ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯರಾತ್ರಿ ಟೊಮೆಟೊ ಕಳ್ಳತನಕ್ಕಿಳಿದ ಪ್ರಕರಣ ವರದಿಯಾಗಿದ್ದು, ಕಳ್ಳನ ಕೈಚಳಕ ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ನಗರದ ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ಮಾರ್ಕೆಟ್‍ನಲ್ಲಿ ಬೆಳಿಗ್ಗೆ ಹರಾಜು ಮಾಡಲು ರೈತರೊಬ್ಬರು ಕ್ರೇಟ್‍ಗಳನ್ನು ದಾಸ್ತಾನು ಮಾಡಿದ್ದು, ಕ್ರೇಟ್‍ಗಳಿಗೆ ಹೊದಿಕೆಯಿಂದ ಮುಚ್ಚಿ ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದರು. ಖಾಕಿ ಸಮವಸ್ತ್ರಧಾರಿ ಹಾಗೂ ಮತ್ತೋರ್ವ ವ್ಯಕ್ತಿ ಮಧ್ಯರಾತ್ರಿ ಹಗ್ಗ ಬಿಚ್ಚಿ ಹೊದಿಕೆ ತೆಗೆದು ಪ್ಲಾಸ್ಟಿಕ್ ಕವರ್‌ನೊಳಗೆ ಟೊಮೆಟೊ ತುಂಬಿಕೊಂಡಿದ್ದಾರೆ. ಈ ದೃಶ್ಯ ಎಪಿಎಂಸಿ ಟೊಮೆಟೊ ಮಂಡಿ ಮಾಲೀಕರ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಪಿನ್ ರಾವತ್ ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು
Advertisement
Advertisement
ಟೊಮೆಟೊ ತೆಗೆದುಕೊಂಡು ಹೋದಾತ ಪೊಲೀಸ್ ಪೇದೆ ಅಥವಾ ಹೋಂಗಾರ್ಡ್ ಇರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಟೊಮೆಟೊ ಬೆಲೆ ಗಗನಕ್ಕೆ ಏರಿರುವುದರಿಂದ ಕಳ್ಳತನವಾಗುತ್ತಿದೆ ಎಂದು ಸ್ಥಳಿಯರು ದೂರಿದ್ದಾರೆ. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ
Advertisement