ಪಾತಾಳಕ್ಕೆ ಕುಸಿದ ಟೊಮೆಟೊ ಬೆಲೆ – ಬೇಸತ್ತು ಜಮೀನಿಗೆ ಕುರಿ ಬಿಟ್ಟು ಮೇಯಿಸಿದ ರೈತರು

Public TV
2 Min Read
Tomato Crop 3

ರಾಯಚೂರು: ಕೆಲ ತಿಂಗಳ ಹಿಂದೆ ಗಗನಕ್ಕೇರಿದ್ದ ಟೊಮೆಟೊ ಬೆಲೆ (Tomato Price) ಈಗ ಪಾತಾಳಕ್ಕೆ ಕುಸಿದಿದೆ. ಫಸಲಿಗೆ ಖರ್ಚು ಮಾಡಿದಷ್ಟು ಆದಾಯವೂ ಬಾರದ ಹಿನ್ನೆಲೆ ರಾಯಚೂರಿನಲ್ಲಿ ರೈತರು (Raichur Farmers) ಸ್ವತಃ ತಾವು ಬೆಳೆದ ಬೆಳೆಯನ್ನ ತಾವೇ ಹಾಳು ಮಾಡುತ್ತಿದ್ದಾರೆ. ಬರಗಾಲ, ಬೆಲೆ ಇಳಿಕೆಯ ಒತ್ತಡಕ್ಕೆ ಟೊಮೆಟೊ ಬೆಳೆಗಾರರ ಬದುಕು ಬೀದಿಗೆ ಬರುವ ಹಂತಕ್ಕೆ ತಲುಪಿದೆ.

Tomato Crop 2

ರಾಯಚೂರು ಜಿಲ್ಲೆಯಲ್ಲಂತೂ ರೈತರು ಮಾರುಕಟ್ಟೆಗೆ ಟೊಮೆಟೊ (Tomato Crop) ತೆಗೆದುಕೊಂಡು ಹೋದ್ರೆ ಸಾಗಣೆ ಖರ್ಚು ಸಹ ವಾಪಸ್ ಬರುವುದಿಲ್ಲ ಅಂತ ತಮ್ಮ ಬೆಳೆಯನ್ನ ತಾವೇ ನಾಶ ಮಾಡುತ್ತಿದ್ದಾರೆ. ಎಕರೆಗೆ 50 ಸಾವಿರ ರೂ.ನಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತರು ಟೊಮೆಟೊ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಕೂಲಿ ಆಳುಗಳಿಗೂ ನೀಡಬೇಕಾದಷ್ಟು ಹಣವೂ ಬರುತ್ತಿಲ್ಲ, ಬೆಳೆದ ಫಸಲಿನೊಂದಿಗೆ ಸಾಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ತಾವೇ ಬೆಳೆದ ಬೆಳೆಯನ್ನು ಕುರಿಗಳಿಗೆ ಮೇಯಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ – ಪ್ರತೀ ಕ್ಷೇತ್ರಕ್ಕೆ ತಲಾ 10 ಕೋಟಿ ಬಿಡುಗಡೆ: ಡಿಕೆಶಿ

Tomato Crop

ಮಾರುಕಟ್ಟೆಯಲ್ಲಿ 25 ಕೆಜಿಯ ಒಂದು ಕ್ರೇಟ್‌ 50 ರೂ.ಗೆ ಕೇಳೋರಿಲ್ಲ. ಒಂದು ಕ್ರೇಟ್‌ ಬಾಡಿಗೆ 3 ರೂ. ಇದ್ದರೆ, ರೈತರಿಗೆ ಕೇವಲ 2 ರೂ. ಸಿಗುತ್ತಿದೆ. ಆದ್ರೆ ರೈತರಿಂದ ಕೊಂಡುಕೊಂಡವರು ಕೆಜಿ 20 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕಷ್ಟ ಪಟ್ಟು ಬೆಳೆ ಬೆಳೆದ ರೈತರಿಗೆ ಮಾತ್ರ ಸಾಲದ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ಕುರಿಗಳಿಗಾದರೂ ಮೇವಾಗಲಿ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನ ಮೇವಿಗೆ ಬಿಡುತ್ತಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ತೆರೆಯುತ್ತೇವೆ: ಮಾಲೀಕ ರಾಘವೇಂದ್ರ ರಾವ್‌

ಬೆಲೆ ಕುಸಿತ ಒಂದು ಕಡೆಯಾದ್ರೆ ಬರಗಾಲದಿಂದ ನೀರಿನ ಕೊರತೆ ಎದುರಾಗಿದ್ದು ಬೆಳೆಗೆ ರೋಗ ಭಾದೆಯೂ ಕಾಡುತ್ತಿದೆ. ಇದರಿಂದ ಬೇಸತ್ತ ರಾಯಚೂರು ತಾಲೂಕಿನ ಕಡಗಂದೊಡ್ಡಿ, ಚಂದ್ರಬಂಡ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಗುಳೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ದಿನದ ಒಳಗಡೆ ಜನತೆ ಮುಂದೆ ಕ್ಷಮೆ ಕೇಳಿ – ಖರ್ಗೆಗೆ ಗಡ್ಕರಿ ಲೀಗಲ್‌ ನೋಟಿಸ್‌

Share This Article