ಬೆಂಗಳೂರು: ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದ್ದು ಈರುಳ್ಳಿ, ಬೆಳ್ಳುಳ್ಳಿ ಬಳಿಕ ಟೊಮೆಟೊ ದರ ಏರಿಕೆಯಾಗಿದೆ.
ಕಳೆದ ಒಂದು ವಾರದ ಹಿಂದೆ ಕೆಜಿಗೆ 40 ರೂ. ಇದ್ದ ದರ ಈಗ ಎರಡು ಪಟ್ಟು ಹೆಚ್ಚಳವಾಗಿದೆ. ಶುಕ್ರವಾರದಿಂದ ಕೆಜಿಗೆ 80 ರೂ. ದರದಲ್ಲಿ ಟೊಮೆಟೊ (Tomato) ಮಾರಾಟವಾಗುತ್ತಿದೆ.
Advertisement
Advertisement
ಅಕಾಲಿಕ ಮಳೆಯಿಂದ (Rain) ಟೊಮೆಟೊ ಇಳುವರಿ ಕುಸಿತಗೊಂಡಿದೆ. ಇದರ ಜೊತೆ ಈಗ ನವರಾತ್ರಿ ಹಬ್ಬ ಆರಂಭಗೊಂಡಿದೆ. ಬೇಡಿಕೆ ಜಾಸ್ತಿ ಇದೆ. ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಭಾರೀ ಮಳೆ – ನೂರಾರು ಗಣಿ ಲಾರಿಗಳು ಜಲಾವೃತ
Advertisement
ಈಗಾಗಲೇ ಅಕಾಲಿಕ ಮಳೆಯಿಂದಾಗಿ 1 ಕೆಜಿ ಈರುಳ್ಳಿ ದರ 70 ರೂ. ದಾಟಿದೆ. 1 ಕೆಜಿ ಬೆಳ್ಳುಳ್ಳಿ ದರ 500 ರೂ. ಆಗಿದೆ. ಈಗ ಟೊಮೆಟೊ ದರ ಏರಿಕೆಯಿಂದಾಗಿ ದಸರಾ ಹಬ್ಬದ (Dasara Festival) ಸಮಯದಲ್ಲಿ ಜನರ ಜೇಬು ಮತ್ತಷ್ಟು ಖಾಲಿಯಾಗಲಿದೆ.
Advertisement