ಇಸ್ಲಾಮಾಬಾದ್: ಪಾಕಿಸ್ತಾನದ ಉಗ್ರಗಾಮಿಗಳು ಧ್ವಂಸಗೊಳಿಸಿದ್ದ ಹಳೆಯ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲು ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಆದೇಶಿಸಿದ್ದಾರೆ.
ಕಳೆದ ವರ್ಷ ವಾಯುವ್ಯ ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಗುಂಪೊಂದು ಶತಮಾನದಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿತ್ತು. ಈಗ ಮತ್ತೆ ಆ ದೇವಾಲಯವನ್ನು ನಿರ್ಮಿಸಲು ಹಾಗೂ ಭಕ್ತರಿಗೆ ದೇವಾಲಯವನ್ನು ನೋಡಲು ಅವಕಾಶ ಮಾಡಿಕೊಡಲು ಗುಲ್ಜಾರ್ ಅಹ್ಮದ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಕೇರಳ ಪೊಲೀಸರಿಂದ ಶೃಂಗೇರಿ ಮೂಲದ ನಕ್ಸಲರ ಬಂಧನ
Advertisement
Advertisement
ನಿನ್ನೆ ಈ ಕುರಿತು ಮಾತನಾಡಿದ ಅವರು, ಕಳೆದ ವರ್ಷ ಡಿಸೆಂಬರ್‌ನಲ್ಲಿ, ಖೈಬರ್ ಪಖ್ತುನ್‍ಖ್ವಾದ ಕರಕ್ ಜಿಲ್ಲೆಯ ತೇರಿ ಗ್ರಾಮದಲ್ಲಿ ಶತಮಾನದಷ್ಟು ಹಳೆಯದಾದ ಶ್ರೀ ಪರಮ ಹನ್ಸ್ ಜಿ ಮಹಾರಾಜ್ ದೇವಸ್ಥಾನವನ್ನು ಜಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್(ಜೆಯುಐ-ಎಫ್) ಗೆ ಸೇರಿದ ಕೆಲವು ಸ್ಥಳೀಯ ಧರ್ಮಗುರುಗಳ ನೇತೃತ್ವದ ಗುಂಪೊಂದು ಧ್ವಂಸಗೊಳಿಸಿ ಕೆಡವಲಾಯಿತು. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಪುನರ್ ನಿರ್ಮಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.
Advertisement
ಈ ಘಟನೆಯಿಂದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮುಜುಗರ ಉಂಟಾಗಿದ್ದು, ಅದಕ್ಕೆ ದೇವಾಲಯದ ಮೇಲೆ ದಾಳಿ ಮಾಡಿದ ದಾಳಿಕೋರರಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಹಣವನ್ನು ಮರುಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದರು.
Advertisement
ಸೋಮವಾರ ಧ್ವಂಸಗೊಳಿಸಿದ ದೇವಾಲಯವನ್ನು ಪುನರ್‌ನಿರ್ಮಿಸಲು ಬೃಹತ್ ಸಮಾರಂಭವನ್ನು ಹಿಂದೂ ಸಮುದಾಯದವರಿಗೆ ನಾವೆಲ್ಲರೂ ಒಂದೇ ಎಂದು ಹೇಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಹ್ಮದ್ ಅವರು ಹಿಂದೂಗಳ ಜೊತೆ ಒಗ್ಗಟ್ಟನ್ನು ವ್ಯಕ್ತಪಡಿಸಲು ದೀಪಾವಳಿ ಹಬ್ಬವನ್ನು ಆಚರಿಸಲು ಹೋಗಿದ್ದರು. ಇದನ್ನೂ ಓದಿ: ಸೌದೆ ಹಿಡಿದು ದೇವಿರಮ್ಮನ ದರ್ಶನ – ಅಪ್ಪು ಅಭಿಮಾನಿಯ ವಿಶೇಷ ಹರಕೆ!
ಈ ವೇಳೆ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಯಾವಾಗಲೂ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮುಂದೆ ಭವಿಷ್ಯದಲ್ಲಿ ಅದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದರು.