ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್ ನಿರ್ದೇಶಕ ಎಂದೇ ಹೆಸರು ಮಾಡಿರುವವರು ಇಂದ್ರಜಿತ್ ಲಂಕೇಶ್. ತಮ್ಮ ತಂದೆ ಪಿ. ಲಂಕೇಶ್ ಅವರ ಆದರ್ಶದಂತೆಯೇ ಇದುವರೆಗೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬಂದಿರುವ ಇಂದ್ರಜಿತ್ ಅವರು ಈ ಬಾರಿಯೂ ಸರಳವಾಗಿ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ.
Advertisement
ಇದೇ ಸೆಪ್ಟೆಂಬರ್ 22 ಅಂದರೆ ನಾಳೆ ಸಿದ್ಧಗಂಗಾ ಮಠದಲ್ಲಿ ಸಾರ್ಥಕವಾಗಿ, ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇಂದ್ರಜಿತ್ ನಿರ್ಧರಿಸಿದ್ದಾರೆ. ಸ್ವಾಮೀಜಿಯವರ ಆಶೀರ್ವಾದ ಪಡೆದು ನಂತರ ಅಲ್ಲಿನ ಆಶ್ರಮದ ಮಕ್ಕಳಿಗೆ ಊಟೋಪಚಾರ ನೀಡಲಿದ್ದಾರೆ. ಇದಲ್ಲದೇ ಪಿ ಲಂಕೇಶ್ ಅವರ ಹಲವಾರು ಪುಸ್ತಕಗಳನ್ನೂ ವಿತರಿಸಲಿದ್ದಾರೆ. ಇಲ್ಲಿ ಓದಿದ ಮಕ್ಕಳೆಲ್ಲ ಅಧಿಕಾರಿಗಳಾಗಿದ್ದಾರೆ. ದೊಡ್ಡ ಹುದ್ದೆಗಳಿಗೂ ಏರುತ್ತಾರೆ. ಈ ಮಕ್ಕಳು ತಮ್ಮ ತಂದೆಯವರು ಬರೆದ ಪುಸ್ತಕಗಳನ್ನು ಓದಿ ಸ್ಫೂರ್ತಿ ಪಡೆಯಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
Advertisement
Advertisement
ತುಂಟಾಟ ಚಿತ್ರದ ನಂತರದಲ್ಲಿ ಇಂದ್ರಜಿತ್ ಅವರು ಮಾದರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಮೊದಲ ಒಂದಷ್ಟು ವರ್ಷ ಅನಾಥಾಶ್ರಮದ ಮಕ್ಕಳಿಗೆ ಬಟ್ಟೆ, ಊಟ ವಿತರಿಸೋ ಮೂಲಕ ಇಂದ್ರಜಿತ್ ತೃಪ್ತಿ ಕಂಡಿದ್ದರು. ಆ ಬಳಿಕ ಪತ್ರಕರ್ತರ ಜೊತೆಗೂಡಿ ಸರಳವಾಗಿಯೇ ಸಂಭ್ರಮಿಸಿದ್ದರು. ಮತ್ತೊಂದು ಹುಟ್ಟುಹಬ್ಬದ ನೆನಪಿಗೆ ರಾಷ್ಟ್ರಪಕ್ಷಿ ನವಿಲನ್ನು ದತ್ತು ಪಡೆದಿದ್ದರು. ಬಳಿಕ ವೀರ ಯೋಧ ಹನುಮಂತ ಕೊಪ್ಪದ್ ಮಡದಿಗೆ ಸನ್ಮಾನಿಸುವ ಮೂಲಕವೂ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
Advertisement
ಈ ಬಾರಿ ಅವರು ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಸಮ್ಮುಖದಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv