ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟಿವ್ ಆಗಿರುವ ನಟಿ ಜ್ಯೋತಿ ರೈ ಆಗಾಗ ಬಗೆ ಬಗೆಯ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಅವರ ಫೋಟೋಗಳಿಗೆ ಮನಸೋಲದವರೇ ಇಲ್ಲ. ಕನ್ನಡದ ಈ ನಟಿ ಈಗ ಟಾಲಿವುಡ್ ಕಡೆ ಮುಖ ಮಾಡಿದ್ದಾರೆ.
View this post on Instagram
ತೆಲುಗು ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿರುವ ಸುಕು ಪೂರ್ವಜ್ ಅವರ ಜೊತೆ ಎರಡನೇ ಮದುವೆಯಾಗಿದ್ದಾರೆ ಜ್ಯೋತಿ ರೈ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನ ಹಂಚಿಕೊಳ್ಳುವುದರ ಜೊತೆಗೆ ತಮ್ಮ ಸಿನಿಮಾಗಳ ಪ್ರಮೋಷನ್ ಕೂಡಾ ಮಾಡಿಕೊಳ್ಳುತ್ತಾರೆ.
ಕಿಲ್ಲರ್ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದ ಫೈರ್ ಅಂಡ್ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಕಿಲ್ಲರ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಜ್ಯೋತಿ ರೈ ಕಾಣಿಸಿಕೊಂಡಿದ್ದಾರೆ. ಸೂಪರ್ ವುಮನ್ ಪಾತ್ರದಲ್ಲಿ ಜ್ಯೋತಿ ರೈ ಗಮನ ಸೆಳೆಯುತ್ತಿದ್ದಾರೆ.
