ನವದೆಹಲಿ: 77ನೇ ಸ್ವಾತಂತ್ರೋತ್ಸವಕ್ಕೆ (77th Independence Day) ಜನತೆಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಆಗಸ್ಟ್ 15 ರಿಂದ ಟೊಮೆಟೋವನ್ನು (Tomato) ಕೆಜಿಗೆ 50 ರೂ.ಗೆ ಚಿಲ್ಲರೆ ಮಾರಾಟ ಮಾಡುವಂತೆ ನಿರ್ದೇಶನ ನೀಡಿದೆ.
ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ (NAFED)ಕ್ಕೆ ಕೇಂದ್ರ ಸರ್ಕಾರ ಈ ನಿರ್ದೇಶನ ನೀಡಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: 10,000 ಪೊಲೀಸರು.. ಆ್ಯಂಟಿ ಡ್ರೋನ್ ಸಿಸ್ಟಮ್, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ
Advertisement
Advertisement
NCCF ಮತ್ತು NAFED, ಜೈಪುರ ಮತ್ತು ರಾಜಸ್ಥಾನದ ಕೋಟಾ, ದೆಹಲಿ-NCR, ಲಕ್ನೋ, ಕಾನ್ಪುರ, ವಾರಣಾಸಿ ಮತ್ತು ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮತ್ತು ಬಿಹಾರದ ಪಾಟ್ನಾ, ಮುಜಾಫರ್‌ಪುರ, ಅರ್ರಾ ಮತ್ತು ಬಕ್ಸರ್‌ನಲ್ಲಿ ಟೊಮೆಟೋ ಮಾರಾಟ ಮಾಡುತ್ತವೆ.
Advertisement
ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಖರೀದಿಸಿದ ಟೊಮೆಟೋ ಚಿಲ್ಲರೆ ಬೆಲೆಯನ್ನು ಆರಂಭದಲ್ಲಿ ಕೆಜಿಗೆ 90 ರೂ.ಗೆ ನಿಗದಿಪಡಿಸಲಾಗಿತ್ತು. ನಂತರ ಕೆಜಿಗೆ 80 ರೂ.ಗೆ ಇಳಿಸಲಾಗಿತ್ತು. ಜುಲೈ 20 ರಿಂದ ಪ್ರತಿ ಕೆಜಿಗೆ 70 ರೂ.ಗೆ ಇಳಿಕೆ ಮಾಡಲಾಗಿತ್ತು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಎರಡು ದಿನ ರೆಡ್ ಅಲರ್ಟ್ – ಚಾರ್ ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ
Advertisement
ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶನವನ್ನು ಅನುಸರಿಸಿ, NCCF ಮತ್ತು NAFED ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಾರುಕಟ್ಟೆಗಳಿಂದ ಬಳಕೆ ಕೇಂದ್ರಗಳಲ್ಲಿ ಚಿಲ್ಲರೆ ಮಾರಾಟಕ್ಕಾಗಿ ಟೊಮೆಟೋ ಸಂಗ್ರಹಿಸಲು ಪ್ರಾರಂಭಿಸಿವೆ. ಇದು ಬೆಲೆ ಇಳಿಕೆಗೆ ಸಹಕಾರಿಯಾಗಿತ್ತು. ಆಗಸ್ಟ್ 13 ರವರೆಗೆ, ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಏಜೆನ್ಸಿಗಳು ಒಟ್ಟು 15 ಲಕ್ಷ ಕೆಜಿ ಟೊಮೆಟೋ ಖರೀದಿಸಿವೆ.
Web Stories