ಬಳ್ಳಾರಿ: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅಂಬಿಡೆಂಟ್ ಪ್ರಕರಣ ಸಂಬಂಧ ರಾಜ್ ಮಹಲ್ ಜ್ಯುವೆಲ್ಲರ್ಸ್ ಮಾಲೀಕ ರಮೇಶ್ ಸತ್ರಸಾಲ್ ಮೇಲೆ ಸಿಸಿಬಿ ಪೊಲೀಸರು ಹಲ್ಲೆ ಮಾಡಿರುವುದನ್ನು ಖಂಡಿಸಿ ಬಳ್ಳಾರಿ ವ್ಯಾಪಾರಸ್ಥರು ಸೋಮವಾರ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಚೇಂಬರ್ ಆಪ್ ಕಾರ್ಮಸ್ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ವ್ಯಾಪಾರಿಗಳು ಮುಂದಾಗಿದ್ದಾರೆ. ಪ್ರತಿಭಟನೆ ಬಳಿಕ ಎಸ್‍ಪಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ಬಳ್ಳಾರಿ ವ್ಯಾಪಾರಸ್ಥರು ತಿಳಿಸಿದ್ದಾರೆ. ಇದನ್ನು ಓದಿ: ಹೊಡೆದು ಜನಾರ್ದನ ರೆಡ್ಡಿ ಹೆಸರು ಹಾಕಿಸಿದ್ದಾರೆ- ಡೀಲ್ ಪ್ರಕರಣಕ್ಕೆ ಸ್ಫೋಟಕ ತಿರುವು
Advertisement
Advertisement
ಏನಿದು ಪ್ರಕರಣ?:
ಇಡಿ ಅಧಿಕಾರಿಗಳಿಂದ ಪಾರು ಮಾಡಲು ಅಂಬಿಡೆಂಟ್ ನ ಫರೀದ್ ಗೆ ಜನಾರ್ದನ ರೆಡ್ಡಿ 57 ಕೆ.ಜಿ. ಚಿನ್ನ ಬೇಡಿಕೆ ಇಟ್ಟಿದ್ದರು. ಹೀಗಾಗಿ ಫರೀದ್ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಮೂಲಕ ಬಳ್ಳಾರಿಯ ರಮೇಶ ಸತ್ರಸಾಲ್ ಗೆ ಚಿನ್ನ ನೀಡಲು ತಿಳಿಸಿದ್ದರು. ಇದನ್ನು ಒಪ್ಪಿಕೊಂಡಿದ್ದ ರಮೇಶ್ ಸತ್ರಸಾಲ್, ಬೆಂಗಳೂರಿನ ಚಿನ್ನದ ವ್ಯಾಪಾರಿ ರಮೇಶ್ ಕೊಠಾರಿಗೆ ಡೀಲ್ ಕೊಟ್ಟಿದ್ದರು. ಈ ಮೂಲಕ ಅಕ್ರಮವಾಗಿ ರಮೇಶ್ ಸತ್ರಸಾಲ್ ಜನಾರ್ದನ ರೆಡ್ಡಿಗೆ ಚಿನ್ನ ತಲುಪಿಸಿದ್ದರು. ಈ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಿ ಹಲ್ಲೆ ಮಾಡಿದ್ದಾರೆ.
Advertisement
Advertisement
ಪ್ರಕರಣದ ಎ4 ಆರೋಪಿ ರಮೇಶ್ ಅವರನ್ನು ಬಳ್ಳಾರಿಯಿಂದ ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬಂದು, ಹಲ್ಲೆ ಮಾಡಿದ್ದಾರೆ. ಅಲ್ಲದೇ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ಅವರ ಹೆಸರು ಹೇಳುವಂತೆ ದೌರ್ಜನ್ಯ ನೀಡಿದ್ದಾರೆ. ರಮೇಶ್ ಮೇಲೆ ಹಲ್ಲೆ ಮಾಡಿರುವಂತಹ ಫೋಟೋಗಳು ನಮ್ಮಲ್ಲಿದೆ. ರಾಜಕೀಯ ಒತ್ತಡದಿಂದ ಜನಾರ್ದನ ರೆಡ್ಡಿ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿದೆ. ಜನಾರ್ದನ ರೆಡ್ಡಿ ಅವರನ್ನು ಬಂಧಿಸಲೇಬೇಕೆಂದು ಈ ಪ್ರಕರಣದ ಹಿಂದೆ ದೊಡ್ಡ ಮಟ್ಟದಲ್ಲಿ ಇರುವಂತಹ ರಾಜಕಾರಣಿಗಳ ಕೈಗಳ ಕೈವಾಡವಿದೆ ಎಂದು ವಕೀಲ ಚಂದ್ರಶೇಖರ್ ಗಂಭೀರವಾಗಿ ಆರೋಪಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews