ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಪೆಟ್ರೋಲ್ ಕಾರುಗಳ ವಿವರ ಇಲ್ಲಿದೆ ನೋಡಿ

Public TV
4 Min Read
PETROL CARS

ನವದೆಹಲಿ: ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ದರದಿಂದಾಗಿ ಗ್ರಾಹಕರು ಯಾವ ಕಾರನ್ನು ಖರೀದಿ ಮಾಡಬೇಕು ಎನ್ನುವ ಗೊಂದಲದಲ್ಲಿರುತ್ತಾರೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು ಮೈಲೇಜ್ ಎಷ್ಟು ನೀಡುತ್ತದೆ ಎನ್ನುವ ಆಧಾರದಲ್ಲಿ ಕಾರು ಖರೀದಿ ಮಾಡುತ್ತಾರೆ. ಇತ್ತೀಚೆಗಷ್ಟೇ ದೇಶದ ಹಲವು ಕಾರು ತಯಾರಿಕಾ ಸಂಸ್ಥೆಗಳು ತಮ್ಮ ವಾಹನಗಳ ಮೇಲೆ ಭಾರೀ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡಿವೆ. ಹೀಗಾಗಿ ಇಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ 10 ಕಾರುಗಳ ವಿವರ ಇಲ್ಲಿದೆ.

1. ರೆನಾಲ್ಟ್ ಕ್ವಿಡ್ – ಮೈಲೇಜ್ 25.17 ಕಿ.ಮೀ.

CAR NEW KWID
ರೆನಾಲ್ಟ್ ಕಂಪೆನಿಯಾ ಎಂಟ್ರಿ ಲೆವೆಲ್ ಹ್ಯಾಚ್‍ಬ್ಯಾಕ್ ಕಾರಾದ ಕ್ವಿಡ್ ಪ್ರತಿ ಲೀಟರ್ ಗೆ 25.17 ಕಿ.ಮೀ ಮೈಲೇಜ್ ನೀಡುತ್ತದೆ. ಕ್ವಿಡ್ 0.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದಲ್ಲದೇ 1.0 ಲೀಟರ್ ಎಂಜಿನ್ನಿನ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಮಾದರಿಗಳಲ್ಲಿ ಅನುಕ್ರಮವಾಗಿ 23.01 ಹಾಗೂ 24.04 ಕಿ.ಮೀ ಪ್ರತಿ ಲೀಟರ್ ಗೆ ಮೈಲೇಜ್ ನೀಡಲಿದೆ. ಕಾರಿನ ದರವು 2.66 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

2. ದಟ್ಸನ್ ರೆಡಿ ಗೊ- ಮೈಲೇಜ್ 25.17 ಕಿ.ಮೀ.

CAR NEW DUTSUN GO
ದಟ್ಸನ್ ಕಂಪೆನಿಯ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ರೆಡಿ ಗೊ, 0.8 ಲೀಟರ್ ಎಂಜಿನ್ ಹಾಗೂ 54 ಹಾರ್ಸ್ ಪವರ್ ಹೊಂದಿದೆ. ಇದು ಒಟ್ಟು ಪ್ರ.ಲೀಗೆ 25.17 ಕಿ.ಮೀ ನೀಡಲಿದೆ. ಇದರ ಜೊತೆ 1.0 ಲೀಟರ್ ಪವರ್ ಪುಲ್ ಎಂಜಿನ್ ಮಾದರಿಯೂ ಸಹ ಲಭ್ಯವಿದ್ದು, ಇದು 22.5 ಕಿ.ಮೀ ಮೈಲೇಜ್ ನೀಡುತ್ತದೆ. 2.56 ಲಕ್ಷ ರೂಪಾಯಿಗಳಿಂದ ಬೆಲೆ ಪ್ರಾರಂಭವಾಗುತ್ತದೆ.

