‘ತೂಫಾನ್’ (Toofan Film) ಕನ್ನಡ ಮತ್ತು ಹಿಂದಿ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಕಲಾವಿದರ ಸಂಘದಲ್ಲಿ ತುಣುಕುಗಳ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಎಸ್.ಆರ್.ಮೂವೀಸ್ ಲಾಂಛನದಲ್ಲಿ ಬೆಳಗಾವಿ ಮೂಲದ ಕನ್ನಡ ಅಭಿಮಾನಿ ಷರೀಫ ಬೇಗಂ ನಡಾಫ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಆರ್.ಚಂದ್ರಕಾಂತ್. ಹೊಸ ಪ್ರತಿಭೆ ರೋಶನ್ ಕಥೆ ಬರೆದು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮತ್ತು ಮಿಲಿಟರಿ ನಿವೃತ್ತ ಅಧಿಕಾರಿಗಳು ಆಗಮಿಸಿ ತಂಡದ ಕೆಲಸವನ್ನು ಶ್ಲಾಘಿಸಿದರು. ಇದನ್ನೂ ಓದಿ:ಕಾನೂನಿಗಿಂತ ಯಾರು ಮೇಲಲ್ಲ, ಈ ಕೃತ್ಯ ಮಾಡುವ ವ್ಯಕ್ತಿತ್ವ ದರ್ಶನ್‌ದಲ್ಲ- ಮೌನ ಮುರಿದ ಸುಮಲತಾ
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಹಿತಿ ಕವಿರಾಜ್, ತಮ್ಮ ಶಿಷ್ಯ ಆರ್.ಚಂದ್ರಕಾಂತ್ ನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಲೈಟಿಂಗ್, ಮೇಕಿಂಗ್ ಎಲ್ಲವನ್ನು ದೊಡ್ಡ ಪರದೆ ಮೇಲೆ ನೋಡುವುದೇ ಚೆಂದ. ಬೇರೆ ಲೋಕ ಸೃಷ್ಡಿಸುವಂತ ಮಾತು ಕೇಳಿ ಬರುತ್ತಿದೆ. ಅದೇ ರೀತಿ ಇದು ಆಗಲಿ. ನಿರ್ದೇಶಕರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲೆಂದು ಶುಭ ಹಾರೈಸಿದರು. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ‘ಬಿಲ್ಲಾರಿ’ ಸಿನಿಮಾದ ಮುಹೂರ್ತ
- Advertisement -
- Advertisement -
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಚಂದ್ರಕಾಂತ್, ಸಿನಿಮಾವು ನನ್ನದು ಅನ್ನುವುದಕ್ಕಿಂತ ರೋಷನ್ ಕನಸು ಎಂದು ಹೇಳಬೇಕು. ಅವರು ಕಥೆ ಹೇಳಿ ನಾನೇ ನಿರ್ದೇಶನ ಮಾಡಬೇಕೆಂದು ಕೋರಿಕೊಂಡರು. 1994ರಲ್ಲಿ ಮಗ ತಂದೆಗೋಸ್ಕರ ಸೇಡು ತೀರಿಸಿಕೊಳ್ಳುವ ಕಥೆ ಹೊಂದಿದೆ. ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ನಿರ್ಮಾಪಕರ ಒತ್ತಾಯದ ಮೇರೆಗೆ ಗ್ಲಿಂಪ್ಸ್ ತೋರಿಸಲಾಗಿದೆ. ಇದು ಟೀಸರ್, ಟ್ರೈಲರ್ ಅಲ್ಲ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾದ ‘ತೂಫಾನ್’ ಸ್ಪಾರ್ಕ್ ಎನ್ನಬಹುದು. ನಮ್ಮ ಚಿತ್ರ ಹೇಗೆ ಬರುತ್ತಿದೆ, ಯಾವ ತರಹದಲ್ಲಿ ಇದೆ ಎಂಬುದನ್ನು ತೋರಿಸಲು ಇದನ್ನು ಸಿದ್ಧಪಡಿಸಲಾಗಿದೆ. ಹಿಂದೆ ‘ಭೈರ್ಯ-07’ ಹೆಸರು ಇತ್ತು. ಭೈರ್ಯ ನಾಯಕನ ಹೆಸರು ಆಗಿದ್ದು, ಬೇರೆ ತಿರುವು ಇರಲಿ ಅಂತ ‘ತೂಫಾನ್’ ಟೈಟಲ್ ಇಡಲಾಗಿದೆ. ಮುಖ್ಯ ಖಳನಾಯಕನಾಗಿ ಭೀಷ್ಮ ರಾಮಯ್ಯ ಉಳಿದಂತೆ ರಂಗಾಯಣ ರಘು, ಅಶ್ವಿನ್ ಹಾಸನ್, ಸೂರ್ಯಪ್ರವೀಣ್, ಅಯ್ಯಪ್ಪ ಶರ್ಮ, ಬಿ.ಸುರೇಶ್, ಉಗ್ರಂ ರವಿ ರೋಲ್‌ನ್ನು ಗೌಪ್ಯವಾಗಿಡಲಾಗಿದೆ. ಮುಂದೆ ಎಲ್ಲವನ್ನು ತಿಳಿಸುತ್ತೇನೆಂದು ಹೇಳಿದರು.
- Advertisement -
- Advertisement -
ನಾಯಕ ರೋಶನ್ ಮಾತನಾಡಿ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಕನ್ನಡ ಸಿನಿಮಾಗಳನ್ನು ನೋಡಲು ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲವೆಂಬ ಆಪಾದನೆ ಇದೆ. ಪ್ರತಿಭೆ ಇರುವ ಇಂತಹ ನಿರ್ದೇಶಕರಿಗೆ ಅವಕಾಶ ಕೊಡಬೇಕು. ನಾನು ಯಶ್ ಗರಡಿಯಲ್ಲಿ ಪಳಗಿದವನು. ಅವರು ಸಿನಿಮಾದ ತುಣುಕುಗಳನ್ನು ನೋಡಿಲ್ಲ. ಖಂಡಿತವಾಗಿಯೂ ಅವರಿಗೆ ತೋರಿಸುತ್ತೇನೆ. ಸಿನಿಮಾದ ಒನ್ ಲೈನ್ ಕಥೆ ನನ್ನದಾಗಿದ್ರೂ, ಅದಕ್ಕೆ ಸುಂದರವಾದ ಆಕಾರ ಕೊಡುತ್ತಿರುವುದು ನಿರ್ದೇಶಕರು ಎಂದು ಮಾತನಾಡಿದ್ದಾರೆ.
ಮುಗ್ಧ ಹುಡುಗಿ, ಯಾರಿಗೂ ಹೆದರದ ಹಾಗೂ ಮಹಾರಾಜನ ಮಗಳು ಯುವರಾಣಿ ಹೀಗೆ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಂದು ನಾಯಕಿ ಅನುಷಾ ರೈ (Anusha Rai) ಪಾತ್ರದ ಕುರಿತು ಹಂಚಿಕೊಂಡರು.