ಇಸ್ಲಾಮಾಬಾದ್: 1992ರಲ್ಲಿ ವಿಶ್ವಕಪ್ (World Cup) ಗೆದ್ದಿದ್ದ ಪಾಕ್ (Pakistan) ತಂಡ, ಆ ಬಳಿಕ ಇದೇ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ವಿಶ್ವಾಸದಲ್ಲಿದೆ. ಈ ಬಗ್ಗೆ ತಂಡದ ನಾಯಕ ಬಾಬರ್ ಆಜಂ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೀಸಾ ಸಮಸ್ಯೆ ಬಗೆಹರಿದ ಬಳಿಕ ಬಾಬರ್ ಆಜಂ ನೇತೃತ್ವದ ತಂಡ ಭಾರತಕ್ಕೆ ಪ್ರಯಾಣಿಸಲು ಸಜ್ಜಾಗಿದೆ. ಅಕ್ಟೋಬರ್ 5ರಿಂದ ಅಹಮದಾಬಾದ್‍ನಲ್ಲಿ ಆರಂಭವಾಗಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಗಳನ್ನಾಡಲು ಪಾಕ್ ಈ ಮೂಲಕ ಸಿದ್ಧವಾಗಿದೆ. 2016ರ ಟಿ20 ವಿಶ್ವಕಪ್ ನಂತರ ಇದೇ ಮೊದಲ ಬಾರಿಗೆ ಪಾಕ್ ಕ್ರಿಕೆಟ್ ತಂಡವು ಭಾರತಕ್ಕೆ ಬರುತ್ತಿದೆ. ಅದಕ್ಕೂ ಹಿಂದೆ 2012ರಲ್ಲಿ ಕೊನೆಯ ಏಕದಿನ ಪಂದ್ಯವನ್ನು ಪಾಕ್ ತಂಡವು ಭಾರತದಲ್ಲಿ ಆಡಿತ್ತು. ಅದಾಗಿ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಪಾಕಿಸ್ತಾನವು ಭಾರತದಲ್ಲಿ ವಿಶ್ವಕಪ್ ಟೂರ್ನಿಯ ಮೂಲಕ ಏಕದಿನ ಪಂದ್ಯವನ್ನು ಆಡುತ್ತಿದೆ. ಇದನ್ನೂ ಓದಿ: Ind vs Aus: ವೈಟ್‌ವಾಶ್‌ನಿಂದ ತಪ್ಪಿಸಿಕೊಳ್ಳಲು ಆಸೀಸ್ ತವಕ – ಭಾರತಕ್ಕೆ 353 ರನ್‌ಗಳ ಗುರಿ
Advertisement
ಈ ನಡುವೆ ಪಾಕಿಸ್ತಾನವು ಭಾರತದಲ್ಲಿ ವಿಶ್ವಕಪ್ ಗೆಲ್ಲುವುದು ಕಷ್ಟ ಎಂದು ಹೆಚ್ಚಿನ ತಜ್ಞರು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಪಾಕ್ ತಂಡವು ಕನಿಷ್ಠ ಸೆಮಿಫೈನಲ್ ಪ್ರವೇಶಿಸುವುದು ಖಚಿತ ಎಂದು ಅನುಭವಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪಾಕ್ ನಾಯಕ ಬಾಬರ್ ಆಜಂ ಟ್ರೋಫಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಪಾಕಿಸ್ತಾನ ವಿಶ್ವಕಪ್ ತಂಡದಲ್ಲಿ ಇಬ್ಬರನ್ನು ಹೊರತುಪಡಿಸಿದರೆ ಉಳಿದ ಆಟಗಾರರಿಗೆ ಭಾರತದಲ್ಲಿ ಆಡಿದ ಅನುಭವವಿಲ್ಲ. ಪ್ರಸ್ತುತ ಪಾಕಿಸ್ತಾನ ತಂಡದ ಸದಸ್ಯರಾದ ಮೊಹಮ್ಮದ್ ನವಾಜ್ ಮತ್ತು ಅಘಾ ಸಲ್ಮಾನ್ ಮಾತ್ರ ಈ ಹಿಂದೆ ಭಾರತದ ನೆಲದಲ್ಲಿ ಆಡಿದ್ದಾರೆ. ತಂಡದ ನಾಯಕ ಬಾಬರ್ ಸೇರಿದಂತೆ ಉಳಿದ ಆಟಗಾರರಿಗೆ ಭಾರತದಲ್ಲಿ ಆಡಿದ ಅನುಭವವಿಲ್ಲ. ಆದರೂ ಈ ಬಾರಿಯ ಪಂದ್ಯದಲ್ಲಿ ಕಪ್ ಗೆಲ್ಲುವ ವಿಶ್ವಾಸವನ್ನು ತೆರೆದಿಟ್ಟಿದ್ದಾರೆ.
Advertisement
ಈ ಬಗ್ಗೆ ಮಾತನಾಡಿರುವ ಬಾಬರ್, ನಾವೇನೂ ಹೆಚ್ಚು ಒತ್ತಡದಲ್ಲಿ ಆಡುವುದಿಲ್ಲ. ಭಾರತದ ಮೈದಾನ ಹಾಗೂ ಪಿಚ್‍ಗಳ ಕುರಿತು ನಾವು ಈಗಾಗಲೇ ಸಾಕಷ್ಟು ಅಧ್ಯಯನ ಮಾಡಿದ್ದೇವೆ. ಏಷ್ಯಾದ ಇತರ ದೇಶಗಳಂತೆ ಭಾರತದ ಪಿಚ್‍ಗಳು ಕೂಡಾ ಇರಲಿವೆ. ಈ ಬಾರಿ ನಾವು ವಿಶ್ವಕಪ್ ಟ್ರೋಫಿಯೊಂದಿಗೆ ಹಿಂತಿರುಗುತ್ತೇವೆ ಎಂಬುದು ನನ್ನ ಅಭಿಪ್ರಾಯ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
2023ರ ವಿಶ್ವಕಪ್‍ನಲ್ಲಿ ಪಾಕಿಸ್ತಾನವು ಅಗ್ರ 4ರಲ್ಲಿ ಒಂದು ಸ್ಥಾನ ಪಡೆಯುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಇದರಲ್ಲಿ ದಕ್ಷಿಣ ಆಫ್ರಿಕಾದ ಅನುಭವಿ ಕ್ರಿಕೆಟಿಗ ಹಾಶಿಮ್ ಆಮ್ಲಾ ಕೂಡಾ ಒಬ್ಬರು. ಅತ್ತ ಬಾಬರ್ ಆಜಂ ಅದಕ್ಕೂ ಹೆಚ್ಚು ವಿಶ್ವಾಸದಲ್ಲಿದ್ದಾರೆ. 1992ರಲ್ಲಿ ಇಮ್ರಾನ್ ಖಾನ್ ನೇತೃತ್ವದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಭಾರತದ ಅಂಗಳದಲ್ಲಿ ವಿಶ್ವಕಪ್ ಎತ್ತುವ ಉತ್ಸಾಹದಲ್ಲಿ ಬಾಬರ್ ಬಳಗವಿದೆ. ಇದನ್ನೂ ಓದಿ: 20 ಓವರ್‌ಗಳಲ್ಲಿ 314 ರನ್, 9 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ; T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನೇಪಾಳ
Web Stories