ಶಿಮ್ಲಾ: ಕೆಲವೊಮ್ಮೆ ತುಂಬಾ ಚೀಪಾಗಿ ಸಿಗ್ತಿದ್ದ ಟೊಮೆಟೊಗೆ ಈಗ ಡಿಮ್ಯಾಂಡ್ ಹೆಚ್ಚಾಗಿದೆ. ಟೊಮೆಟೊ (Tomato) ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಮನೆಯಲ್ಲಿ ಸಾಂಬಾರಿಗೆ ಹುಳಿ ಟೇಸ್ಟ್ ಕೊಡೋಕೆ ಕಷ್ಟ ಆಗ್ತಿದೆ ಅಂತ ಮಹಿಳೆಯರು ಚಿಂತಿಸುತ್ತಿದ್ದಾರೆ. ಕೆಜಿಗೆ 1 ರೂ. ಬೆಲೆ ಕಾರಣಕ್ಕೆ ಟೊಮೆಟೊವನ್ನು ರಸ್ತೆಗೆ ಸುರಿದು ರೈತರು ಕಣ್ಣೀರು ಹಾಕಿದ್ದ ಸಂದರ್ಭವೂ ಇತ್ತು. ಕೆಜಿಗಟ್ಟಲೇ ಟೊಮೆಟೊ ಮನೆಗೆ ತರುತ್ತಿದ್ದ ಗ್ರಾಹಕರು ಈಗ ಮೂರೋ ನಾಲ್ಕೋ ತಂದು ಜೋಪಾನ ಮಾಡಿ ಅಡುಗೆಗೆ ಬಳಸುವಂತ ಪರಿಸ್ಥಿತಿ ಬಂದಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಹಿಮಾಚಲ ಪ್ರದೇಶದ ಮಾರುಕಟ್ಟೆಯಲ್ಲಿ ಸೇಬಿಗಿಂತ ಟೊಮೆಟೊ ಬೆಲೆಯೇ ಜಾಸ್ತಿಯಾಗಿದೆ.
ಸಾಮಾನ್ಯವಾಗಿ ಟೊಮೆಟೊಗಿಂತ ಸೇಬು ಹಣ್ಣು ಹೆಚ್ಚಿನ ಬೆಲೆ ಮಾರಾಟವಾಗುತ್ತದೆ. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಮಾರುಕಟ್ಟೆಯಲ್ಲಿ ಸೇಬಿಗಿಂತ (Apple) ಟೊಮೆಟೊ ದುಬಾರಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಟೊಮೆಟೊ ಕೆಜಿಗೆ 90 ರಿಂದ 95 ರೂ.ಗೆ ಮಾರಾಟವಾಗುತ್ತಿದ್ದು, ಸೇಬು ಕೆಜಿಗೆ 70 ರಿಂದ 80 ರೂ.ಗೆ ಮಾರಾಟವಾಗುತ್ತಿದೆ. ಇದನ್ನೂ ಓದಿ: 30 ವರ್ಷ ಗಡಿಯಲ್ಲಿ ಸೇವೆ ಸಲ್ಲಿಸಿ ತವರಿಗೆ ವಾಪಸ್ಸಾದ ವೀರಯೋಧನಿಗೆ ಅದ್ಧೂರಿ ಸ್ವಾಗತ
Advertisement
Advertisement
ಹಿಮಾಚಲ ಪ್ರದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುವ ಹಣ್ಣು ಸೇಬು. ಆದರೆ ಈ ಬಾರಿ ಹಿಮಾಚಲದ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಟೊಮೆಟೊ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ. ಸತತ ಮಳೆಯಿಂದಾಗಿ ಮುಂಗಾರು ಹಂಗಾಮಿನಲ್ಲಿ ಉತ್ಪಾದನೆ ಗಣನೀಯವಾಗಿ ಕುಸಿದಿರುವುದರಿಂದ ಟೊಮೆಟೊ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಹಂಗಾಮಿನ ಆರಂಭದಲ್ಲಿ ಒಂದು ಕ್ರೇಟ್‌ಗೆ 800 ರಿಂದ 900 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ 1,800 ರಿಂದ 2,300 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಒಂದು ಕ್ರೇಟ್‌ಗೆ 500 ರಿಂದ 1,700 ವರೆಗೆ ಟೊಮೆಟೊ ಮಾರಾಟವಾಗಿತ್ತು.
Advertisement
ದೇಶದ ಪ್ರಮುಖ ಮಂಡಿಗಳಾದ ಬೆಂಗಳೂರು, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಟೊಮೆಟೊ ಕೊರತೆ ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಿಮಾಚಲದ ಬೆಟ್ಟದ ಟೊಮೆಟೊ ಈ ದೊಡ್ಡ ಮಂಡಿಗಳ ಬೇಡಿಕೆಯನ್ನು ಪೂರೈಸುತ್ತಿದೆ. ಇಲ್ಲಿ ಪೂರೈಕೆ ಹೆಚ್ಚಿರುವುದರಿಂದ ರೈತರಿಗೆ ಉತ್ತಮ ಬೆಲೆಯೂ ಸಿಗುತ್ತಿದೆ. ಹೆಚ್ಚಿನ ಬೇಡಿಕೆಯಿಂದಾಗಿ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: Maharashtra Accident: ಮತ್ತೊಂದು ಭೀಕರ ಅಪಘಾತದಲ್ಲಿ 10 ಮಂದಿ ಸಾವು
Advertisement
ಮಳೆಯಿಂದಾಗಿ ಬೆಂಗಳೂರಿನ ಟೊಮೆಟೊಗಳು ದೇಶದ ದೊಡ್ಡ ದೊಡ್ಡ ಮಂಡಿಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಹಿಮಾಚಲದಿಂದ ಆ ದೊಡ್ಡ ಮಂಡಿಗಳಿಗೆ ಟೊಮೆಟೊ ಪೂರೈಕೆಯಾಗುತ್ತಿದೆ. ಮುಂದಿನ 2 ವಾರಗಳಲ್ಲಿ ರೈತರಿಗೆ ಪ್ರತಿ ಕ್ರೇಟ್‌ಗೆ 1,800 ರಿಂದ 2,300 ರೂ. ವರೆಗೆ ಬೆಲೆ ಸಿಗಲಿದೆ ಎನ್ನುತ್ತಿದ್ದಾರೆ ಮಂಡಿಗಳ ಏಜೆಂಟರು.
ಈಗ ಸೇಬಿನ ಋತು ಆರಂಭವಾಗಿದೆ. ಹೀಗಾಗಿ ಹಣ್ಣಿನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇಬು ಬರುತ್ತಿದೆ. ಇದರಿಂದ ಸೇಬಿನ ಬೆಲೆ ಇಳಿಮುಖವಾಗಿದೆ ಎಂದು ಸಹ ಹೇಳಲಾಗುತ್ತಿದೆ.
Web Stories