆಗಾಲದಲ್ಲಿ ಸ್ವಲ್ಪ ಯಾಮಾರಿದ್ರೂ ಹೊಗೆನೆ ಅಂತಾ ತಮ್ಮ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗಳ ಅಟ್ಟಹಾಸಕ್ಕೆ 355 ದಿನಗಳಲ್ಲಿ 258 ಅಪಘಾತಗಳು, 50 ಸಾವಿನ ಪ್ರಕರಣಗಳು ದಾಖಲಾಗಿವೆ. ಇಷ್ಟೆಲ್ಲ ಅನಾಹುತಗಳು ಸಂಭವಿಸೋದಕ್ಕೆ ಮೂಲ ಕಾರಣ ತಾಂತ್ರಿಕ ದೋಷ.

ಹೌದು, ಬಸ್‍ಗಳಲ್ಲಿ ತಾಂತ್ರಿಕ ಲೋಪ ದೋಷಗಳು ಇದ್ದರೂ ಅದನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿಸಿ ಮತ್ತೆ ಚಾಲಕರಿಗೆ ಕೋಡ್ತಾರೆ ವಿನಃ ಶಾಶ್ವತ ಪರಿಹಾರ ನೀಡುತ್ತಿಲ್ಲ. ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಇದುವರೆಗೆ ಕಿಲ್ಲರ್ ಬಿಎಂಟಿಸಿಗೆ ಎಷ್ಟು ಜನ ಬಲಿಯಾಗಿದ್ದಾರೆ. ಎಷ್ಟು ಅಪಘಾತಗಳು ಸಂಭವಿಸಿವೆ. ಅದರಲ್ಲಿ ಮೃತಪಟ್ಟವರೆಷ್ಟು, ಗಾಯಗೊಂಡವರೆಷ್ಟು ಅಂತ ಸಂಪೂರ್ಣ ವಿವರ ದೋರಕಿದೆ.

2018ರ ಜನವರಿಯಿಂದ ಡಿಸೆಂಬರ್ 20ರವರೆಗಿನ ಬಸ್ ಅಪಘಾತಗಳ ವಿವರ ನೋಡೋದಾದ್ರೆ, ಈ ಒಂದೇ ವರ್ಷದಲ್ಲಿ 258 ಅಪಘಾತಗಳು ಸಂಭವಿಸಿದೆ. ಇದರಲ್ಲಿ ಮಾರಣಾಂತಿಕ ಅಪಘಾತಗಳು 46 ಆಗಿದೆ, 28 ದೊಡ್ಡ ಪ್ರಮಾಣದ ಅಪಘಾತ, 184 ಸಣ್ಣ ಪ್ರಮಾಣದ ಅಪಘಾತಗಳು ಸಂಭವಿಸಿದೆ. ಇನ್ನು ಬಸ್ ಅಪಘಾತದಿಂದ 50 ಮಂದಿ ಸಾವನ್ನಪ್ಪಿದ್ದು, 219 ಮಂದಿ ಗಾಯಗೊಂಡಿದ್ದಾರೆ. 133 ವಸ್ತು, ವಾಹನಗಳಿಗೆ ಹಾನಿಯಾಗಿದೆ.

ಈ ಬಗ್ಗೆ ನಿಖರ ದಾಖಲೆಗಳನ್ನು ಇಟ್ಟುಕೊಂಡೆ ಸಾರಿಗೆ ಸಚಿವರನ್ನ ಪ್ರಶ್ನೆ ಮಾಡಿದಕ್ಕೆ ಅವರು ಫುಲ್ ಗರಂ ಆಗಿದ್ದಾರೆ. ರಸ್ತೆ ಗುಂಡಿಗಳಿಂದಾನೇ ಅಪಘಾತಗಳು ಸಂಭವಿಸುತ್ತಿವೆ ಅಂತ ಕಾರಣ ಕೊಡುತ್ತಿದ್ದಾರೆ.

ಬಿಎಂಟಿಸಿ ಬಸ್ ಓಡಿಸೋ ಚಾಲಕರೇ ತಮ್ಮ ಅಸಹಾಯಕತೆಯನ್ನು ತೋರಿಸಿಕೊಂಡರೂ ನಮ್ಮ ಸಾರಿಗೆ ಸಚಿವರು ಮಾತ್ರ ತಮ್ಮ ತಪ್ಪನ್ನ ಒಪ್ಪಿಕೊಳ್ಳೋದಕ್ಕೆ ತಯಾರಿಲ್ಲ. ಕಣ್ಣಮುಂದೆಯೇ ಇಷ್ಟೆಲ್ಲ ನಡೆಯುತ್ತಿದೆ. ಇನ್ನೂ ಕಣ್ಣಿಗೆ ಕಾಣದ್ದು ಅದೆಷ್ಟೋ ಗೋತ್ತಿಲ್ಲ. ಬಿಎಂಟಿಸಿಯ ಕರಾಳ ಮುಖವಾಡ ಕಳಚಿದ್ದರೂ ನಮ್ಮ ಸಾರಿಗೆ ಸಚಿವರು ಮಾತ್ರ ಹೀಗೆ ಆಗೋಕೆ ಚಾನ್ಸೇ ಇಲ್ಲ ಅಂತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *