ಬೆಂಗಳೂರು: ಕಳೆದ ಕೆಲ ದಿನಗಳಿಂದ ದಿನಬೆಳಗಾದರೆ ಒಂದಲ್ಲ ಒಂದು ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಅಗತ್ಯ ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ದರ ಗಗನ ಸಖಿಯಾಗಿದ್ದು, ಈ ಸಾಲಿಗೆ ಟೊಮೆಟೊ (Tomato) ಕೂಡ ಸೇರ್ಪಡೆಯಾಗಿದೆ.
ಕಳೆದ ಕೆಲ ದಿನಗಳಿಂದ ಈರುಳ್ಳಿ, ಬೆಳ್ಳುಳ್ಳಿ ದರ ಕೇಳಿದ್ರೆನೆ ಜನ ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ಬೆಳ್ಳುಳ್ಳಿ ಕೆಜಿಗೆ 400 ರೂ. ದಾಟಿದ್ರೆ ಈರುಳ್ಳಿ 100 ರೂ. ಸನಿಹಕ್ಕೆ ಬಂದಿದೆ. ಈ ನಡುವೆ ಟೊಮೆಟೊ ಕೂಡ ಇದೇ ಸಾಲಿಗೆ ಸೇರಿದ್ದು. ಟೊಮೆಟೊ ದರ 100 ರೂ. ದರ ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೇಲ್ ಯುದ್ಧಕ್ಕೆ ಬೆಚ್ಚಿದ ಜನ – 2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ
Advertisement
Advertisement
ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ಮಳೆ ಅಭಾವ ಮತ್ತು ರೋಗದ ಕಾರಣ ಭಾರೀ ಪ್ರಮಾಣದಲ್ಲಿ ಟೊಮೆಟೊ ಇಳುವರಿ ಕಡಿಮೆಯಾಗಿತ್ತು. ಪರಿಣಾಮ ಟೊಮೆಟೊ ದರ 100 ರೂ. ದಾಟಿತ್ತು. ಆ ಬಳಿಕ ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣ ಆಗಿ ದಿಢೀರ್ ದರ ಏರಿಕೆಯಾಗಿದ್ದು, ಟೊಮೆಟೊ ಕೊಳ್ಳೋಕು ಹಿಂದೂಮುಂದು ನೋಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಇತರೆ ಜಿಲ್ಲೆಗಳಿಂದ ಬೆಂಗಳೂರಿಗೆ (Bengaluru) ಸರಬರಾಜು ಆಗುತ್ತಿದ್ದ ಟೊಮೆಟೊದಲ್ಲಿ ಭಾರೀ ಇಳಿಕೆ ಕಂಡಿದೆ. ಬೆಂಗಳೂರಿನ ಕೆಲ ಭಾಗಗಳಿಂದ ಮಾತ್ರ ಟೊಮೆಟೊ ಬರುತ್ತಿದ್ದು, ಸಂಪೂರ್ಣ ಪೂರೈಕೆ ಆಗುತ್ತಿಲ್ಲ. ಹೀಗಾಗಿ ದರ ಏರಿಕೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಈಗಲೂ ಸಮಯವಿದೆ ಹಿಂದೆ ಸರಿದುಬಿಡಿ – ಲೆಬನಾನ್‌ಗೆ ಇಸ್ರೇಲ್ ಪ್ರಧಾನಿ ಎಚ್ಚರಿಕೆ
Advertisement
Advertisement
ಟೊಮೆಟೊ ದರ ಏರಿಕೆಯಾಗಲು ಕಾರಣಗಳೇನು?
– ಅತಿವೃಷ್ಟಿಯಿಂದ ಅನೇಕ ಕಡೆ ಬೆಳೆ ನಾಶದಿಂದ ಸರಬರಾಜು ಇಳಿಕೆ
– ಪೂರೈಕೆಗಿಂತ ಎರಡು ಪಟ್ಟು ಬೇಡಿಕೆ ಇರುವುದು
– ಕೋಲಾರ ಜಿಲ್ಲೆಯಿಂದಲೇ ಹೆಚ್ಚು ಪೂರೈಕೆ ಆಗುತ್ತಿದ್ದು, ಪೂರೈಕೆ ಇಳಿಕೆಯಾಗಿರೋದು.
– ಇಳುವರಿ ಕುಸಿತದ ಪರಿಣಾಮ ನೆಲಕಚ್ಚಿದ ಟೊಮೆಟೊ ಬೆಳೆ
– ರೋಗ ಬಾಧೆ, ಕಳಪೆ ಸಸಿಗಳಿಂದಾಗಿ ಹಲವೆಡೆ ಟೊಮೆಟೊ ಇಳುವರಿಯಲ್ಲಿ ಕುಸಿತ
– ಸಾಲು, ಸಾಲು ಹಬ್ಬಗಳ ಹಿನ್ನೆಲೆ ಹೊರ ರಾಜ್ಯಗಳಿಂದಲೂ ಟೊಮೆಟೊಗೆ ಭಾರೀ ಬೇಡಿಕೆ
– ಹೀಗಾಗಿ ಹೊರ ರಾಜ್ಯಗಳ ಬೇಡಿಕೆಯಿಂದ ಅಲ್ಲಿಗೂ ಪೂರೈಕೆಯಾಗುತ್ತಿರೋ ಕಾರಣ ಟೊಮೆಟೊ ದುಬಾರಿ
– ತಮಿಳುನಾಡು, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಿಂದ ನಮ್ಮ ರಾಜ್ಯದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿ ಅಲ್ಲಿಗೂ ಪೂರೈಕೆಯಾಗಿ ದರ ಏರಿಕೆಯಾಗಿದೆ. ಇದನ್ನೂ ಓದಿ: ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರೋಧ
ಹೊರ ರಾಜ್ಯಗಳು ಕೂಡ ಹೆಚ್ಚಾಗಿ ರಾಜ್ಯದ ಟೊಮೆಟೊ ಮೇಲೆ ಅವಲಂಬನೆ ಕಾರಣ ಅನೇಕ ಗಡಿ ಜಿಲ್ಲೆಗಳು ಹೊರ ರಾಜ್ಯಗಳಿಗೆ ಹೆಚ್ಚಾಗಿ ಪೂರೈಕೆ ಮಾಡುತ್ತಿವೆ. ಇದು ಕೂಡ ದರ ಏರಿಕೆಗೆ ಕಾರಣ ಆಗುತ್ತಿದೆ. ಸದ್ಯ ಇದೇ ಪರಿಸ್ಥಿತಿ ಇನ್ನೂ ಒಂದೆರೆಡು ವಾರ ಮುಂದುವರಿಯುವ ಸಾಧ್ಯತೆ ಇದೆ. ಹೊಸ ಬೆಳೆ ಬಂದು ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗಬೇಕಿದೆ. ಮಳೆ ಕಡಿಮೆಯಾದರೆ ಮುಂದಿನ ಒಂದೆರೆಡು ವಾರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂತಿದ್ದಾರೆ. ಇದನ್ನೂ ಓದಿ: ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?
ಹಬ್ಬದ ನಡುವೆಯೇ ದರ ಏರಿಕೆ ಜನರನ್ನ ಹೈರಾಣಾಗಿಸುತ್ತಿದೆ ಅನ್ನೋ ಬೇಸರ ಒಂದು ಕಡೆಯಾದರೆ, ಮತ್ತೊಂದೆಡೆ ಈಗಾಗಲಾದರು ಬೆಳೆದ ಬೆಳೆಗೆ ರೈತ ಸ್ವಲ್ಪ ಲಾಭ ಕಾಣುವ ಸಮಯ ಬಂತಲ್ಲ ಅನ್ನೋದೇ ನೆಮ್ಮದಿ ವಿಚಾರ. ಇದನ್ನೂ ಓದಿ: ನಾವು ದಿನನಿತ್ಯ ತಿನ್ನೋ ಅನ್ನ ಎಷ್ಟು ಸೇಫ್? – ಕೃಷಿ ವಿವಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!