ಹಾವೇರಿ: ರಾಜ್ಯದಲ್ಲಿ ಈಗ ತರಕಾರಿ ಬೆಲೆ ಗಗನಕ್ಕೆ ಏರಿದೆ. ಅದರಲ್ಲೂ ಟೊಮೆಟೊ (Tomato) ಬೆಲೆ ಕೆಜಿಗೆ 150 ರೂ. ನಿಂದ 200 ರೂ. ಸನಿಹಕ್ಕೆ ಹೋಗಿದೆ. ಹಾವೇರಿ (Haveri) ಜಿಲ್ಲೆಯಲ್ಲಿ ಟೊಮೆಟೊ ಬೆಲೆ ದುಬಾರಿಯಾದ ಹಿನ್ನೆಲೆ ಕಳ್ಳತನವಾಗದಂತೆ ವ್ಯಾಪಾರಿಯೊಬ್ಬರು ಸಿಸಿಟಿವಿ (CCTV) ಕಣ್ಗಾವಲಿನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.
ಹಾನಗಲ್ (Hanagal) ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಸಂತೆಯಲ್ಲಿ, ಕೃಷ್ಣಪ್ಪ ಎಂಬವರು ಟೊಮೆಟೊ ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಿ ಸಿಸಿಟಿವಿ ಕಾವಲಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆಜಿ ಟೊಮೆಟೊ ಬೆಲೆ 150 ರೂ. ಆಗಿದೆ. ಖರೀದಿ ಮಾಡುವ ನೆಪದಲ್ಲಿ ಜನ ಟೊಮೆಟೊ ಕದಿಯಬಾರದು ಎಂಬ ಕಾರಣಕ್ಕೆ ಸಿಸಿ ಕ್ಯಾಮೆರಾ ಹಾಕಿ ವ್ಯಾಪಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: ದಾಖಲೆ ಮೀರಿ ಗೋಧಿ ಉತ್ಪಾದನೆಯಾಗುತ್ತಿದ್ದರೂ ಬೆಲೆ ಏರಿಕೆ ಯಾಕೆ?
Advertisement
Advertisement
ಕಳೆದ ಒಂದು ವಾರದಿಂದ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಎರಡು ಟೊಮೆಟೊ ಕದ್ದರೂ ನಮಗೇ ನಷ್ಟ. ಸಾವಿರಾರು ರೂಪಾಯಿ ಕೊಟ್ಟು ಟೊಮೆಟೊ ಖರೀದಿಸಿದ್ದೇನೆ. ಹೀಗಾಗಿ ಸಿಸಿ ಕ್ಯಾಮೆರಾ ಹಾಕಿ ಟೊಮೆಟೊ ವ್ಯಾಪಾರ ಮಾಡುವ ಪರಿಸ್ಥಿತಿ ಬಂದಿದೆ ಎಂದು ವ್ಯಾಪಾರಸ್ಥ ಕೃಷ್ಣಪ್ಪ ಅವರು ಹೇಳಿದ್ದಾರೆ. ಇವರ ಸಿಸಿಟಿವಿ ಟೊಮೆಟೊ ವ್ಯಾಪಾರದಿಂದಾಗಿ ಟೊಮೆಟೊ ಖರೀದಿಗೆಂದು ಬಂದ ಗ್ರಾಹಕರು ಸಹ ಸಿಸಿ ಕ್ಯಾಮೆರಾ ನೋಡಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!
Advertisement
Web Stories