ಸಿಕ್ಕ ಸಿಕ್ಕ ವಸ್ತುಗಳಲ್ಲೇ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಳ್ಳುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ಈ ಬಾರಿ ಟೊಮ್ಯಾಟೋ ಮೇಲೆ ಕಣ್ಣು ಹಾಕಿದ್ದಾರೆ. ಟೊಮ್ಯಾಟೋ ಬೆಲೆ ಗಗನಕ್ಕೇರಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಟೊಮ್ಯಾಟೋದಿಂದ (Tomato) ಮಾಡಿದ ಕಿವಿಯೋಲೆಯನ್ನು ಅವರು ಧರಿಸಿದ್ದಾರೆ. ಈ ಮೂಲಕ ಅದ್ಯಾವ ಸಂದೇಶ ಸಾರಿದ್ದಾರೋ ಅವರನ್ನೇ ಕೇಳಬೇಕು.
Advertisement
ಮೊನ್ನೆಯಷ್ಟೇ ಉರ್ಫಿ ಕಣ್ಣಿನ ಸರ್ಜರಿಗೆ ಒಳಗಾಗಿದ್ದು, ಅದರಿಂದಾಗಿ ಕಣ್ಣಿನ ಕೆಳಭಾಗ ನೋವುಂಟಾಗಿದೆ ಎಂದು ಹೇಳಿಕೊಂಡಿದ್ದಾರೆ. ಕಣ್ಣಿನ ಸುತ್ತಲೂ ಒಂದು ರೀತಿಯ ಅಲರ್ಜಿಯಾಗಿದ್ದು, ಅದನ್ನು ಮೇಕಪ್ ನಿಂದ ಮುಚ್ಚಲೂ ಸಾಧ್ಯವಾಗುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
ಒಂದು ಕಡೆ ನಾನಾ ಅಡೆತಡೆಗಳು ಮತ್ತೊಂದು ಕಡೆ ಕೆಲಸವಿಲ್ಲದೇ ನಿರುದ್ಯೋಗಿ ಆಗಿರುವ ಕುರಿತು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಅವರು ಇದೀಗ ಕೆಲಸ ಹುಡುಕುತ್ತಿದ್ದಾರಂತೆ. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ನಾನು ಫೇಮಸ್ ಆಗಿದ್ದೇನೆ, ಜನರು ನನ್ನನ್ನು ಗುರುತಿಸುತ್ತಾರೆ ಎಲ್ಲವೂ ನಿಜ. ಆದರೆ, ನನಗೆ ಕೆಲಸವಿಲ್ಲ (Work). ನನ್ನೊಂದಿಗೆ ಕೆಲಸ ಮಾಡಲು ಯಾರೂ ಒಪ್ಪುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ:ರಚ್ಚು- ಸತೀಶ್ ನೀನಾಸಂ ಕಡೆಯಿಂದ ಗುಡ್ ನ್ಯೂಸ್- ‘ಮ್ಯಾಟ್ನಿ’ ಚಿತ್ರದ ಅಪ್‌ಡೇಟ್
Advertisement
ತಾವು ಕೆಲಸ ಮಾಡಲು ರೆಡಿಯಾಗಿದ್ದು, ತಮಗೆ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಉರ್ಫಿ ಹೇಳಿಕೊಂಡಿದ್ದಾರೆ. ನಾನು ಕೆಲಸ ಮಾಡಲು ತಯಾರಿದ್ದರೂ, ನನ್ನೊಂದಿಗೆ ಕೆಲಸ ಮಾಡಲು ಯಾರೂ ಸಿದ್ದರಿಲ್ಲ. ಹಾಗಾಗಿ ನನಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತಮಗಾಗಿ ಯಾರಾದರೂ ಕೆಲಸ ಸೃಷ್ಟಿ ಮಾಡಿದರೆ ಹೋಗುವುದಾಗಿಯೂ ತಿಳಿಸಿದ್ದಾರೆ.
ಈ ಹಿಂದೆ ಉರ್ಫಿಗಾಗಿ ಕಾಸ್ಟ್ಯೂಮ್ (Costume) ಡಿಸೈನ್ ಮಾಡುವವರು ಯಾರೂ ಇರಲಿಲ್ಲವಂತೆ. ಹಾಗಾಗಿಯೇ ತಮ್ಮ ಕಾಸ್ಟ್ಯೂಮ್ ಅನ್ನು ತಾವೇ ಡಿಸೈನ್ ಮಾಡಲು ಕಲಿತಿದ್ದಾರಂತೆ. ಇತ್ತ ಮನೆಯಲ್ಲೂ ಗೌರವವಿಲ್ಲ, ಬೀದಿಯಲ್ಲೂ ಇಲ್ಲ. ಈ ವಿಚಾರವಾಗಿ ತಮಗೆ ತುಂಬಾ ನೋವಾಗಿದೆ ಎಂದಿದ್ದಾರೆ ಉರ್ಫಿ.
Web Stories