– ಬ್ಯಾಂಕಿನಲ್ಲಿ ಕೇಳಿದ್ರೆ ನಮಗೆ ಬರಲ್ಲ, ನಾವು ಹಾಕಿಲ್ಲ ಅಂದ್ರು
ದಾವಣಗೆರೆ: ಎರಡು ಸಾವಿರ ಮುಖಬೆಲೆಯ ನೋಟುಗಳು ಬಂದಾಗಿನಿಂದ ಜನರಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಅದರಲ್ಲೂ ಎಟಿಎಂ ಗಳಲ್ಲಿ ಹರಿದ ಹಾಗೂ ಬಣ್ಣ ಹೋಗಿರುವ ನೋಟುಗಳು ಗ್ರಾಹಕರ ಕೈ ಸೇರುತ್ತಿವೆ.
ದಾವಣಗೆರೆಯ ಎಸ್.ಎಸ್ ಆಸ್ಪತ್ರೆಯಲ್ಲಿರುವ ಎಸ್.ಬಿ.ಎಂ ಎಟಿಎಂನಲ್ಲಿ ರಾಜು ಅವರಿಗೆ ಎಟಿಎಂ ನಿಂದ ಹರಿದ ಎರಡು ಸಾವಿರ ನೋಟುಗಳು ಬಂದಿವೆ. ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಔಷಧಿ ತೆಗೆದುಕೊಳ್ಳಲು ಎಟಿಎಂ ನಿಂದ ಆರು ಸಾವಿರ ಹಣ ಡ್ರಾ ಮಾಡಿದಾಗ ಹರಿದ ಎರಡು ಸಾವಿರ ನೋಟುಗಳು ಬಂದಿವೆ. ಇದನ್ನೂ ಓದಿ: ಎಟಿಎಂನಲ್ಲಿ ಹರಿದ, ಮಸಿ ಹತ್ತಿದ 2 ಸಾವಿರ ನೋಟುಗಳು ಪತ್ತೆ
Advertisement
Advertisement
ನೋಟು ಬದಲೀಕರಣ ಮಾಡುವಂತೆ ಎಸ್.ಬಿಎಂ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಆದರೆ ಅವರು ನಮಗೆ ಬರುವುದಿಲ್ಲ. ನಾವು ಎರಡು ಸಾವಿರ ನೋಟುಗಳನ್ನು ಎಟಿಎಂನಲ್ಲಿ ಹಾಕಿಲ್ಲ. ಬೇರೆ ಬ್ಯಾಂಕಿನಲ್ಲಿ ಹೋಗಿ ವಿಚಾರಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಟಿಎಂನಿಂದ ಡ್ರಾ ಮಾಡ್ದಾಗ ಸುಟ್ಟ, ಹರಿದ, ಮಸಿ ಮೆತ್ತಿಕೊಂಡ 6 ನೋಟುಗಳು ಬಂದ್ವು!
Advertisement
ಮೂರು-ನಾಲ್ಕು ಬ್ಯಾಂಕ್ ಗಳಲ್ಲಿ ವಿಚಾರಿಸಿದರೂ ನೋಟುಗಳನ್ನು ಬದಲೀಕರಣ ಮಾಡಿಕೊಟ್ಟಿಲ್ಲ. ಇತ್ತ ಹಣವಿಲ್ಲದೆ ನೋಟುಗಳ ಬದಲೀಕರಣ ಮಾಡದೇ ರಾಜು ಒದ್ದಾಡುತ್ತಿದ್ದಾರೆ. ನಮ್ಮಂತೆ ಯಾರಿಗೂ ಆಗಬಾರದು, ಆಸ್ಪತ್ರೆಯಲ್ಲಿ ಇರುವವರಿಗೆ ಔಷಧಿಗಾಗಿ ಹಣ ಹೊಂದಿಸಿದರೆ, ಈಗ ಎಟಿಎಂನಿಂದ ಹರಿದ ನೋಟುಗಳು ಬಂದಿವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Advertisement