ಬೆಂಗಳೂರು: ಕೊರೊನಾ 4ನೇ ಅಲೆಯ ಭೀತಿಯಲ್ಲಿರುವ ಕರ್ನಾಟಕದ ಜನತೆಗೆ ಇದೀಗ ಮತ್ತೊಂದು ಆತಂಕ ಶುರುವಾಗಿದೆ.
ಇಂದಿನಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ಈ ಹೊತ್ತಿನಲ್ಲೇ ಟೊಮೆಟೊ ಜ್ವರ ಕಾಣಿಸಿಕೊಂಡಿದೆ. ಕೇರಳದಲ್ಲಿ ಈಚೆಗಷ್ಟೇ ಕಾಣಿಸಿಕೊಂಡ ಟೊಮೆಟೋ ಜ್ವರ ಉಡುಪಿ ಜಿಲ್ಲೆಯಲ್ಲಿ 4 ವರ್ಷದ ಮಗುವಿನಲ್ಲಿ ಕಾಣಿಸಿಕೊಂಡ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಭೂಮಿಯಿಂದ ಭೀಕರ ಶಬ್ಧ – ಬೆಚ್ಚಿಬಿದ್ದ ಚಿಕ್ಕಬಳ್ಳಾಪುರ ಜನ
ಸದ್ಯ ರಾಜ್ಯದಲ್ಲಿ ಈ ಜ್ವರ ಕಾಣಿಸಿಕೊಂಡಿರುವ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆಯಾಗಿಲ್ಲ. ಸೋಂಕಿತ ಮಗುವನ್ನು ಐಸಿಯು (ನಿಗಾ ಘಟಕ) ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತ ಪ್ರಕರಣ ಪತ್ತೆಯ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 126 ಕೇಸ್ – 103 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮಂಗಳೂರು, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿಯೂ ಆರೋಗ್ಯ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣು ಇರಿಸಿದ್ದಾರೆ. ಜೊತೆಗೆ ಸಾಂಕ್ರಾಮಿಕ ರೋಗ ತಜ್ಞರು ಇದು ತಾನೇ ಕಡಿಮೆಯಾಗುವ ಸೋಂಕು, ಇದಕ್ಕೆ ನಿರ್ದಿಷ್ಟ ಔಷಧಿಯಿಲ್ಲ ಎಂದು ಹೇಳಿದ್ದಾರೆ.
ಆರೋಗ್ಯ ಇಲಾಖೆಗೆ ತಲೆನೋವು: ಟೊಮೆಟೊ ಫ್ಲೂ ಆರೋಗ್ಯಾಧಿಕಾರಿಗಳಿಗೆ ತಲೆನೋವು ತರಿಸಿದೆ. ಅದಕ್ಕಾಗಿ ಜ್ವರ ಬಂದವರನ್ನು ಹೇಗೆ ಗುರುತಿಸಬೇಕು? ಹೇಗೆ ಪರೀಕ್ಷೆ ಮಾಡಿಸಬೇಕು? ಎನ್ನುವ ಬಗ್ಗೆ ಇನ್ನೂ ಪ್ರಚಾರ ಕೈಗೊಳ್ಳಬೇಕಿದೆ. ಈ ಬಗ್ಗೆ ಇನ್ನೂ ಆರೋಗ್ಯಾಧಿಕಾರಿಗಳಲ್ಲಿಯೇ ಗೊಂದಲ ಇವೆ. ಕೇರಳದಲ್ಲಿ ಈವರೆಗೆ 50 ಪ್ರಕರಣ ಕಾಣಿಸಿಕೊಂಡಿದೆ.
ಜ್ವರ ಲಕ್ಷಣಗಳೇನು? ವಿಪರೀತ ಜ್ವರ, ನಿರ್ಜಲೀಕರಣ, ಚರ್ಮದ ತುರಿಕೆ, ಕೈ ಮತ್ತು ಕಾಲುಗಳ ಚರ್ಮದ ಬಣ್ಣವೂ ಬದಲು, ಗುಳ್ಳೆಗಳು, ಕಿಬ್ಬೊಟ್ಟೆಯ ಸೆಳತ ವಾಕರಿಕೆ, ವಾಂತಿ – ಅತಿಸಾರ, ಸ್ರವಿಸುವ ಮೂಗು, ಕೆಮ್ಮು, ಸೀನು ಆಯಾಸ, ದೇಹದಲ್ಲಿ ನೋವು.