ಚಿಪ್ಸ್, ನಾಚೋಸ್ ಮುಂತಾದ ಸ್ನ್ಯಾಕ್ಸ್‌ಗಳನ್ನು ತಿನ್ನವ ವೇಳೆ ಕೆಲವರು ಸಾಸ್ ಜೊತೆಗೆ ತಿನ್ನಲು ಇಷ್ಟಪಡುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸಾಲ್ಸಾ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಸಾಲ್ಸಾ ಎಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಸಾಸ್ ಎಂದರ್ಥ. ಸಾಸ್‌ಗಳಲ್ಲಿ ಅನೇಕ ಬಗೆಯ ಸಾಸ್‌ಗಳಿರುತ್ತವೆ. ಟೊಮೆಟೋ ಸಾಲ್ಸಾ ಸ್ನಾಕ್ಸ್‌ಗಳಿಗೆ ಪರ್ಫೆಕ್ಟ್ ಕಾಂಬಿನೇಷನ್. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್
Advertisement
ಬೇಕಾಗುವ ಸಾಮಗ್ರಿಗಳು:
ಟೊಮೆಟೋ – 6
ಈರುಳ್ಳಿ – ಒಂದು
ಹಸಿರು ಮೆಣಸು – 2
ಕೊತ್ತಂಬರಿ ಸೊಪ್ಪು – ಒಂದು ಹಿಡಿ
ಜೀರಿಗೆ ಪುಡಿ -1 ಚಮಚ
ನಿಂಬೆ ರಸ – 3 ಚಮಚ
ಉಪ್ಪು – 1 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಟೊಮೆಟೋ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಹಸಿರುಮೆಣಸನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಬೇಕು.
* ಬಳಿಕ ಇದನ್ನು ಮಿಕ್ಸಿಗೆ ಹಾಕಿ ಒಂದು ಸುತ್ತು ತಿರುಗಿಸಿಕೊಳ್ಳಿ. ಇದರ ಬದಲಿಗೆ ಕೈಯಲ್ಲೂ ಕಿವುಚಿಕೊಂಡು ಬಳಿಕ ಒಂದು ಬೌಲ್‌ನಲ್ಲಿ ಹಾಕಿಡಿ.
* ಈಗ ಈ ಮಿಶ್ರಣಕ್ಕೆ ಜೀರಿಗೆ ಪುಡಿ, ಉಪ್ಪು ಹಾಗೂ ಸ್ವಲ್ಪ ಪೆಪ್ಪರ್ ಪೌಡರ್ ಅನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ಇದಕ್ಕೆ ನಿಂಬೆರಸವನ್ನು ಸೇರಿಸಿಕೊಂಡು ಮಿಶ್ರಣದೊಂದಿಗೆ ನಿಂಬೆರಸ ಹೊಂದಿಕೊಳ್ಳುವಂತೆ ತಿರುವಿಕೊಳ್ಳಿ.
* ಮಿಶ್ರಣ ತೀರಾ ನೀರಾಗದೆ ಸ್ವಲ್ಪ ದಪ್ಪವಿರಬೇಕು. ತುಂಬಾ ದಪ್ಪವಿದ್ದರೆ ಒಂದು ಚಮಚ ನೀರನ್ನು ಸೇರಿಸಿಕೊಂಡು ಮತ್ತೊಂದು ಬಾರಿ ಕಲಸಿಕೊಳ್ಳಿ. ಈಗ ಟೊಮೆಟೋ ಸಾಲ್ಸಾ ತಿನ್ನಲು ರೆಡಿ.
* ಮಕ್ಕಳಿಗೆ ಚಿಪ್ಸ್, ನಾಚೋಸ್ ಜೊತೆ ಸಾಲ್ಸಾ ಕೊಟ್ಟರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದನ್ನೂ ಓದಿ: ಸ್ಟ್ರೀಟ್ ಸ್ಟೈಲ್ ವೆಜ್ ಫ್ರಾಂಕಿ ತಿಂದು ನೋಡಿ
Advertisement
Web Stories