ಬೀಜಿಂಗ್: ಚೀನಾ ಗ್ಲಾಸ್ ಸೇತುವೆಯ ಮೇಲೆ ಪ್ರವಾಸಿ ಯುವತಿ ನಡೆಯಲು ಹೆದರಿದ್ದರಿಂದ ಆಕೆಯನ್ನು ಸುಮಾರು 500 ಮೀಟರ್ ವರಗೆ ಎಳೆದುಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
500 ಮೀಟರ್ ಎತ್ತರ ಬೆಟ್ಟದ ಡೆಹಾಂಗ್ ಕ್ಯಾನನ್ ಬೆಟ್ಟದ ಮೇಲೆ ಐಜಾಯಿ ಎಂಬ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಚೀನಾ ಎತ್ತರದ ಪ್ರದೇಶಗಳಲ್ಲಿ ಗ್ಲಾಸ್ ನಿಂದ ಬ್ರಿಡ್ಜ್ ಗಳನ್ನು ನಿರ್ಮಿಸಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್? ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
Advertisement
ಐಜಾಯಿ ಗ್ಲಾಸ್ ಬ್ರಿಡ್ಜ್ ಉತ್ತರ ಚೀನಾದ ಪೂರ್ವ ತೈಹೆಂಗಾ ಎಂಬಲ್ಲಿ ಎರಡು ಬೆಟ್ಟಗಳ ನಡುವೆ ಈ ಗ್ಲಾಸ್ ವಾಕ್ ಕಟ್ಟಲಾಗಿದೆ. 500 ಮೀಟರ್ ಎತ್ತರದಲ್ಲಿ ಬ್ರಿಡ್ಜ್ ನಿರ್ಮಾಣವಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆ ಚಲಿಸುವಾಗ ಕೆಳಗಡೆ ಆಳದ ಕಣಿವೆ ಕಾಣುತ್ತದೆ. ಇದು ಪ್ರವಾಸಿಗರಿಗೆ ಥ್ರಿಲ್ಲಿಂಗ್ ಅನುಭವವನ್ನು ನೀಡುತ್ತದೆ. 500 ಮೀಟರ್ ಎತ್ತರದಲ್ಲಿ ಗ್ಲಾಸ್ ಮೇಲೆ ನಡೆಯಲು ಕೆಲವರು ಹೆದರುವುದು ಸಹಜ.