ಕಾರವಾರ: ಸಂತಾನೋತ್ಪತ್ತಿ ಗಾಗಿ ಅರಬ್ಬಿ ಸಮುದ್ರದ ಸುರಕ್ಷಿತ ಕಡಲತೀರವನ್ನು ಆಯ್ದುಕೊಳ್ಳವ olive ridley ಕಡಲಾಮೆ ಡಿಸೆಂಬರ್ ತಿಂಗಳಲ್ಲೇ ಕಾರವಾರದ (Karwar) ದೇವಭಾಗ ಕಡಲತೀರಕ್ಕೆ ಬಂದಿದ್ದು ಕಡಲ ತೀರದಲ್ಲಿ ಮೊಟ್ಟೆಯನ್ನಿಟ್ಟಿದೆ.
ಕಾರವಾರದ ದೇವಭಾಗ ಕಡಲ ತೀರದಲ್ಲಿ ಭಾನುವಾರ olive ridley ಕಡಲಾಮೆ ಮೊಟ್ಟೆ ಇಟ್ಟ ಪ್ರದೇಶ ವನ್ನು ಗುರುತಿಸಿ, ಕಾರವಾರ ವಿಭಾಗದ DCF Dr. Prashant kumar ಅವರ ಮಾರ್ಗದರ್ಶನ ದ ಮೇರೆಗೆ coastal & marine ecosystem cell karwar ವತಿಯಿಂದ ಮೊಟ್ಟೆಗಳನ್ನು (Tortiles Egg) ಸಂರಕ್ಷಿಸಿ ಇಡಲಾಗಿದೆ.
Advertisement
Advertisement
ಇದು ಈ ವರ್ಷ ದಾಖಲಾದ ಪ್ರಥಮ ಕಡಲಾಮೆ ಮೊಟ್ಟೆ ಇಟ್ಟ ಗೂಡು ಇದಾಗಿದ್ದು, ಪ್ರತಿ ವರ್ಷ ಕಡಲಾಮೆಗಳು ದೇವಭಾಗ ಕಡಲ ತೀರಭಾಗದಲ್ಲಿ ಮೊಟ್ಟೆಇಡುತ್ತವೆ. ಕಳೆದ ಬಾರಿ ಸಹ ಅರಣ್ಯ ಇಲಾಖೆ ಮೊಟ್ಟೆ ರಕ್ಷಣೆ ಮಾಡಿ ಮರಿಗಳನ್ನು ಕಡಲಿಗೆ ಬಿಟ್ಟಿದ್ದು, ಕಡಲಾಮೆ ಗಳು ಮೊಟ್ಟೆ ಇಟ್ಟ ಬಗ್ಗೆ ಮಾಹಿತಿ ಬಂದಲ್ಲಿ ಮಾಹಿತಿ ಹಂಚಿಕೊಳ್ಳಲು ಅರಣ್ಯ ಇಲಾಖೆ ವಿನಂತಿಸಿದ್ದು ಮೊಟ್ಟೆ ಇಟ್ಟ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಸಹ ನೀಡಲಾಗುತ್ತದೆ.