ಬೆಂಗಳೂರು: ಫ್ಲೈಓವರ್ ಸೇರಿದಂತೆ ಶೇ.25% ರಷ್ಟು ಟೋಲ್ ಸುಂಕವನ್ನು ಎನ್‍ಎಚ್‍ಐಎ (NHIA) ಹೆಚ್ಚಳ ಮಾಡಿದೆ.
Advertisement
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಇದುವರೆಗೆ 20 ರೂಪಾಯಿ ಟೋಲ್ ನೀಡಿ ಫ್ಲೈಓರ್ ಬಳಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ 5 ರೂಪಾಯಿ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಶಾಲೆಗಳಿಗೂ ಸ್ಕೂಲ್ ಬಸ್ ವ್ಯವಸ್ಥೆ
Advertisement
Advertisement
ಜುಲೈ 1 ರಿಂದ ಫ್ಲೈಓವರ್ ಬಳಸಿದರೆ ದ್ವಿಚಕ್ರ ವಾಹನ ಸವಾರರಿಗೆ 25 ಸಿಂಗಲ್ ಟಿಕೆಟ್ ನೀಡಲಾಗುತ್ತಿದೆ. 35 ರೂಪಾಯಿ ನೀಡಿದರೆ 12 ಗಂಟೆಯ ವರೆಗೆ ಫ್ಲೈಓವರ್ ಬಳಸಬಹುದು. ವಾಣಿಜ್ಯ ಸಂಬಂಧಿತ ವಾಹನಗಳಿಗೂ ಭಾರೀ ಟ್ಯಾಕ್ಸ್ ವಿಧಿಸಲಾಗಿದೆ. ಕಾರು 60, ವಾಣಿಜ್ಯ ವಾಹನ 85, ಟ್ರಕ್, ಬಸ್ 170, ಭಾರೀ ವಾಹನ 335 (ಸಿಂಗಲ್ ಪಾಸ್). ಒಂದು ದಿನದ ಪಾಸ್ _ದ್ವಿಚಕ್ರವಾಹನ 35, ಕಾರು 90, ವಾಣಿಜ್ಯ ವಾಹನ, 125, ಟ್ರಕ್ ,ಬಸ್ 250, ಭಾರೀ ವಾಹನ 505 ರೂ. ಆಗಿರುತ್ತದೆ.
Advertisement
ಒಟ್ಟಿನಲ್ಲಿ ಪೀಣ್ಯ ಫ್ಲೈಓವರ್ ಸರಿ ಇರದಿದ್ದರೂ ಜನಸಾಮಾನ್ಯರಿಗೆ ಟೋಲ್ ಶಾಕ್ ನೀಡಲಾಗಿದೆ. ಪ್ರತಿ ವಾಹನಗಳಿಗೆ 5 ರೂಪಾಯಿ ಹೆಚ್ಚಿನ ಶುಲ್ಕ ಪಾವತಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ನೀಡಿದೆ. ಪೀಣ್ಯ ಫ್ಲೈಓವರ್ ತಾಂತ್ರಿಕ ಸಮಸ್ಯೆಯಾದರೆ ಮತ್ತೊಂದೆಡೆ ಟೋಲ್ ಬರೆ ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.