ಬೆಂಗಳೂರು: ಸ್ಮಾರ್ಟ್ ಮೀಟರ್ ವಿರುದ್ಧ ಬೆಂಗಳೂರಿನ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಕರೆಂಟ್ ಬಿಲ್ ಹೆಚ್ಚು ಬರುತ್ತಿದ್ದು, ಅದರ ಜೊತೆಗೆ ಮತ್ತೆ ಈಗ ಲೂಟಿ ಮಾಡುವ ಪ್ಲ್ಯಾನ್ ಎಂದು ಕಿಡಿಕಾರಿದ್ದಾರೆ.
ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ವ್ಯವಸ್ಥೆಯನ್ನು ಇಂಧನ ಇಲಾಖೆ ಜಾರಿಗೊಳಿಸಲಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸ್ಮಾರ್ಟ್ ಮೀಟರ್ ಅಳವಡಿಕೆ ಸಂಬಂಧ 2024ರ ಮಾ.6 ರಂದು ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಹಂತಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಕೈಗೊಳ್ಳಲಾಗಿದೆ.
ಪಿಂಚಣಿ ಗ್ರಾಚ್ಯುಟಿ ಹೆಸರಿನಲ್ಲಿ ಗ್ರಾಹಕರಿಗೆ ಬರೆ ಹಾಕಾಯ್ತು. ಈಗ ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ಲೂಟಿ ಕೆಲಸ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರತಿ ತಿಂಗಳು ನಿರ್ವಹಣೆ ಹೆಸರಿನಲ್ಲಿ ಇನ್ಮುಂದೆ ಬಿಲ್ ಜೊತೆ ದುಡ್ಡು ಕಟ್ಟಬೇಕು. ನಿಗದಿತ ಶುಲ್ಕದ ಜೊತೆಗೆ ಸ್ಮಾರ್ಟ್ ಮೀಟರ್ ನಿರ್ವಹಣೆಗೂ ಗ್ರಾಹಕರು ಹಣ ಕೊಡಬೇಕು.
ಒಂದು ಕೈಯಲ್ಲಿ ಗೃಹಜ್ಯೋತಿ ಗಿಫ್ಟ್ ಕೊಟ್ಟು ಇನ್ನೊಂದು ಕೈಯಲ್ಲಿ ದುಡ್ಡು ಕಿತ್ತುಕೊಳ್ಳುವ ತಂತ್ರವೇ ಇದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ ಬಳಿಕ ನಿಗದಿತ ಶುಲ್ಕದ ಜಾರ್ಜ್ ಜೊತೆಗೆ ಪ್ರತಿ ತಿಂಗಳು ಗ್ರಾಹಕ 75-118 ರೂ.ವರೆಗೆ ಕಟ್ಟಬೇಕು.
ಸ್ಮಾರ್ಟ್ ಮೀಟರ್ ನಿರ್ವಹಣೆ ಮಾಡೋರಿಗೆ ಪ್ರತಿ ತಿಂಗಳು ತಿಂಗಳು ದುಡ್ಡು ಕಟ್ಟಬೇಕು. ಫಿಕ್ಸೆಡ್ ಚಾರ್ಜ್ ಪ್ರತ್ಯೇಕ, ಇದರ ಜೊತೆ ಜೊತೆಗೆ ನಿರ್ವಹಣೆ ಹೆಸರಿನಲ್ಲಿಯೂ ಹಣ ವಸೂಲಿಗೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.