ನ್ಯೂಯಾರ್ಕ್: ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್ ವೀಕ್ಷಕ ವಿವರಣೆಗಾರರಿಗೆ ವಾಹಿನಿಯೊಂದು ಮಿಲಿಯನ್ ಡಾಲರ್ ಆಫರ್ ನೀಡಿ ಸುದ್ದಿಯಾಗಿದೆ.
7 ಬಾರಿ ಸೂಪರ್ ಬೌಲ್ ಚಾಂಪಿಯನ್ ಆಟಗಾರ ಟಾಮ್ ಬ್ರಾಡಿ ಅವರಿಗೆ ಫಾಕ್ಸ್ ಸ್ಫೋರ್ಟ್ಸ್ 10 ವರ್ಷದ ಅವಧಿಗೆ 375 ದಶಲಕ್ಷ ಡಾಲರ್(ಅಂದಾಜು 2,900 ಕೋಟಿ ರೂ.) ಪ್ಯಾಕೇಜ್ ನೀಡಿದೆ.
Advertisement
Advertisement
44 ವರ್ಷದ ಟಾಮ್ ಬ್ರಾಡಿ 19 ವರ್ಷಗಳ ಕಾಲ ನ್ಯೂ ಇಂಗ್ಲೆಂಡ್ ಪ್ಯಾಟ್ರಿಯಟ್ಸ್ ತಂಡದ ಪರ ಆಡಿದ್ದರು. 2019ರಿಂದ ಟ್ಯಾಂಪಾ ಬೇ ಬುಕಾನಿಯರ್ಸ್ ಪರ ಆಡಿದ್ದರು. ಈಗ ತಮ್ಮ ಕ್ರೀಡಾ ಜೀವನಕ್ಕೆ ಗುಡ್‌ಬೈ ಹೇಳಿ ವೀಕ್ಷಕ ವಿವರಣೆಗಾರರಾಗಲು ಹೊರಟಿದ್ದಾರೆ.
Advertisement
ಅಮೆರಿಕದ ಕ್ರೀಡಾ ಇತಿಹಾಸದಲ್ಲಿ ಈ ಪ್ಯಾಕೇಜ್ ಮೊತ್ತ ಬಹಳ ದುಬಾರಿ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಸಿಬಿಎಸ್ ಸ್ಫೋರ್ಟ್ಸ್ ವಾಹಿನಿ ರೊಮೊ ಅವರ ಜೊತೆ 18 ದಶಲಕ್ಷ ಡಾಲರ್ ಒಪ್ಪಂದ ಮಾಡಿಕೊಂಡಿತ್ತು.
Advertisement
ವೀಕ್ಷಕ ವಿವರಣೆಗಾರದಿಂದಾಗಿ ಪಂದ್ಯದ ವೀಕ್ಷಣೆ ಹೆಚ್ಚಾಗುವುದರಿಂದ ಕ್ರೀಡಾ ವಾಹಿನಿಗಳು ದುಬಾರಿ ಮೊತ್ತದ ಪ್ಯಾಕೇಜ್ ನೀಡುತ್ತಿವೆ.
20 ವರ್ಷಗಳ ಕಾಲ ಆಡಿರುವುದರಿಂದ ಬ್ರಾಡ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅನುಭವದ ಜೊತೆ ವಿವರಣೆ ಹೇಳುವುದರಿಂದ ವೀಕ್ಷಕರಿಗೆ ಪಂದ್ಯ ಇಷ್ಟವಾಗಲಿದೆ ಎಂದು ಫಾಕ್ಸ್ ಸ್ಫೋರ್ಟ್ಸ್ ಈ ಡೀಲ್ ಬಗ್ಗೆ ಪ್ರತಿಕ್ರಿಯಿಸಿದೆ.
Excited, but a lot of unfinished business on the field with the @Buccaneers #LFG https://t.co/FwKlQp02Hi
— Tom Brady (@TomBrady) May 10, 2022
ಟ್ವಿಟ್ಟರ್‌ನಲ್ಲಿ ಬ್ರಾಡಿ ಅವರನ್ನು 27 ಲಕ್ಷ ಮಂದಿ ಫಾಲೋ ಮಾಡುತ್ತಿದ್ದರೆ ಫೇಸ್‌ಬುಕ್‌ನಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 1.2 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.