ಹಲವು ವರ್ಷಗಳ ನಂತರ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ನಟ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ನಾಳೆ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಅವರ ಹುಟ್ಟು ಹಬ್ಬವಾಗಿರುವುದರಿಂದ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸುತ್ತಿದ್ದಾರೆ.
Advertisement
ಸಂಚಾರಿ ವಿಜಯ್ ಅವರಿಗೆ ಸಂಚಾರಿ ಎಂಬ ಪದನಾಮವನ್ನು ತಂದುಕೊಂಡ ಮಂಗಳಾ ಅವರ ಸಂಚಾರಿ ಥಿಯೇಟರ್ ನಲ್ಲಿ ನಾಳೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜಯ್ ಅವರ ಹೆಸರಿನಲ್ಲಿ ನಾಟಕೋತ್ಸವ ಆಯೋಜನೆ ಮಾಡಿದ್ದು, ಈ ನಾಟಕೋತ್ಸವದ ಪೋಸ್ಟರ್ ಅನ್ನು ಬಿ.ಜಯಶ್ರೀ ಅವರು ಬಿಡುಗಡೆ ಮಾಡಲಿದ್ದಾರೆ. ಸಂಜೆ 7ಕ್ಕೆ ಸಂಚಾರಿ ಥಿಯೇಟರ್ ಎಂಪ್ಟಿಸ್ಪೆಸ್ ನಲ್ಲಿ ವಿಜಯ್ ಅಭಿನಯಿಸುತ್ತಿದ್ದ ಶ್ರೀದೇವಿ ಮಹಾತ್ಮೆ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್
Advertisement
Advertisement
ವಿಜಯ್ ಅವರ ಸ್ನೇಹಿತರಾದ ಅನಿಲ್ ಗೌಡ ಮತ್ತು ಸ್ನೇಹಿತರು ನಾಗರಭಾವಿ ಸಬ್ ರಿಜಿಸ್ಟಾರ್ ಕಛೇರಿ ಎದುರು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದಾರೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರಿಗೆ ಸಂಚಾರಿ ವಿಜಯ್ ಅವರ ಜನ್ಮದಿನಕ್ಕಾಗಿ ಈ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜನೆಗೊಂಡಿದೆ. ಅಲ್ಲದೇ, ವಿಜಯ್ ಅವರನ್ನು ಸ್ಮರಿಸುವಂತಹ ಕಾರ್ಯ ಕೂಡ ಈ ಮೂಲಕ ನಡೆಯಲಿದೆ.
Advertisement
ವಿಜಯ್ ಅವರು ಕಲಿತಿರುವ ಪಂಚನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣ ಹಚ್ಚುವಂತಹ ಕೆಲಸವನ್ನು ಕನ್ನಡ ಮನಸುಗಳ ಪ್ರತಿಷ್ಠಾನ ಮಾಡುತ್ತಿದೆ. ಜುಲೈ 16 ಮತ್ತು 17 ಎರಡು ದಿನಗಳ ಕಾಲ ಈ ಕೆಲಸವನ್ನು ಅದು ಹಮ್ಮಿಕೊಂಡಿದೆ. ಅಲ್ಲದೇ, ಜೀ ಕನ್ನಡ ವಾಹಿನಿಯಲ್ಲಿ ವಿಜಯ್ ನಟಿಸಿರುವ ತಲೆದಂಡ ಸಿನಿಮಾ ಕೂಡ ಪ್ರಸಾರವಾಗಲಿದೆ.