3. ಮಾರುತಿ ಸುಜುಕಿ ಆಲ್ಟೊ 800 ಮೈಲೇಜ್ 24.7 ಕಿ.ಮೀ.

CAR NEW ALTO 800
ಸಣ್ಣ ಗಾತ್ರದ ಹ್ಯಾಚ್ ಬ್ಯಾಕ್ ಕಾರ್ ಆಗಿರುವ ಆಲ್ಟೊ 800, 0.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್ ಗೆ 24.7 ಕಿ.ಮೀ ಮೈಲೇಜ್ ನೀಡುತ್ತದೆ. ಆರಂಭಿಕ ಬೆಲೆ 2.56 ಲಕ್ಷ ರೂಪಾಯಿಗಳು.

4. ಮಾರುತಿ ಸುಜುಕಿ ಆಲ್ಟೊ ಕೆ 10- ಮೈಲೇಜ್ 24.07 ಕಿ.ಮೀ.

CAR NEW ALTO K10
ಸಣ್ಣ ಗಾತ್ರದ ಹ್ಯಾಚ್ ಬ್ಯಾಕ್ ಕಾರಾಗಿದ್ದು, 1.0 ಲೀಟರ್ ಎಂಜಿನ್ ಹಾಗೂ 68 ಎಚ್‍ಪಿ ಹೊಂದಿದೆ. ಇದು ಪ್ರತಿ ಲೀಟರ್ ಗೆ 24.7 ಕಿ.ಮೀ. ಮೈಲೇಜ್ ನೀಡುತ್ತದೆ. ಆರಂಭಿಕ ಬೆಲೆ 3.35 ಲಕ್ಷ ರೂಪಾಯಿ.

5. ಟಾಟಾ ಟಿಯಾಗೊ – ಮೈಲೇಜ್ 23.84 ಕಿ.ಮೀ.

CAR NEW TIAGO
1.2 ಲೀಟರ್ ಹಾಗೂ 85 ಹೆಚ್‍ಪಿ ಹೊಂದಿರುವ ಮಧ್ಯಮ ಗಾತ್ರದ ಹ್ಯಾಚ್ ಬ್ಯಾಕ್ ಕಾರಾಗಿದೆ. ಇದು ಪ್ರತಿ ಲೀಟರ್ ಗೆ 23.84 ಕಿ.ಮೀ ಮೈಲೇಜ್ ನೀಡುತ್ತದೆ. ಪ್ರಾರಂಭಿಕ 3.35 ಲಕ್ಷ ರೂಪಾಯಿಗಳು.

6. ಮಾರುತಿ ಸುಜುಕಿ ಸೆಲೆರಿಯೊ- ಮೈಲೇಜ್ ಮೈಲೇಜ್ 23.1 ಕಿ.ಮೀ.

CAR NEW CELERIO
ಮಧ್ಯಮ ಗಾತ್ರದ ಹ್ಯಾಚ್ ಬ್ಯಾಕ್ ಆಗಿರುವ ಸೆಲೆರಿಯೋ 1.0 ಲೀಟರ್ ಎಂಜಿನ್ ಜೊತೆ 68 ಹೆಚ್‍ಪಿ ಪವರ್ ಹೊಂದಿದೆ. ಇದು ಪ್ರತಿ ಲೀಗೆ 23.1 ಕಿ.ಮೀ ಮೈಲೇಜ್ ನೀಡುತ್ತದೆ. ಪ್ರಾರಂಭಿಕ ಬೆಲೆ 4.21 ಲಕ್ಷ ರೂಪಾಯಿಗಳು.

7. ಹ್ಯುಂಡೈ ಇಯಾನ್- ಮೈಲೇಜ್ 22.03 ಕಿ.ಮೀ.

