ಬೆಂಗಳೂರು: ನಿರ್ದೇಶಕ ರಾಘವ್ ವಿನಯ್ ನವೆಂಬರ್ ನಲ್ಲಿ ‘ಟಾಮ್ ಅಂಡ್ ಜೆರ್ರಿ’ ಕಥೆ ಹೇಳಲಿದ್ದಾರೆ. ಟಾಮ್ ಅಂಡ್ ಜೆರ್ರಿ ಎಂದಾಕ್ಷಣ ನಮಗೆ ನಮ್ಮ ಬಾಲ್ಯ ಕಣ್ಮುಂದೆ ಬರುತ್ತೆ. ಇವತ್ತಿಗೂ ಟಾಮ್ ಅಂಡ್ ಜೆರ್ರಿ ಎಲ್ಲರ ಹಾರ್ಟ್ ಫೇವರೇಟ್. ಈ ಹೆಸರಿನಲ್ಲೀಗ ಸಿನಿಮಾವೊಂದು ಸೆಟ್ಟೇರಿ ಹೊಸ ಕಥೆ ಹೇಳ ಹೊರಟಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ, ಬಿಡುಗಡೆಯ ದಿನಾಂಕವನ್ನು ಹೊತ್ತು ಬಂದಿರುವ ಈ ಚಿತ್ರ ನ.12ಕ್ಕೆ ಬಿಡುಗಡೆಗೆ ಸಜ್ಜಾಗಿದೆ.
Advertisement
‘ಟಾಮ್ ಅಂಡ್ ಜೆರ್ರಿ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿದೆ. ರಾಘವ್ ವಿನಯ್ ಶಿವಗಂಗೆ ಈ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್. ಕೆಜಿಎಫ್ ಸಿನಿಮಾದ ಒನ್ ಆಫ್ ದಿ ಡೈಲಾಗ್ ರೈಟರ್ ಆಗಿ, ಖ್ಯಾತಿಗಳಿಸಿರುವ ಇವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಹಾಡುಗಳ ಮೂಲಕ ಸಿನಿ ಪ್ರಿಯರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಸೆನ್ಸಾರ್ ಅಂಗಳದಲ್ಲಿ ಯು/ಎ ಮುದ್ರೆ ಪಡೆದುಕೊಂಡಿದ್ದು, ಇನ್ನೇನಿದ್ರು ಚಿತ್ರಮಂದಿರಕ್ಕೆ ಕಾಲಿಡೋದೊಂದೇ ಬಾಕಿ ಇದೆ. ಇದನ್ನೂ ಓದಿ: ಜಿಮ್‍ನತ್ತ ಮುಖ ಮಾಡಿದ ಗೀತಾ ಭಾರತಿ ಭಟ್
Advertisement
‘ಟಾಮ್ ಅಂಡ್ ಜೆರ್ರಿ’ ಯೂತ್ ಓರಿಯೆಂಟೆಡ್ ಸಿನಿಮಾವಾಗಿದೆ. ಯುವ ಪೀಳಿಗೆಯನ್ನು ಸೆಳೆಯುವ ಸಬ್ಜೆಕ್ಸ್ ಸಿನಿಮಾದಲ್ಲಿದೆ. ಒಂದೊಳ್ಳೆಯ ಸಂದೇಶವೂ ಇದೆ. ಇಬ್ಬರು ಸ್ನೇಹಿತರ ನಡುವಿನ ಜಗಳ, ಕೋಪ, ತರಲೆ, ತಮಾಷೆ, ಪ್ರೀತಿ, ಆಕ್ಷನ್ ಎಲ್ಲವೂ ಒಳಗೊಂಡಿರುವ ಈ ಸಿನಿಮಾದಲ್ಲಿ ಗಂಟು ಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ, ಚೈತ್ರಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
Advertisement
Advertisement
ರಾಜು ಶೇರಿಗಾರ್ ಈ ಚಿತ್ರದ ನಿರ್ಮಾಪಕ. ಮೊದಲ ಬಾರಿ ಸಿನಿಮಾ ನಿರ್ಮಾಣಕ್ಕೆ ಇಳಿದಿರುವ ಇವರು ತಮ್ಮದೇ ರಿದ್ಧಿ ಸಿದ್ಧಿ ಫಿಲ್ಮ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಖಳನಟನಾಗಿ ಸೂರ್ಯ ಶೇಖರ್ ಮಿಂಚಿದ್ದು, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ,ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು
ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಒಂದಕ್ಕಿಂತ ಒಂದು ಹಾಡುಗಳು ಡಿಫ್ರೆಂಟ್ ಆಗಿ ಮೂಡಿ ಬಂದಿವೆ. ಈಗಾಗಲೇ ಸಿದ್ ಶ್ರೀರಾಮ್ ದನಿಯಲ್ಲಿ ಮೂಡಿ ಬಂದ ‘ಹಾಯಾಗಿದೆ ಎದೆಯೊಳಗೆ’ ಹಾಡು ಮ್ಯಾಜಿಕ್ ಮಾಡಿದ್ದು, ಎಲ್ಲರ ಫೇವರೇಟ್ ಆಗಿದೆ. ಉಳಿದಂತೆ ಸಂಕೇತ್ ಎಂವೈಎಸ್ ಕ್ಯಾಮೆರಾ ನಿರ್ದೇಶನ, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ‘ಟಾಮ್ ಅಂಡ್ ಜೆರ್ರಿ’ ಚಿತ್ರಕ್ಕಿದೆ.