ನವದೆಹಲಿ: ಬಿಲ್ಕಿಸ್ ಬಾನೋ ಪ್ರಕರಣದ (Bilkis Bano Case) ಅಪರಾಧಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ಗುಜರಾತ್ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿದ್ದ ಕಟು ಟೀಕೆಯನ್ನು ತೆಗೆದುಹಾಕಲು ನ್ಯಾಯಾಲಯ ನಿರಾಕರಿಸಿದೆ.
2002ರ ಗುಜರಾತ್ ಗಲಭೆಯ ವೇಳೆ (Gujarat riots) ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬಸ್ಥರನ್ನು ಹತ್ಯೆಗೈದಿದ್ದ 11 ಮಂದಿ ಅಪರಾಧಿಗಳ ಅಕಾಲಿಕ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿತ್ತು. ಬಳಿಕ ತನ್ನ ವಿರುದ್ಧದ ಕೆಲವು ಟೀಕೆಗಳನ್ನು ತೆಗೆದುಹಾಕುವಂತೆ ಗುಜರಾತ್ ಸರ್ಕಾರ (Gujarat government) ಮನವಿ ಮಾಡಿತ್ತು. ಇದನ್ನೂ ಓದಿ: Badlapur Encounter | ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ?: ದೇವೇಂದ್ರ ಫಡ್ನವೀಸ್
Advertisement
ಸುಪ್ರೀಂ ಕೋರ್ಟ್ (Supreme Court) ಅಪರಾಧಿಗಳ ಶಿಕ್ಷೆ ರದ್ದುಗೊಳಿಸುವ ವೇಳೆ ರಾಜ್ಯ ಸರ್ಕಾರ `ಅಪರಾಧಿಗಳೊಂದಿಗೆ ಸಹಕರಿಸಿ ಒಪ್ಪಂದದಿಂದ ವರ್ತಿಸಿದೆ’ ಎಂದು ಟೀಕಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರವು ಈ ಟೀಕೆ ಸೂಕ್ತವಲ್ಲ ಮತ್ತು ಪ್ರಕರಣದ ದಾಖಲೆಗೆ ವಿರುದ್ಧವಾಗಿದೆ. ಅರ್ಜಿದಾರರ ವಿರುದ್ಧ ಪಕ್ಷಪಾತವಾಗಿದೆ ಎಂದು ವಾದಿಸಿತ್ತು.
Advertisement
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ಧ ದ್ವಿಸದಸ್ಯ ಪೀಠ ಗುಜರಾತ್ ಸರ್ಕಾರದ ವಾದವನ್ನು ಒಪ್ಪಲಿಲ್ಲ.
Advertisement
ಈ ಪ್ರಕರಣದಲ್ಲಿ ಸನ್ನಡತೆ ಆಧಾರದ ಮೇಲೆ ಗುಜರಾತ್ ಸರ್ಕಾರದಿಂದ ಬಿಡುಗಡೆಯಾದ 11 ಮಂದಿ ಜೈಲಿಗೆ ಮರಳಬೇಕೆಂದು ಜನವರಿಯಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
Advertisement
ಅಪರಾಧಿಗಳನ್ನು ವಿಚಾರಣೆ ನಡೆಸಿದ ರಾಜ್ಯದಿಂದ ಮಾತ್ರ ಬಿಡುಗಡೆ ಮಾಡಬಹುದು. ಈ ಸಂದರ್ಭದಲ್ಲಿ, ಮಹಾರಾಷ್ಟ್ರ ಈ ಪ್ರಕರಣದ ತನಿಖೆ ನಡೆಸಿದೆ. ಗುಜರಾತ್ ರಾಜ್ಯವು ಅಧಿಕಾರವನ್ನು ಚಲಾಯಿಸುವುದು, ಅಧಿಕಾರದ ದುರುಪಯೋಗದ ನಿದರ್ಶನವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಜುಲೈನಲ್ಲಿ ಸುಪ್ರೀಂ ಕೋರ್ಟ್, ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್ ಭಗವಾನದಾಸ್ ಮತ್ತು ರಾಜುಭಾಯ್ ಬಾಬುಲಾಲ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿತ್ತು.
ಬಿಲ್ಕಿಸ್ ಬಾನೋ ಗುಜರಾತ್ ಕೋಮು ಗಲಭೆಯ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಗಲಭೆಯಲ್ಲಿ ಹತ್ಯೆಯಾದ ಏಳು ಕುಟುಂಬದ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು. ಇದನ್ನೂ ಓದಿ: 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಅರುಣಾಚಲ ಪ್ರದೇಶದ ಹಾಸ್ಟೆಲ್ ವಾರ್ಡನ್‌ಗೆ ಗಲ್ಲು ಶಿಕ್ಷೆ