ಕಲಬುರಗಿ: ಕಿತ್ತೋಗಿರೋ ಹರಕು ಮುರುಕು ಸೀಟು, ಒಡೆದು ಹೋಗಿರೋ ಫ್ರಂಟ್ ಗ್ಲಾಸ್. ಆಗಲೋ ಈಗಲೋ ಕಿತ್ತು ಬರುವಂತಿರುವ ಸ್ಟೇರಿಂಗ್. ಗಾಡಿ ಸ್ಟಾರ್ಟ್ ಮಾಡಿದ್ರೆ ಹೊರಬೀಳೋ ದಟ್ಟ ಕಪ್ಪು ಹೊಗೆ. ಅಯ್ಯೋ ಈ ಡಕೋಟ ಬಸ್ ಫಿಲ್ಮ್‍ನಲ್ಲಿರೋ ಬಸ್ ಅಲ್ಲ. ಕಲಬುರಗಿ ಸೇರಿದಂತೆ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಿತ್ಯ ಸಂಚರಿಸುವ ಬಸ್‍ಗಳಿವು.
Advertisement
ಈ ಡಕೋಟಾ ಬಸ್‍ಗಳನ್ನ ನೋಡಿದ್ರೆ ಪ್ರಯಾಣ ಮಾಡ್ಲಿಕ್ಕೆ ಮನಸ್ಸೇ ಬರಲ್ಲ. ಈ ಬಸ್ ಹತ್ತಿದ್ರೆ ಆರಾಮಾಗಿ ಇಳೀತೀವಾ ಅನ್ನೋ ಡೌಟ್ ಶುರುವಾಗುತ್ತೆ. ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡ್ಬೇಕಾಗುತ್ತೆ. ಕಲಬುರಗಿ ವ್ಯಾಪ್ತಿಯ ಈಶಾನ್ಯ ಸಾರಿಗೆಯ ಶೇ.14 ರಷ್ಟು ಬಸ್‍ಗಳು ಅಧ್ವಾನಗೊಂಡಿವೆ.
Advertisement
Advertisement
ಇಂತಹ ಡಕೋಟಾ ಬಸ್‍ಗಳನ್ನ ಕೂಡಲೇ ಸ್ಕ್ರ್ಯಾಪ್ ಮಾಡಿ ನೂತನ ಬಸ್ ಸೌಲಭ್ಯ ಪ್ರಯಾಣಿಕರಿಗೆ ನೀಡಬೇಕಿತ್ತು. ಆದ್ರೆ ಇಲಾಖೆ ಅದೇ ಬಸ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಬಿಟ್ಟಿದೆ. ಈ ಬಗ್ಗೆ ಈಶಾನ್ಯ ಸಾರಿಗೆ ಇಲಾಖೆಯ ಅಧ್ಯಕ್ಷರನ್ನು ಕೇಳಿದ್ರೆ 2 ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳ್ತಿದ್ದಾರೆ.
Advertisement
ಈ ಹಿಂದೆ ಕೂಡ ಡಕೋಟಾ ಬಸ್‍ಗಳಿಂದ ಹಲವು ಅಪಘಾತ ಪ್ರಕರಣ ನಡೆದಿದೆ. ಆದ್ರೂ ಈಶಾನ್ಯ ಸಾರಿಗೆ ಇಲಾಖೆ ಎಚ್ಚೆತ್ತುಕೊಳ್ಳದಿರೋದು ದುರಂತ.