ನವದೆಹಲಿ: ಚುನಾವಣಾ ಬಾಂಡ್‌ಗಳ (Electoral Bonds) ವಿಷಯದಲ್ಲಿ ಇರುವ ಅನೈತಿಕ ಕೊಡು–ಕೊಳ್ಳುವಿಕೆಯ (Quid Pro Quo) ಸಂಬಂಧವಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ಉಹೆಯ ಆಧಾರದ ಮೇಲೆ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಕಾನೂನಿನಡಿಯಲ್ಲಿ ಲಭ್ಯವಿರುವ ಆಧಾರದ ಮೇಲೆ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ದಿಷ್ಟ ಹಕ್ಕುಗಳನ್ನು ತನಿಖೆ ಮಾಡಲು ಅಧಿಕಾರಿಗಳು ನಿರಾಕರಿಸಿದಾಗ ಮಾತ್ರ ನಾವು ಮಧ್ಯಪ್ರವೇಶ ಮಾಡಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: Wayanad Landslide | ಸರ್ಕಾರದ ಅನುಮತಿ ಇಲ್ಲದೇ ಅಭಿಪ್ರಾಯ ಹೇಳುವಂತಿಲ್ಲ: ವಿಜ್ಞಾನಿಗಳಿಗೆ ಕೇರಳ ಸರ್ಕಾರ ನಿರ್ಬಂಧ
Advertisement
Advertisement
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಹಂತದಲ್ಲಿ ತನಿಖೆಗೆ ಆದೇಶ ನೀಡುವುದು ಅನುಚಿತವಲ್ಲ ಎಂದು ಹೇಳಿದೆ.
Advertisement
ಶೆಲ್ ಕಂಪನಿಗಳು ಹಾಗೂ ನಷ್ಟ ಅನುಭವಿಸುತ್ತಿರುವ ಕಂಪನಿಗಳೂ ಚುನಾವಣಾ ಬಾಂಡ್‌ಗಳನ್ನು ಖರೀದಿ ಮಾಡಿದೆ. ಈ ಕಂಪನಿಗಳ ಆದಾಯದ ಮೂಲ ಏನು ಎನ್ನುವುದನ್ನು ಪತ್ತೆ ಮಾಡಬೇಕು ಜೊತೆಗೆ ಆ ಹಣವನ್ನು ರಾಜಕೀಯ ಪಕ್ಷಗಳಿಂದ ಮರಳಿ ವಸೂಲು ಮಾಡಲು ಕೋರ್ಟ್ ತನಿಖಾ ತಂಡಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
Advertisement