ಹೈದರಾಬಾದ್: ಶಟ್ಲರ್ ಪಿವಿ ಸಿಂಧು ಚೀನಾ ಕ್ರೀಡಾ ಉತ್ಪನ್ನಗಳನ್ನು ತಯಾರಿಸುವ ಲಿ ನಿಂಗ್ ಕಂಪನಿಯ ಜೊತೆ 50 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೇಶದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಆಟಗಾರರನ್ನು ಹೊರತು ಪಡಿಸಿ ಅತಿ ಹೆಚ್ಚು ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಈಗ ಸಿಂಧು ಪಾತ್ರರಾಗಿದ್ದಾರೆ. ಇದರ ಜೊತೆಯಲ್ಲೇ 50 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ದೇಶದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಪಟ್ಟ ಈಗ ಸಿಂಧುಗೆ ಒಲಿದಿದೆ. ಇದನ್ನೂ ಓದಿ: ಕೊಹ್ಲಿಯ ಒಂದು ದಿನದ ಬ್ರಾಂಡ್ ವಾಲ್ಯೂ 4.5-5 ಕೋಟಿ ರೂ.!
Advertisement
Advertisement
4 ವರ್ಷಗಳ ಪ್ರಚಾರಕ್ಕಾಗಿ ಸಿಂಧು ಅವರು ಲಿ ನಿಂಗ್ ಕಂಪನಿಯ ಜೊತೆ 50 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ ಪಿವಿ ಸಿಂಧು ಅವರಿಗೆ ಪ್ರಯೋಜಕತ್ವ ಹಣ ಮತ್ತು 5 ಕೋಟಿ ರೂ. ಮೌಲ್ಯದ ಸಲಕರಣೆಗಳನ್ನು ನೀಡಲಿದೆ. ಇದನ್ನೂ ಓದಿ: ಅತಿ ಹೆಚ್ಚು ಆದಾಯ- ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಪಿವಿ ಸಿಂಧುಗೆ ಮಾತ್ರ ಸ್ಥಾನ
Advertisement
ಲಿ ನಿಂಗ್ ಕಂಪನಿ ಈಗಾಗಲೇ ಶಟ್ಲರ್ ಕಿಡಂಬಿ ಶ್ರೀಕಾಂತ್ ಜೊತೆ 4 ವರ್ಷಕ್ಕೆ 35 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಇದನ್ನೂ ಓದಿ: ಕೊಹ್ಲಿಯ ಒಂದು ಪೋಸ್ಟ್ಗೆ ಸಿಗುತ್ತೆ 82 ಲಕ್ಷ ರೂ.! – ಪೋಸ್ಟ್ಗೆ ಹೇಗೆ ಹಣ ಪಡೆಯುತ್ತಾರೆ? ಮಾನದಂಡವೇನು?
Advertisement
2023ರವರೆಗೆ ಲಿ ನಿಂಗ್ ಕಂಪನಿ ಪ್ರಚಾರ ಮಾಡಲಿರುವ ಸಿಂಧು ಈಗಾಗಲೇ ಪಿಎನ್‍ಬಿ ಮೆಟ್‍ಲೈಫ್, ವೈಜಾಗ್ ಸ್ಟೀಲ್, ಬ್ಯಾಂಕ್ ಆಫ್ ಬರೋಡಾ, ಆಪಿಸ್ ಹನಿ, ಜಾನ್ಸನ್ ಆಂಡ್ ಜಾನ್ಸನ್, ಮೂವ್, ಗ್ಯಾಟೋರೇಡ್, ಪ್ಯಾನಾಸೋನಿಕ್ ಬ್ಯಾಟರಿ, ಬ್ರಿಡ್ಜ್ ಸ್ಟೋನ್, ಮಿಶನ್ ಸ್ಫೋರ್ಟ್ಸ್, ಜೆಬಿಎಲ್, ಮಿಂಟ್ರಾ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದಾರೆ.
2018ರ ಜಕರ್ತಾ ಏಷ್ಯನ್ ಕ್ರೀಡೆಯಲ್ಲಿ ಟೀಂ ಇಂಡಿಯಾದ ಬ್ಯಾಡ್ಮಿಂಟನ್ ತಂಡದ ಅಧಿಕೃತ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಲಿ ನಿಂಗ್ 2020ರ ಟೋಕಿಯೋ ಒಲಿಂಪಿಕ್ಸ್ ಭಾರತದ ತಂಡದ ಉಡುಪಿನ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿಯ ಜಾಹಿರಾತು ಸಂಭಾವನೆ ಹೆಚ್ಚಳ- 1 ದಿನದ ಸಂಭಾವನೆ ಎಷ್ಟು ಗೊತ್ತಾ?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv