– ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ನಾಶ
ಗದಗ/ಧಾರವಾಡ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಣ್ಣೆಹಳ್ಳ (Bennehalla) ಭೋರ್ಗರೆಯುತ್ತಿದೆ. ರೋಣ ತಾಲೂಕಿನ ಯಾವಗಲ್ ಬಳಿ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಪ್ರವಾಹದಿಂದ (Flood) ಬೆಳೆ ಕಳೆದುಕೊಂಡ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ನರಗುಂದನಿಂದ ಯಾವಗಲ್ ಮಾರ್ಗವಾಗಿ ರೋಣ, ಗಜೇಂದ್ರಗಡ, ಕುಷ್ಟಗಿ ಮಾರ್ಗವಾಗಿ ಸಿಂಧನೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ಬಂದ್ ಆಗಿದ್ದು, ಸೇತುವೆ ಮೇಲ್ಭಾಗದಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಇದರಿಂದ ಕಳೆದ ಮೂರು-ನಾಲ್ಕು ದಿನಗಳಿಂದ ಪ್ರಯಾಣಿಕರು, ರೈತರು ಪರದಾಡುವಂತಾಗಿದೆ. ಜನರು ಹಳ್ಳ ದಾಟದಂತೆ ಭದ್ರತಾ ಸಿಬ್ಬಂದಿಗಳನ್ನು ಸಹ ನೇಮಿಸಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ: ಸಚಿವ ಪರಮೇಶ್ವರ್
1971-72ರಲ್ಲಿ ನಿರ್ಮಾಣವಾದ ಈ ಕಿರಿದಾದ ಸೇತುವೆ ಮೇಲ್ದರ್ಜೆಗೆ ಏರಿಸಬೇಕು. ಬೆಣ್ಣೆಹಳ್ಳ ಒತ್ತುವರಿ ತೆರವುಗೊಳಿಸಬೇಕು. ಪದೇಪದೆ ಪ್ರವಾಹ ಹಾಗೂ ಬೆಳೆ ಹಾನಿ ಆಗುವುದನ್ನು ತಪ್ಪಿಸಬೇಕು ಎಂಬುದು ಈ ಭಾಗದ ಜನರ ಕೂಗಾಗಿದೆ. ಬೆಣ್ಣೆಹಳ್ಳ ಪ್ರವಾಹದಿಂದ ಬೆಳೆ ಕಳೆದುಕೊಂಡ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ವೈದ್ಯೆಯ ಯಡವಟ್ಟಿಗೆ ಬಾಣಂತಿ ಬಲಿ!