CAR NEW EON 1
ಹುಂಡೈ ಕಂಪೆನಿಯಾ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಕಾರು ಇದಾಗಿದ್ದು, 0.8 ಲೀಟರ್ (814ಸಿಸಿ) ಎಂಜಿನ್ ಜೊತೆಗೆ 56 ಹೆಚ್‍ಪಿ ಪವರ್ ಹೊಂದಿದೆ. ಇಯಾನ್ ಪ್ರ.ಲೀ 22.03 ಕಿ.ಮೀ ಮೈಲೇಜ್ ನೀಡುತ್ತದೆ. ಪ್ರಾರಂಭಿಕ ದರ 3.3 ಲಕ್ಷ ರೂಪಾಯಿಗಳು.

8. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್ – ಮೈಲೇಜ್ 22 ಕಿ.ಮೀ.

MARUTHI SUZUKI 1
ಹ್ಯಾಚ್‍ಬ್ಯಾಕ್ ಸ್ವಿಫ್ಟ್ ಹಾಗೂ ಡಿಜೈರ್ ಸೆಡಾನ್ ಕಾರುಗಳಲ್ಲಿ 1.2 ಲೀಟರ್ ಎಂಜಿನ್ ಇದ್ದು, ಜೊತೆಗೆ 84 ಹೆಚ್‍ಪಿ ಪವರ್ ಹೊಂದಿದೆ. ಈ ಎರಡು ಕಾರುಗಳು ಪ್ರ.ಲೀ ಗೆ 22 ಕಿ.ಮೀ ಮೈಲೇಜ್ ನೀಡುತ್ತವೆ. ಸ್ವಿಫ್ಟ್ ಕಾರಿನ ಬೆಲೆ 4.49 ಲಕ್ಷ ರೂಪಾಯಿಗಳಿಂದ ಪ್ರಾರಂಭವಾದರೆ, ಡಿಜೈರ್ ಸೆಡಾನ್ ಕಾರಿನ ಬೆಲೆ 5.6 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಲಿದೆ. ಇದನ್ನೂ ಓದಿ: ಕಾರುಗಳ ಮೇಲೆ 50 ಸಾವಿರ ರೂ.ಗಳಿಂದ 14 ಲಕ್ಷ ರೂ. ರಿಯಾಯಿತಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

9. ಮಾರುತಿ ಸುಜುಕಿ ಸಿಯಾಝ್- ಮೈಲೇಜ್ 21.56 ಕಿ.ಮೀ.

CAR NEW CIAZ
ಮಧ್ಯಮ ಗಾತ್ರದ ಸೆಡಾನ್ ಕಾರಾಗಿರುವ ಸಿಯಾಝ್ 1.5 ಲೀ ಕೆ-ಸಿರೀಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ಜೊತೆ 105 ಹೆಚ್‍ಪಿ ಪವರ್ ಹೊಂದಿದೆ. ಇದಲ್ಲದೇ ಮೈಕ್ರೋ ಹೈಬ್ರೀಡ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಸಿಯಾಝ್ ಪ್ರತಿ ಲೀಟರ್ ಗೆ 21.56 ಕಿ.ಮೀ. ಮೈಲೇಜ್ ನೀಡುತ್ತದೆ. ಪ್ರಾರಂಭಿಕ ಬೆಲೆ 8.19 ಲಕ್ಷ ರೂಪಾಯಿಗಳು.

10. ಮಾರುತಿ ಸುಜುಕಿ ಬಲೆನೊ- ಮೈಲೇಜ್ 21.4 ಕಿ.ಮೀ.

CAR NEW BALANO 1
ಮಧ್ಯಮ ಗಾತ್ರದ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಆಗಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ 84 ಹೆಚ್‍ಪಿ ಪವರ್ ಇದೆ. ಪ್ರತಿ ಲೀಟರ್ ಗೆ 21.4 ಕಿ.ಮೀ ಮೈಲೇಜ್ ನೀಡುತ್ತದೆ. ಪ್ರಾರಂಭಿಕ ಬೆಲೆ 5.38 ಲಕ್ಷ ರೂಪಾಯಿಗಳು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *