ತಕ್ಷಣವೇ ತಯಾರಿಸಬಹುದಾದ ರುಚಿಕರವಾದ ಬೆಳಗ್ಗಿನ ತಿಂಡಿಯ ಹೊಸ ರೆಸಿಪಿಯನ್ನು ನೀವು ಹುಡುಕುತ್ತಿದ್ದರೆ ಒಮ್ಮೆ ಟೊಮೆಟೊ ಅವಲಕ್ಕಿ (Tomato Poha) ಟ್ರೈ ಮಾಡಿ. ಸುಲಭವಾಗಿ ಮಾಡಬಹುದಾದ ಮಸಾಲೆಯುಕ್ತ ಉಪಾಹಾರವನ್ನು ರಾಯಿತಾ ಜೊತೆ ಸವಿದರೆ ಮಜವಾಗಿರುತ್ತದೆ. ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಟೊಮೆಟೊ ಅವಲಕ್ಕಿ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಅವಲಕ್ಕಿ – 2 ಕಪ್
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 3
ಹಸಿರು ಬಟಾಣಿ – ಅರ್ಧ ಕಪ್
ಹೆಚ್ಚಿದ ಕ್ಯಾರೆಟ್ – 1
Advertisement
Advertisement
ಹೆಚ್ಚಿದ ಕ್ಯಾಪ್ಸಿಕಂ – 1
ಸೀಳಿದ ಹಸಿರು ಮೆಣಸಿನಕಾಯಿ – 2
ಹೆಚ್ಚಿದ ಬೆಳ್ಳುಳ್ಳಿ – 2 ಎಸಳು
ಹೆಚ್ಚಿದ ಶುಂಠಿ – 1 ಇಂಚು
ಅರಿಶಿನ – ಅರ್ಧ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ ಪುಡಿ – ಅರ್ಧ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ – 3 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಸೋಂಪು – ಅರ್ಧ ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್ ಇದನ್ನೂ ಓದಿ: ಮಂಡಕ್ಕಿ ಒಗ್ಗರಣೆ ಒಮ್ಮೆ ಟ್ರೈ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ಬಸಿದು ಪಕ್ಕಕ್ಕಿಡಿ.
* ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಕರಿಬೇವಿನ ಎಲೆ, ಸೋಂಪು ಹಾಗೂ ಜೀರಿಗೆ ಸೇರಿಸಿ ಸ್ವಲ್ಪ ಹುರಿಯಿರಿ.
* ಹೆಚ್ಚಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಹಸಿರು ಬಟಾಣಿ ಸೇರಿಸಿ, ಹಸಿ ವಾಸನೆ ಹೋಗುವವರೆಗೆ 2-3 ನಿಮಿಷ ಹುರಿಯಿರಿ.
* ಈಗ ಟೊಮೆಟೊ ಸೇರಿಸಿ, ಅದು ಮೆತ್ತಗಾಗುವವರೆಗೆ ಹುರಿಯಿರಿ.
* ಸ್ವಲ್ಪ ಉಪ್ಪು ಸೇರಿಸಿ, ಫ್ರೈ ಮಾಡಿ.
* ನಂತರ ಕ್ಯಾಪ್ಸಿಕಮ್, ಕ್ಯಾರೆಟ್, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಸೇರಿಸಿ, 1 ನಿಮಿಷ ಹುರಿಯಿರಿ.
* ಈಗ ಅವಲಕ್ಕಿಯನ್ನು ಸೇರಿಸಿ, ಎಲ್ಲವನ್ನೂ ನಿಧಾನವಾಗಿ ಮಿಶ್ರಣ ಮಾಡಿ.
* ಸ್ವಲ್ಪ ನೀರು ಸೇರಿಸಿ, ಕಡಾಯಿಗೆ ಮುಚ್ಚಳ ಹಾಕಿ 5-10 ನಿಮಿಷ ಅವಲಕ್ಕಿಯನ್ನು ಬೇಯಲು ಬಿಡಿ.
* ಉರಿಯನ್ನು ಆಫ್ ಮಾಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.
* ಇದೀಗ ಟೊಮೆಟೊ ಅವಲಕ್ಕಿ ತಯಾರಾಗಿದ್ದು, ಬಿಸಿಬಿಸಿಯಾಗಿ ರಾಯಿತದೊಂದಿಗೆ ಸವಿಯಿರಿ. ಇದನ್ನೂ ಓದಿ: ಐದೇ ನಿಮಿಷ ಸಾಕು – ಹುಳಿ ಅವಲಕ್ಕಿ ಮಾಡಿ ಸವಿಯಿರಿ