ಚೆನ್ನೈ: ವರದಕ್ಷಿಣೆ ಮತ್ತು ಹೆಣ್ಣು ಮಗು ಹೆತ್ತಿದ್ದಕ್ಕೆ ಅತ್ತೆಯಂದಿರು ದಿನ ನಿತ್ಯ ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ 27 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ.
Advertisement
Advertisement
ಇದೀಗ ಮಹಿಳೆಯ ಪತಿ ಸೇರಿದಂತೆ 7 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ಮಹಿಳೆಯನ್ನು ಅಫ್ಸಾ ಎಂದು ಗುರುತಿಸಲಾಗಿದ್ದು, ಒಂದು ವರ್ಷದ ಹಿಂದೆ ತನ್ನ ಗೆಳೆಯ ದಸ್ತೇಕರ್ ಅನ್ನು ಮದುವೆಯಾಗಿದ್ದರು. ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಈ ಮದುವೆ ನಡೆದಿತ್ತು. ಆದರೆ ವರದಕ್ಷಿಣೆಗಾಗಿ ತನ್ನ ಪತಿ ಮತ್ತು ಅತ್ತೆಯಂದಿರು ಪದೇ, ಪದೇ ಪೀಡಿಸುತ್ತಿದ್ದರು ಎಂದು ಅಫ್ಸಾ ಡೇತ್ ನೋಟ್ ಮೂಲಕ ಆರೋಪಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ ಚಲೋ ಕೈಬಿಟ್ಟ ಕಾಂಗ್ರೆಸ್ ನಿಲುವು ಸ್ವಾಗತಿಸಿದ ಮಾಜಿ ಸಿಎಂ ಬಿಎಸ್‍ವೈ
Advertisement
Advertisement
ಮದುವೆಯಾದ ನಂತರ ಕೇವಲ ಒಂದು ವಾರ ಮಾತ್ರ ನಾನು ನನ್ನ ಪತಿಯೊಂದಿಗೆ ಇದ್ದೆ. ಆದರೆ ನಂತರದ ದಿನಗಳಲ್ಲಿ ವರದಕ್ಷಿಣೆಗಾಗಿ ನನ್ನ ಅತ್ತೆಯಂದರು ಹಲವು ಬಾರಿ ಥಳಿಸಿದ್ದಾರೆ. ಅಲ್ಲದೇ ಈಗಾಗಲೇ ನೀಡಬೇಕಾದ ಎಲ್ಲಾ ವರದಕ್ಷಿಣೆಯನ್ನು ನನ್ನ ಅತ್ತೆಯ ಕುಟುಂಬಕ್ಕೆ ನೀಡಲಾಗಿದೆ. ಆದರೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ 50 ಗ್ರಾಂ ಚಿನ್ನ, ರಾಯಲ್ ಎನ್‍ಫೀಲ್ಡ್ ಬೈಕ್ ಮತ್ತು 1 ಲಕ್ಷ ರೂ. ನಗದು ಈ ಎಲ್ಲ ವಸ್ತುಗಳನ್ನು ನನ್ನ ಅತ್ತೆಯ ಮನೆಯವರು ಕಿತ್ತುಕೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅತ್ತೆಯ ಸೂಚನೆ ಮೇರೆಗೆ ನನ್ನ ಪತಿ ಪ್ರತಿನಿತ್ಯ ನನಗೆ ಹೊಡೆದು ಕಿರುಕುಳ ನೀಡಿದ್ದ. ಅಲ್ಲದೇ ಈ ಹಿಂದೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿಯೂ ಪತ್ರದಲ್ಲಿ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಲ್ಲರೂ ನೂಪುರ್‌ಗೆ ಕ್ಷಮೆ ಕೇಳುವಂತೆ ಹೇಳಿದರು, ಆದರೆ ನಾನು ಮಾತ್ರ ಬೆಂಬಲ ನೀಡಿದ್ದೇನೆ: ರಾಜ್ ಠಾಕ್ರೆ
ಅಫ್ಸಾ ಇಲಿ ಪಾಷಣವನ್ನು ಸೇವಿಸಿ ಅಸ್ವಸ್ಥಗೊಂಡಾಗ, ಆಕೆಯ ತಾಯಿಯ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಫ್ಸಾ ಮೃತಪಟ್ಟಿದ್ದಾಳೆ. ಕಳೆದ ಎರಡು ತಿಂಗಳಿಂದ ಅಫ್ಸಾ ತನ್ನ ತಾಯಿಯ ಮನೆಯಲ್ಲೇ ಇದ್ದರು.